12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!

Surya Gochara In Kumbha Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮುಂದಿನ 12 ಗಂಟೆಗಳ ಬಳಿಕ ಗ್ರಹಗಳ ರಾಜ  ಸೂರ್ಯ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜಾತಕದವರಿಗೆ ವಿಶೇಷ ಧನಲಾಭದ ಸಾಧ್ಯತೆಗಳಿದ್ದು, ಅವರ ಜೀವನದಲ್ಲಿ ಅಭಿವೃದ್ಧಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 

Written by - Nitin Tabib | Last Updated : Feb 14, 2023, 06:56 PM IST
  • ಕೇವಲ 12 ಗಂಟೆಗಳ ಬಳಿಕ ಸೂರ್ಯ ದೇವನ ಕುಂಭ ರಾಶಿ ಪ್ರವೇಶ ನೆರವೇರಲಿದೆ.
  • ಇದು ಮಾನವ ಜೀವನ ಹಾಗೂ ಇಡೀ ಭೂಮಿಯ ಮೇಲೆ ತನ್ನ ಪ್ರಭಾವವನ್ನು ಬೀರಲಿದೆ.
  • ಆದರೆ 3 ರಾಶಿಗಳ ಜನರ ಜೀವನದಲ್ಲಿ ಮಾತ್ರ ಇದರಿಂದ ಅಪಾರ ಧನಲಾಭ ಹಾಗೂ ಭಾಗ್ಯೋದಯದ ಯೋಗ ಪ್ರಾಪ್ತಿಯಾಗಲಿದೆ.
12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!  title=
ಸೂರ್ಯ ಗೋಚರ

Surya Gochar In Aquarius: ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ವೈದಿಕ ಜೋತಿಷ್ಯದಲ್ಲಿ ಸೂರ್ಯ ಆತ್ಮ, ಪಿತೃ, ಆಡಳಿತ ಹಾಗೂ ಸರ್ಕಾರಿ ನೌಕರಿಕ ಕಾರಕ ಗ್ರಹ ಎಂದು ಭಾವಿಸಲಾಗಿದೆ. ಸೂರ್ಯ ದೇವ ಯಾವಾಗ ತನ್ನ ರಾಶಿಯನ್ನು ಬದಲಾಯಿಸುತ್ತಾನೋ ಅಗ ಈ ಸೂರ್ಯಗೊಚರದ ಪ್ರಭಾವ ವ್ಯಕ್ತಿ, ದೇಶ ಹಾಗೂ ವಿಶ್ವದ ಮೇಲೆ ಗೋಚರಿಸುತ್ತದೆ. ಇನ್ನು ಕೇವಲ 12 ಗಂಟೆಗಳ ಬಳಿಕ ಸೂರ್ಯ ದೇವನ ಕುಂಭ ರಾಶಿ ಪ್ರವೇಶ ನೆರವೇರಲಿದೆ. ಇದು ಮಾನವ ಜೀವನ ಹಾಗೂ ಇಡೀ ಭೂಮಿಯ ಮೇಲೆ ತನ್ನ ಪ್ರಭಾವವನ್ನು ಬೀರಲಿದೆ. ಆದರೆ 3 ರಾಶಿಗಳ ಜನರ ಜೀವನದಲ್ಲಿ ಮಾತ್ರ ಇದರಿಂದ ಅಪಾರ ಧನಲಾಭ ಹಾಗೂ ಭಾಗ್ಯೋದಯದ ಯೋಗ ಪ್ರಾಪ್ತಿಯಾಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಮೇಷ ರಾಶಿ
ಸೂರ್ಯನ ಈ ಕುಂಭ ಗೋಚರ ಮೇಷ ರಾಶಿಜನರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ಸೂರ್ಯದೇವನು ನಿಮ್ಮ ರಾಶಿಯ ಏಕಾದಶ ಭಾವದಲ್ಲಿ ಸಂಚರಿಸಲಿದ್ದಾನೆ.  ಇದನ್ನು ಆದಾಯ ಮತ್ತು ಲಾಭದ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹಣದ ಬಗ್ಗೆ ಕೆಲವು ನಿರ್ಧಾರಗಳು ಈ ಸಮಯದಲ್ಲಿ ನಿಮ್ಮ ಲಾಭದಾಯಕ ಸಾಬೀತಾಗಲಿವೆ. ಅಲ್ಲದೆ, ಹಳೆಯ ಹೂಡಿಕೆಗಳಿಂದ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಇದೇ ವೇಳೆ ಇದರಿಂದ ನಿಮ್ಮ  ಆದಾಯದಲ್ಲಿ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ. ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಅಥವಾ ಲಾಟರಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ಸಮಯವು ಅನುಕೂಲಕರವಾಗಿರುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.

