Sun Transit 2023: ಸೂರ್ಯನ ಸಂಕ್ರಮಣದಿಂದ ಈ ರಾಶಿಯವರಿಗೆ ಧನಹಾನಿ ಸಂಭವ!

ಸೂರ್ಯ ಗೋಚರ 2023: ಸೂರ್ಯನ ರಾಶಿ ಬದಲಾವಣೆಯಿಂದ ವೃಶ್ಚಿಕ ರಾಶಿಯ ಜನರು ವೃತ್ತಿ ಮತ್ತು ಆರೋಗ್ಯದಲ್ಲಿ ಜಾಗರೂಕರಾಗಿರಬೇಕು. ಹಣದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ನಷ್ಟವಾಗಬಹುದು. ವ್ಯಾಪಾರ ವರ್ಗದವರು ಸರ್ಕಾರಿ ಅಧಿಕಾರಿಯೊಂದಿಗೆ ಬಹಳ ಮೃದುವಾಗಿ ಮಾತನಾಡಬೇಕಾಗುತ್ತದೆ.  

Written by - Puttaraj K Alur | Last Updated : Mar 14, 2023, 08:09 PM IST
  • ಮಾರ್ಚ್ 15ರಂದು ಸೂರ್ಯ ದೇವರು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ
  • ವೃಶ್ಚಿಕ ರಾಶಿಯ ಜನರು ವೃತ್ತಿ, ಹಣಕಾಸು & ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು
  • ಹಣ ಹೂಡಿಕೆ ಮಾಡುವ ಮೊದಲು ಎಲ್ಲಾ ಅಂಶಗಳನ್ನು ಚೆನ್ನಾಗಿ ಪರಿಗಣಿಸಿ ನಂತರ ಹೂಡಿಕೆ ಮಾಡಬೇಕು
Sun Transit 2023: ಸೂರ್ಯನ ಸಂಕ್ರಮಣದಿಂದ ಈ ರಾಶಿಯವರಿಗೆ ಧನಹಾನಿ ಸಂಭವ!  title=
ಸೂರ್ಯ ಗೋಚರ 2023

ನವದೆಹಲಿ: ಮಾರ್ಚ್ 15ರಂದು ಸೂರ್ಯ ದೇವರು ಕುಂಭ ರಾಶಿಯಿಂದ ಮೀನ ಅಂದರೆ ಗುರುವಿನ ಮನೆಗೆ ಪ್ರವೇಶಿಸುತ್ತಾನೆ. ಏಪ್ರಿಲ್ 14ರವರೆಗೆ ಸೂರ್ಯನು ಮೀನ ರಾಶಿಯಲ್ಲಿ ಇರುತ್ತಾನೆ. ಸೂರ್ಯನ ಈ ರಾಶಿಯಲ್ಲಿರುವ ಕಾರಣ ವೃಶ್ಚಿಕ ರಾಶಿಯ ಜನರು ವೃತ್ತಿ, ಹಣಕಾಸು ಮತ್ತು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. 

ವೃಶ್ಚಿಕ ರಾಶಿಯ ಉದ್ಯೋಗಿಗಳು ಈ 1 ತಿಂಗಳ ಅವಧಿಯಲ್ಲಿ ಕೆಲಸದ ಸ್ಥಳದಲ್ಲಿ ಕೀಳರಿಮೆ ಅನುಭವಿಸಬಹುದು. ಹೀಗಾಗಿ ನಿಮ್ಮ ಕೆಲಸವನ್ನು ನಂಬಿರಿ ಮತ್ತು ಆ ನಂಬಿಕೆಯ ಆಧಾರದ ಮೇಲೆ ಮುಂದುವರಿಯಿರಿ.

ಹಣ ಹೂಡಿಕೆ ಮಾಡುವ ಮೊದಲು ಎಲ್ಲಾ ಅಂಶಗಳನ್ನು ಚೆನ್ನಾಗಿ ಪರಿಗಣಿಸಿ ನಂತರ ಹೂಡಿಕೆ ಮಾಡಿ. ಈ ತಿಂಗಳು ಆರ್ಥಿಕ ನಷ್ಟದ ಸಾಧ್ಯತೆ ಇದೆ. ವ್ಯಾಪಾರಿ ವರ್ಗದವರು ಸರ್ಕಾರಿ ಅಧಿಕಾರಿಯೊಂದಿಗೆ ಬಹಳ ಮೃದುವಾಗಿ ಮಾತನಾಡಬೇಕಾಗುತ್ತದೆ. ಅವರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಅವರೊಂದಿನ ವಿವಾದವು ಭವಿಷ್ಯದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು. ನಿಮ್ಮ ಸಂಸ್ಥೆಯಲ್ಲಿರುವ ಉದ್ಯೋಗಿಗಳಿಂದ ಉತ್ತಮ ಕೆಲಸ ಪಡೆಯಲು ಅವರೊಂದಿಗೆ ಮಾತನಾಡುವ ಮತ್ತು ವ್ಯವಹರಿಸುವ ಉತ್ತಮ ಮಾರ್ಗವನ್ನು ಹೊಂದಿರಬೇಕು.

