Ugadi Horoscope : ಈ ರಾಶಿಯವರ ಜೀವನದಲ್ಲಿ ಹೊಸ ಹೊನಲನ್ನೇ ಹೊತ್ತು ತರಲಿದೆ ಯುಗಾದಿ
Ugadi Horoscoe 2023 :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ಗ್ರಹಗಳ ರಾಜ ಮತ್ತು ಮಂತ್ರಿಗಳ ಕಾರಣದಿಂದಾಗಿ, ಸ್ಥಿತಿ ತುಂಬಾ ಉತ್ತಮವಾಗಿರುವುದಿಲ್ಲ. ಇದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
Ugadi Horoscoe 2023 : ಹೊಸ ಹಿಂದೂ ವರ್ಷ ಮಾರ್ಚ್ 22 ರಿಂದ ಆರಂಭವಾಗುತ್ತದೆ. ಮಾರ್ಚ್ 22 ರಂದು ಯುಗಾದಿ ಸಂಭ್ರಮ. ಹೊಸ ವರ್ಷದ ರಾಜ ಬುಧ, ಮಂತ್ರಿ ಶುಕ್ರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ಗ್ರಹಗಳ ರಾಜ ಮತ್ತು ಮಂತ್ರಿಗಳ ಕಾರಣದಿಂದಾಗಿ, ಸ್ಥಿತಿ ತುಂಬಾ ಉತ್ತಮವಾಗಿರುವುದಿಲ್ಲ. ಇದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
ಹೊಸ ವರ್ಷದಲ್ಲಿ ರೂಪುಗೊಳ್ಳುವುದು ಅಪರೂಪದ ಯೋಗ :
30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿರುವುದರೊಂದಿಗೆ ನವ ವರ್ಷ ಪ್ರಾರಂಭವಾಗುತ್ತಿದೆ. ಅದರ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಇರುತ್ತದೆ. ಮತ್ತೊಂದೆಡೆ, ಮಾರ್ಚ್ 22 ರಂದು, ಹಿಂದೂ ಹೊಸ ವರ್ಷ ಪ್ರಾರಂಭವಾದ ಒಂದು ತಿಂಗಳ ನಂತರ, ಅಂದರೆ ಏಪ್ರಿಲ್ 22 ರಂದು, ಗುರುವು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಗುರು 12 ವರ್ಷಗಳ ನಂತರ ಮೇಷ ರಾಶಿಗೆ ಪ್ರವೇಶ ಮಾಡುತ್ತಿರುವುದು. ಯುಗಾದಿ ದಿನದಿಂದ ಕೆಲವು ರಾಶೋಇಯವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿದೆ.
ಇದನ್ನೂ ಓದಿ : Vastu Tips : ಮನೆ ಅಥವಾ ಕಛೇರಿಯ ಈ ದಿಕ್ಕಿನಲ್ಲಿ ಕಂಪ್ಯೂಟರ್ ಇರಿಸಿ, ಯಶಸ್ಸು ನಿಮ್ಮನ್ನು ಮುತ್ತಿಕ್ಕುತ್ತದೆ!
ಹಿಂದೂ ಹೊಸ ವರ್ಷವು ಈ ರಾಶಿಯವರ ಜೀವನವನ್ನು ಮಂಗಳಕರವಾಗಿರುತ್ತದೆ :
ಮಿಥುನ ರಾಶಿ : ನಿಮ್ಮ ವ್ಯಕ್ತಿತ್ವದ ಪ್ರಭಾವ ಹೆಚ್ಚಾಗಲಿದೆ. ಮಹತ್ವದ ಕೆಲಸಗಳು ನಡೆಯಲಿವೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ.
ಸಿಂಹ ರಾಶಿ : ನೀವು ಮಾಡುವ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಉದ್ಯೋಗದಲ್ಲಿ ಇರುವವರಿಗೆ ವಿಶೇಷ ಯಶಸ್ಸು ಸಿಗುವುದು. ಆಸ್ತಿ ವಿಚಾರವಾಗಿ ವ್ಯವಹಾರ ಮಾಡುವಿರಿ. ಏನೇ ಕೆಲಸ ಮಾಡಿದರೂ ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.
ಇದನ್ನೂ ಓದಿ : Shukra Gochar : ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಹಣದ ಮಳೆ ; ಪೂರ್ಣಗೊಳ್ಳಲಿದೆ ಸ್ಥಗಿತಗೊಂಡ ಕೆಲಸ!
ತುಲಾ ರಾಶಿ : ದೊಡ್ಡ ಗುರಿಗಳತ್ತ ಗಮನ ಹರಿಸಿದರೆ, ಸಾಕಷ್ಟು ಪ್ರಗತಿ ಪ್ರಾಪ್ತಿಯಾಗುತ್ತದೆ. ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ. ವೃತ್ತಿ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಯಶಸ್ಸು ನಿಮ್ಮ ಹೆಗಲೇರುವುದು. ವಿರೋಧಿಗಳು ನಿಮ್ಮ ಮುಂದೆ ಮಂಡಿಯೂರುತ್ತಾರೆ. ನಿಂತು ಹೋಗಿರುವ ಕೆಲಸ ವೇಗ ಪಡೆಯುವುದು.
ಧನು ರಾಶಿ : ಸಮಯ ಉತ್ತಮವಾಗಿರಲಿದೆ. ಧೈರ್ಯ ಮತ್ತು ಶೌರ್ಯ ಹೆಚ್ಚುತ್ತಲೇ ಇರುತ್ತದೆ. ಅನೇಕ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಅದು ನಿಮ್ಮ ಜೀವನವನ್ನು ಸಂತೋಷದಿಂದ ತುಂಬುತ್ತದೆ. ಸ್ನೇಹಿತರು ಮತ್ತು ಆತ್ಮೀಯರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹೊಸ ಕಾರ್ಯಗಳು ಯಶಸ್ವಿಯಾಗುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.