ಇದನ್ನೂ ಓದಿ-February 27 ರಿಂದ ಗ್ರಹಗಳ ರಾಜಕುಮಾರನ ವಿಶೇಷ ಕೃಪೆಯಿಂದ ಈ 3 ರಾಶಿಗಳ ಭಾಗ್ಯೋದಯ!

ವೃಷಭ ರಾಶಿ
ಸೂರ್ಯ ದೇವರ ಈ ರಾಶಿ ಬದಲಾವಣೆ ನಿಮಗೆ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಸೂರ್ಯದೇವನು ನಿಮ್ಮ ರಾಶಿಯ ಕರ್ಮಭಾವದಲ್ಲಿ ಸಾಗಲಿದ್ದಾನೆ. ಅದಕ್ಕಾಗಿಯೇ ಉದ್ಯಮಿಗಳು ಈ ಅವಧಿಯಲ್ಲಿ ಲಾಭವನ್ನು ಪಡೆಯಬಹುದು. ಅಲ್ಲದೆ, ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಇದೇ ವೇಳೆ ಉದ್ಯೋಗಿಗಳಿಗೆ ಇನ್ಕ್ರಿಮೆಂಟ್ ಮತ್ತು ಬಡ್ತಿಯ ಭಾಗ್ಯ ಪ್ರಾಪ್ತಿಯಾಗಲಿದೆ.ನೀವು ಕೋರಿದ ಸ್ಥಳಕ್ಕೆ ವರ್ಗಾವನೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಮಾಧ್ಯಮ, ಫಿಲ್ಮ್ ಲೈನ್, ಫ್ಯಾಷನ್ ಡಿಸೈನಿಂಗ್ ಮತ್ತು ಕಲೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಸಮಯವು ಉತ್ತಮವಾಗಿದೆ.

ಇದನ್ನೂ ಓದಿ-48 ಗಂಟೆಗಳ ಬಳಿಕ ಶುಕ್ರ ಗೋಚರ, ಹಂಸ-ಮಾಲವ್ಯ ರಾಜಯೋಗಗಳ ಸೃಷ್ಟಿ, ಈ ಜನರಿಗೆ ಅಪಾರ ಧನ ಪ್ರಾಪ್ತಿ !

ಧನು ರಾಶಿ
ಸೂರ್ಯ ಗ್ರಹದ ರಾಶಿ ಪರಿವರ್ತನೆ ಧನು ರಾಶಿಯ ಜನರಿಗೆ ಪ್ರಯೋಜನಕಾರಿ ಮತ್ತು ಆಹ್ಲಾದಕರ ಸಾಬೀತಾಗಲಿದೆ. ಏಕೆಂದರೆ ಸೂರ್ಯನು ನಿಮ್ಮ ರಾಶಿಯ ತೃತೀಯ ಭಾವದಲ್ಲಿ ಸಾಗಲಿದ್ದಾನೆ.  ಇದು ಸಹೋದರ-ಸಹೋದರಿ ಮತ್ತು ಧೈರ್ಯ-ಶಕ್ತಿಯ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗಲಿದೆ. ಇದರೊಂದಿಗೆ, ವೃತ್ತಿಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳು ದೂರಾಗಲಿವೆ ಮತ್ತು ಹಣಕಾಸಿನ ವಿಷಯಗಳಲ್ಲಿ ನೀವು ಲಾಭ ಪಡೆಯುವಿರಿ. ಮತ್ತೊಂದೆಡೆ, ನಿಮ್ಮ ವ್ಯವಹಾರವು ವಿದೇಶದ ಜೊತೆಗೆ ಸಂಪರ್ಕ ಹೊಂದಿದ್ದರೆ, ಈ ಸಮಯವು ನಿಮಗೆ ಅತ್ಯುತ್ತಮವಾಗಿದೆ. ಇದರೊಂದಿಗೆ ಸಹೋದರ ಸಹೋದರಿಯರ ಬೆಂಬಲವೂ ನಿಮಗೆ ಸಿಗಲಿದೆ.

ಇದನ್ನೂ ಓದಿ-Shani Ast 2023: ಕುಂಭ ರಾಶಿಯಲ್ಲಿ ಸಂಪೂರ್ಣ ಅಸ್ತನಾದ ಶನಿ, ಈ ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News