ಇದನ್ನೂ ಓದಿ: ಶನಿ ಉದಯದಿಂದ ಶಶ ಮಹಾಪುರುಷ ರಾಜಯೋಗ ಸೃಷ್ಟಿ: ಇನ್ಮುಂದೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರ!

ಅನಾವಶ್ಯಕ ಭಯದಿಂದ ಯುವಕರು ತೊಂದರೆಗೊಳಗಾಗಬಹುದು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರು ನ್ಯಾಯಾಲಯದ ಮೊರೆ ಹೋಗಬೇಕಾಗಬಹುದು. ವಿದ್ಯಾರ್ಥಿ ವರ್ಗಕ್ಕೆ ಅಧ್ಯಯನ ಮಾಡಬೇಕು ಅನಿಸುವುದಿಲ್ಲ. ನಿಮಗೆ ಅಧ್ಯಯನ ಮಾಡಲು ಮನಸ್ಸಿಲ್ಲದಿದ್ದರೂ, ಅಧ್ಯಯನ ಮಾಡಿ ಮತ್ತು ಪರಿಷ್ಕರಿಸಿ. ಸತತ ಅಭ್ಯಾಸದಿಂದ ಯಶಸ್ಸು ಸಿಗಲಿದೆ.

ಅನಗತ್ಯವಾಗಿ ಶಾಪಿಂಗ್ ಮಾಡುವುದರಿಂದ ನಿಮ್ಮ ಜೇಬಿಗೆ ಭಾರವಾಗಬಹುದು. ಮನೆಯ ಬಜೆಟ್ ಸಿದ್ಧಪಡಿಸುವ ಮೂಲಕ ಖರೀದಿ ಮಾಡಿ. ಮಗುವಿನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರ ಆಹಾರದ ಬಗ್ಗೆ ಜಾಗರೂಕರಾಗಿರಿ. ಪೌಷ್ಟಿಕ ಆಹಾರದ ಕೊರತೆಯಿಂದ ದೈಹಿಕ ದೌರ್ಬಲ್ಯ ಅನುಭವಿಸಬಹುದು. ಇದರಿಂದ ಮಗುವಿಗೆ ಅನೇಕ ರೋಗಗಳು ಸುತ್ತುವರಿಯಬಹುದು. ಅನಗತ್ಯ ಪ್ರಯಾಣ ತಪ್ಪಿಸಬೇಕು. ಪ್ರಯಾಣ ಮಾಡುವಾಗ ಅಪರಿಚಿತರೊಂದಿಗೆ ಬೆರೆಯುವುದನ್ನು ತಪ್ಪಿಸಿ. ಪ್ರಯಾಣದ ಸಮಯದಲ್ಲಿ ಸರಕುಗಳು ಕಳ್ಳತನವಾಗುವ ಸಾಧ್ಯತೆಯಿದೆ.

ದೈಹಿಕ ಮತ್ತು ಮಾನಸಿಕ ಬಳಲಿಕೆಯಿಂದ ಮನಸ್ಸು ಕೆಲಸದಲ್ಲಿ ತೊಡಗುವುದಿಲ್ಲ. ಕೆಲಸದ ಒತ್ತಡ ಆರೋಗ್ಯವನ್ನು ಹಾಳು ಮಾಡುತ್ತದೆ. ನಿಮ್ಮ ಸ್ವಂತ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಭಾರೀ ಆಹಾರದಿಂದ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ: Horoscope Today : ಇಂದು ಈ ರಾಶಿಯವರ ಮೇಲೆ ಆಂಜನೇಯನ ಕೃಪೆ, ಮುಟ್ಟಿದ್ದು ಚಿನ್ನವಾಗುವ ದಿನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News