ತ್ರಿಗ್ರಾಹಿ ಯೋಗದಿಂದ ಈ ರಾಶಿಯವರ ಭಾಗ್ಯೋದಯ ! ಕೈ ಹಿಡಿದು ಮುನ್ನಡೆಸುವಳು ಧನಲಕ್ಷ್ಮೀ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 50 ವರ್ಷಗಳ ನಂತರ, ಸಿಂಹ ರಾಶಿಯಲ್ಲಿ ಬುಧ, ಮಂಗಳ ಮತ್ತು ಶುಕ್ರ ಗ್ರಹಗಳು ಸೇರುತ್ತಿವೆ. ಸಿಂಹ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುವುದರಿಂದ, ಕೆಲವು ರಾಶಿಯವರು ವಿಶೇಷ ಪ್ರಯೋಜನ ಪಡೆಯುತ್ತಾರೆ.
ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ಚಲನೆಯ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವನ್ನು ಶುಭ ಮತ್ತು ಅಶುಭ ಎರಡೂ ರೀತಿಯಲ್ಲಿ ಕಾಣಬಹುದು. ಹಿಂದೂ ಪಂಚಾಂಗದ ಪ್ರಕಾರ, ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿಕೊಂಡಾಗ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಧರ್ಮಗ್ರಂಥಗಳಲ್ಲಿ, ಈ ತ್ರಿಗ್ರಾಹಿ ಯೋಗವನ್ನು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮವು ಎಲ್ಲಾ ರಾಶಿಯವರ ಜೀವನದಲ್ಲಿ ಕಾಣಿಸುತ್ತದೆ.
ಯಾವ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ತ್ರಿಗ್ರಾಹಿ ಯೋಗ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 25, 2023 ರಂದು ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಿತ್ತು. ಸಿಂಹ ರಾಶಿಯನ್ನು ಸೂರ್ಯನ ಒಡೆತನದ ರಾಶಿ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ, ಸೂರ್ಯನ ಅಧಿಪತ್ಯದ ರಾಶಿಯಲ್ಲಿ ಮಂಗಳ, ಬುಧ ಮತ್ತು ಶುಕ್ರ ಗ್ರಹಗಳ ಸಂಯೋಗವಿದೆ. ಹೀಗಾಗಿ ಸಿಂಹರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 50 ವರ್ಷಗಳ ನಂತರ, ಸಿಂಹ ರಾಶಿಯಲ್ಲಿ ಬುಧ, ಮಂಗಳ ಮತ್ತು ಶುಕ್ರ ಗ್ರಹಗಳು ಸೇರುತ್ತಿವೆ. ಸಿಂಹ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುವುದರಿಂದ, ಕೆಲವು ರಾಶಿಯವರು ವಿಶೇಷ ಪ್ರಯೋಜನ ಪಡೆಯುತ್ತಾರೆ.
ಇದನ್ನೂ ಓದಿ : Weekly Horoscope: ಈ ವಾರ ಕೆಲವು ರಾಶಿಯವರಿಗೆ ಧನಯೋಗ, ಕೈ ತುಂಬಾ ಹಣ
ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹರಾಶಿಯಲ್ಲಿ ತ್ರಿಗ್ರಾಹಿ ಯೋಗ ನಿರ್ಮಾಣವಾಗುತ್ತಿರುವುದರಿಂದ ಮೇಷ ರಾಶಿಯವರಿಗೆ ಶುಭ ಫಲಗಳು ದೊರೆಯುತ್ತವೆ. ಈ ಸಮಯದಲ್ಲಿ, ಈ ರಾಶಿಯವರ ಜೀವನದಲ್ಲಿ ಸಂತೋಷ ನೆಲೆಯಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಲಾಭವಿರುತ್ತದೆ.
ಕುಂಭ ರಾಶಿ :
ಸಿಂಹ ರಾಶಿಯಲ್ಲಿ ಮೂರು ಗ್ರಹಗಳು ಒಟ್ಟಿಗೆ ಇರುವುದು ಕುಂಭ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಈ ಸಮಯವು ಲಾಭ ಗಳಿಸಲು ಅನುಕೂಲಕರವಾಗಿದೆ. ಇದು ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಇದನ್ನೂ ಓದಿ : 30 ವರ್ಷದ ಬಳಿಕ ಈ ರಾಶಿಗೆ ಅಷ್ಟೈಶ್ವರ್ಯ ತಂದ ಶನಿ: ಹಣದ ಮಳೆ ಗ್ಯಾರಂಟಿ- ಭಾಗ್ಯ ವೃದ್ಧಿ ಜೊತೆ ಉದ್ಯೋಗದಲ್ಲಿ ಬಡ್ತಿ, ಪ್ರಗತಿ
ಸಿಂಹ ರಾಶಿ :
ಸಿಂಹ ರಾಶಿಯಲ್ಲಿಯೇ ಮಂಗಳ, ಬುಧ ಮತ್ತು ಶುಕ್ರ ಸಂಯೋಗವಾಗಲಿದೆ. ಹಾಗಾಗಿ ಸಿಂಹ ರಾಶಿಯವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ವಿಶೇಷ ಫಲಗಳು ಸಿಗುತ್ತವೆ. ಜೀವನದಲ್ಲಿ ಸಂತೋಷವಿರುತ್ತದೆ. ವೈವಾಹಿಕ ಮತ್ತು ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆ ಇದೆ.
ತುಲಾ ರಾಶಿ :
ಮೂರು ಗ್ರಹಗಳ ಈ ಅಪರೂಪದ ಸಂಯೋಜನೆಯು ತುಲಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ತುಲಾ ರಾಶಿಯ ಜನರು ಸಮಸ್ಯೆಯಿಂದ ಮುಕ್ತರಾಗುತ್ತಾರೆ. ಇದರೊಂದಿಗೆ, ತ್ರಿಗ್ರಾಹಿ ಯೋಗವು ನಿಮಗೆ ಹಣವನ್ನು ಗಳಿಸುವಂತೆ ಮಾಡುತ್ತದೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಕೇಳಿ ಬರುವುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