ಬೆಂಗಳೂರು : ಈ ವರ್ಷ ಮಾರ್ಚ್ 22 ರಂದು ಯುಗಾದಿ ಆಚರಿಸಲಾಗುವುದು. ಅಂದರೆ ಅ ದಿನದಿಂದ ಹಿಂದೂ ನವ ವರ್ಷ ಆರಂಭವಾಗುವುದು. ಯುಗಾದಿಯಿಂದ ಜಾತಕ ಫಲ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಮಾರ್ಚ್ 22 ಬುಧವಾರ. ಜ್ಯೋತಿಷ್ಯದ ಪ್ರಕಾರ ಬುಧ ಈ ಹೊಸ ವರ್ಷದ ರಾಜ ಮತ್ತು ಶುಕ್ರ ಈ ಹೊಸ ವರ್ಷದ ಮಂತ್ರಿ. 


COMMERCIAL BREAK
SCROLL TO CONTINUE READING

ಈ ಬಾರಿ ವಿಕ್ರಮ್ ಸಂವತ್ 2080ರಲ್ಲಿ ಆರಂಭವಾಗಲಿದೆ. ಹಿಂದೂ ಹೊಸ ವರ್ಷದ ಆರಂಭದೊಂದಿಗೆ, ಅನೇಕ ರಾಶಿಯವರ ಜೀವನದಲ್ಲಿ ಕೆಲವೊಂದು ಹೊಸತುಗಳು ಇರಬಹುದು. ಹೊಸ ವರ್ಷದೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಹೊಸ ಯುಗ ಆರಂಭವಾಗಲಿದೆ. ಹಿಂದೂ ಹೊಸ ವರ್ಷ ಎಲ್ಲಾ ರಾಶಿಯವರಿಗೂ  ವಿಶೇಷವಾಗಿರಲಿದೆ. ಅದರಲ್ಲೂ ಮೂರು ರಾಶಿಯವರ ಜೀವನದ ಒಳ್ಳೆಯ ದಿನಗಳು ಈ ದಿನದೊಂದಿಗೆ ಆರಂಭವಾಗಲಿದೆ. 


ಇದನ್ನೂ ಓದಿ : Chanakya Niti : ಈ 5 ವಿಷಯಗಳನ್ನು ಯಾವಾಗಲು ನೆನಪಿನಲ್ಲಿಡಿ, ಯಶಸ್ಸು - ಪ್ರಗತಿ ನಿಮ್ಮದಾಗಿರುತ್ತೆ!


ಸಿಂಹ ರಾಶಿ : ಹಿಂದೂ ಹೊಸ ವರ್ಷವು ಸಿಂಹ ರಾಶಿಯವರ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಬೆನ್ನಿಗಿರಲಿದೆ.  ಯಾವುದೇ ಕೆಲಸವನ್ನು ಯಾವ ಹಿಂಜರಿಕೆ ಇಲ್ಲದೆ ಮಾಡಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಜನರು ಲಾಭವನ್ನು ಪಡೆಯುತ್ತಾರೆ. ಹಳೆಯ ಹೂಡಿಕೆಗಳಿಂದ ಈ ಸಮಯದಲ್ಲಿ ಪ್ರಯೋಜನವಾಗಲಿದೆ. ಭೂ-ನಿರ್ಮಾಣ ಇತ್ಯಾದಿ ವಿಷಯದಲ್ಲಿ ಸುಧಾರಣೆ ಕಂಡುಬರುತ್ತದೆ. ಈ ಅವಧಿಯಲ್ಲಿ, ಧಾರ್ಮಿಕ ಪ್ರಯಾಣದ ಅವಕಾಶಗಳು ಸೃಷ್ಟಿಯಾಗುತ್ತವೆ. 


ಮಿಥುನ ರಾಶಿ: ಹಿಂದೂ ಹೊಸ ವರ್ಷವು ನಿಮ್ಮ ಪಾಲಿಗೆ ಅದೃಷ್ಟವನ್ನೇ ಹೊತ್ತು ತರಲಿದೆ. ಮಿಥುನ ರಾಶಿಯವರು ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ಲಾಭವಾಗುವುದು. ಯಾವ ವ್ಯವಹಾರವೇ ಆಗಿರಲಿ ಅದರಲ್ಲಿ  ಅದೃಷ್ಟ ಒಲಿದು ಬರಲಿದೆ. ಹಿಂದೂ ಹೊಸ ವರ್ಷದಲ್ಲಿ, ಮಿಥುನ ರಾಶಿಯವರು ಶುಭ ಫಲಿತಾಂಶಗಳನ್ನೇ ಪಡೆಯಲಿದ್ದಾರೆ. ಸೂರ್ಯ ದೇವರು ಕೂಡಾ ನಿಮ್ಮ ಜಾತಕದಲ್ಲಿ ಅನುಕೂಲಕರ ಸ್ಥಳದಲ್ಲಿ ಇರಲಿದ್ದಾರೆ. ಈ ಸಮಯದಲ್ಲಿ ನೀವು ಮಾಡುವ ಹೂಡಿಕೆಯಿಂದ ಲಾಭವಾಗುವುದು. ಹೊಸ ವ್ಯಾಪಾರ ಒಪ್ಪಂದ ಅಂತಿಮವಾಗಬಹುದು. 


ಇದನ್ನೂ ಓದಿ : Surya Gochar 2023 : ರಾಶಿ ಬದಲಿಸಲಿದ್ದಾನೆ ಸೂರ್ಯ : ಹನ್ನೆರಡು ರಾಶಿಯವರೇ ಎಚ್ಚರ..!


ಧನು ರಾಶಿ:  ಹಿಂದೂ ಹೊಸ ವರ್ಷವು ಧನು ರಾಶಿಯವರಿಗೆ  ಅನುಕೂಲಕರವಾಗಿರಲಿದೆ. ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಇದರೊಂದಿಗೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಅಧಿಕಾರಿಗಳಿಂದ ಬೆಂಬಲ ಮತ್ತು ಪ್ರೋತ್ಸಾಹ ಸಿಗಲಿದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.