Myths of Peepal tree : ಪುರಾಣ ಪುಣ್ಯ ಕಥೆಗಳಲ್ಲಿ ಅರಳಿ ಮರದ ಉಲ್ಲೇಖವನ್ನು ಕಾಣಬಹುದು. ಅಲ್ಲದೆ, ಈ ಮರದ ಮೇಲೆ ಅನೇಕ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯೂ ಸಹ ಉಂಟು. ಆದರೆ ಇಂತಹ ಪವಿತ್ರ ಗಿಡವನ್ನು ಮನೆಯಲ್ಲಿ ಬೆಳೆಸುವುದು ಅಶುಭ ಎಂದು ಹೇಳಲಾಗುತ್ತದೆ. ಹೌದು.. ಈ ಮಾತನ್ನು ನೀವು ನಂಬಲೇಬೇಕು.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..


COMMERCIAL BREAK
SCROLL TO CONTINUE READING

ಅರಳಿ ಮರವು ಮನೆಯೊಳಗೆ ಅಥವಾ ಮನೆಯ ಹೊರಗೆ ತನ್ನಷ್ಟಕ್ಕೆ ತಾನೇ ಬೆಳೆಯುವುದನ್ನು ಅನೇಕ ಬಾರಿ ನೀವು ನೋಡಿರುತ್ತೀರಾ. ಅಲ್ಲದೆ, ವಾಸ್ತು ಪ್ರಕಾರ ಮನೆಯಲ್ಲಿ ಅರಳಿ ಮರ ನೆಡುವುದನ್ನು ಸಹ ನಿಷೇಧಿಸಲಾಗಿದೆ. ಏಕೆಂದರೆ ಇದು ಮಂಗಳಕರವಲ್ಲ ಎಂದು ನಂಬಲಾಗಿದೆ. ಇನ್ನೊಂದು ವಿಚಾರ ಅಂದ್ರೆ, ಸ್ವಾಭಾವಿಕವಾಗಿ ಬೆಳೆದರೂ ಸಹ ಅದನ್ನು ಎಚ್ಚರಿಕೆಯಿಂದ ತೆಗೆದುಹಾಕಬೇಕು ಎಂಬುವುದು ಗಮನಕ್ಕಿರಲಿ.


ಇದನ್ನೂ ಓದಿ:ಏಕಾದಶಿ ಉಪವಾಸ ವೃತ  ಆಚರಿಸುವ ಮೊದಲು ಅದರ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳಿ


ಕೆಲವೊಂದು ಬಾರಿ ಮನೆಯ ಹೊರಗೆ ತನ್ನಷ್ಟಕ್ಕೆ ತಾನೇ ಅರಳಿ ಗಿಡ ಬೆಳೆಯುತ್ತದೆ. ಆಗ ನಾವು ಅದನ್ನು ಪೂಜಿಸಿ ಜಾಗೃತವಾಗಿ ಹೊರಗೆ ತೆಗೆದು ಕುಂಡದಲ್ಲಿ ನೆಟ್ಟು ಬೆಳೆಸಬೇಕು. ಅಲ್ಲದೆ, ಸಸ್ಯವನ್ನು ಹೊರ ತೆಗೆದುಹಾಕುವಾಗ ಯಾವುದೇ ಕಾರಣಕ್ಕೂ ಅದರ ಬೇರುಗಳನ್ನು ಕತ್ತರಿಸಬಾರದು. ಏಕೆಂದರೆ ಈ ಗಿಡದಲ್ಲಿ ಬ್ರಹ್ಮ ದೇವನು ವಾಸವಾಗಿರುತ್ತಾನೆ ಎನ್ನುವ ನಂಬಿಕೆಯಿದೆ. ಹೀಗೆ ಹೊರ ತೆಗೆದ ಗಿಡವನ್ನು ಯಾವುದೇ ಕಾರಣಕ್ಕೂ ಮನೆಯ ಪೂರ್ವ ದಿಕ್ಕಿನಲ್ಲಿ ನೆಡಬೇಡಿ. ಇದು ಮನೆಯಲ್ಲಿನ ಹಣದ ಕೊರತೆಗೆ ಕಾರಣವಾಗುತ್ತದೆ.


ಅಷ್ಟೇ ಅಲ್ಲ, ಪೂಜೆಯ ನಂತರ ಈ ಗಿಡವನ್ನು ದೇವಾಲಯದಲ್ಲಿಯೂ ಸಹ ಇಡಬಾರದು. ಹಾಗೆಯೇ ಅರಳಿ ಮರವನ್ನು ಕತ್ತರಿಸುವುದು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಮಕ್ಕಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅರಳಿ ಮರದ ನೆರಳು ಮನೆಗೆ ಮೇಲೆ ಬಿದ್ದರೆ ಪ್ರಗತಿಗೆ ಕುಂಠಿತಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ:ದಿನಭವಿಷ್ಯ 23-11-2023: ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಅನುಕೂಲಕರ ದಿನ


ವಿಶಿಷ್ಠ ಮತ್ತು ನಿಗೂಢವಾದ ನಂಬಿಕೆ ಅಂದ್ರೆ, ಅರಳಿ ಮರ ಏಕಾಂತವನ್ನು ಸೃಷ್ಟಿಸುತ್ತದೆ ಎನ್ನುವ ಬಲವಾದ ನಂಬಿಕೆ ಇದೆ. ಇದರಿಂದಾಗಿ ಮನೆಯಲ್ಲಿ ಈ ಗಿಡ ನೆಟ್ಟರೆ, ಅಂತಹವರು ದೀರ್ಘಕಾಲ ಬದುಕುವುದಿಲ್ಲ ಎನ್ನಲಾಗುತ್ತದೆ. ಅರಳಿ ಮರ ಕುಟುಂಬದ ಬೆಳವಣಿಗೆಗೆ ಉತ್ತಮವಲ್ಲ. ಸಂತಾನ ಭಾಗ್ಯವೂ ಸಹ ನಾಶವಾಗುತ್ತದೆ.‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.