Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ ಕೃಷ್ಣ ಪಕ್ಷದ ಈ ದಿನ ದಶಮಿ ತಿಥಿ. ಕೊನೆಯ ಕಾರ್ತಿಕ ಸೋಮವಾರದಂದು ಉತ್ತರಾ ನಕ್ಷತ್ರ, ವಿಷ್ಕಂಭ ಯೋಗ, ವಣಿಜ ಕರಣ ಇರಲಿದೆ. ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನೀವಿಂದು ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ವಿಶೇಷ ಕಾಳಜಿವಹಿಸಿ. ವಿಶೇಷವಾಗಿ ಉದ್ಯೋಗದಲ್ಲಿರುವವರು ನಿಮ್ಮ ಸಣ್ಣ ನಿರ್ಲಕ್ಷ್ಯವೂ ಮೇಲಾಧಿಕಾರಿಗಳಿಗೆ ದೊಡ್ಡದಾಗಿ ಕಾಣಬಹುದು. ಕುಟುಂಬದಲ್ಲಿ ಮದುವೆ ಪ್ರಸ್ತಾಪಗಳು ಬರಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಕುಟುಂಬಸ್ಥರೊಂದಿಗೆ ಮೊಜಿನ ದಿನ. ಕೆಲವು ಹಳೆಯ ನೆನೆಪುಗಳು ನಿಮ್ಮ ಸಂತೋಷವನ್ನು ಹೆಚ್ಚಿಸಲಿದೆ. ಸಹೋದರರೊಂದಿಗೆ ಕುಳಿತು ಮಾತನಾಡುವುದರಿಂದ ನಿಮ್ಮ ಸಂಬಂಧಗಳು ಬಲಗೊಳ್ಳುತ್ತದೆ. ಹಣಕಾಸಿನ ವಹಿವಾಟಿನ ಬಗ್ಗೆ ಜಾಗರೂಕರಾಗಿರಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ವೃತ್ತಿಪರರು ಕೆಲಸದ ಸ್ಥಳದಲ್ಲಿ ಮೆಚ್ಚುಗೆಗೆ ಪಾತ್ರರಾಗುವಿರಿ. ಹಾಗಾಗಿ, ಶತ್ರುಗಳೂ ಕೂಡ ಇಂದು ನಿಮ್ಮ ಸ್ನೇಹಿತರಾಗಬಹುದು. ಆದರೂ ಅವರೊಂದಿಗೆ ಹೆಚ್ಚಿನ ಒಡನಾಟದ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮಗಿಂದು ಪ್ರಗತಿಯ ಹೊಸ ಹೊಸ ಅವಕಾಶಗಳು ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ವದಂತಿಗಳನ್ನು ತಪ್ಪಿಸಿ. ವೃತಿಪರರು ಯೋಜಿಸಿ ಕೆಲಸ ಮಾಡುವುದರಿಂದ ಶುಭವಾಗಲಿದೆ. ಹಣಕಾಸಿನ ಸ್ಥಿತಿ ಬಲಗೊಳ್ಳಬಹುದು. 


ಇದನ್ನೂ ಓದಿ- ಪೂರ್ವಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ನೀವಿಂದು ಅನುಕೂಲಕರ ಫಲಿತಾಂಶಗಳನ್ನು ಪಡೆಯುವಿರಿ. ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ದೊರೆಯಲಿದೆ. ತಂದೆಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಂಭವವಿರುವುದರಿಂದ ಈ ಬಗ್ಗೆ ಗಮನವಹಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಹಲವು ಕ್ಷೇತ್ರಗಳಲ್ಲಿ ನೀವಿಂದು ಉತ್ತಮ ಫಲಿತಾಂಶವನ್ನು ಗಳಿಸುವಿರಿ. ದಿನವಿಡೀ ವ್ಯಾಪಾರದಲ್ಲಿ ಅದೃಷ್ಟದ ಬೆಂಬಲದಿಂದ ಭರ್ಜರಿ ಲಾಭವನ್ನು ಗಳಿಸುವಿರೀ. ಹಣಕಾಸಿನ ಸ್ಥಿತಿ ಬಲಗೊಳ್ಳುತ್ತದೆ. ಮಕ್ಕಳಿಂದ ಶುಭ ಸಮಾಚಾರ ನಿರೀಕ್ಷಿಸಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಇಂದು ಶುಭ ದಿನವಾಗಿದೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ. ಪ್ರೀತಿಯಲ್ಲಿರುವವರು ಈ ಬಗ್ಗೆ ಇಂದು ಕುಟುಂಬಸ್ಥರೊಂದಿಗೆ ಮಾತನಾಡಬಹುದು. ಹಿತ ಶತ್ರುಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯವಾಗಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಉತ್ತಮ ಫಲಿತಾಂಶಕ್ಕಾಗಿ ಇಂದು ವ್ಯಾಪಾರಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಬೇಸರ ಉಂಟು ಮಾಡಬಹುದು. ಯಾವುದೇ ವಿಚಾರವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ. ಹೂಡಿಕೆಯ ಬಗ್ಗೆ ಎಚ್ಚರದಿಂದಿರಿ. 


ಇದನ್ನೂ ಓದಿ- ಇದು ದೇಶದಲ್ಲೇ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ರಾಜ್ಯ... ಇಲ್ಲಿವೆ ಬರೋಬ್ಬರಿ 3,90,615 ದೇವಸ್ಥಾನಗಳು! ನಿತ್ಯ ನಡೆಯುತ್ತೆ ಪೂಜೆ-ಪುನಸ್ಕಾರ


ಧನು ರಾಶಿಯವರ ಭವಿಷ್ಯ (Sagittarius Horoscope):  
ಪೋಷಕರಿಂದ ಶುಭ ಸಮಾಚಾರವನ್ನು ನಿರೀಕ್ಷಿಸಬಹುದು. ನಿಮ್ಮ ಸುತ್ತಮುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ಕುಟುಂಬ ಸದಸ್ಯರ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆಗಳನ್ನು ಪರಿಗಣಿಸಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ನಿಮ್ಮ ಉತ್ತಮ ಕೆಲಸಗಳಿಗಾಗಿ ನೀವಿಂದು ಪ್ರಶಂಸೆ ಗಳಿಸುವಿರಿ. ನಿಮ್ಮ ಸಂಬಂಧಿಕರಿಗೆ ಅಗತ್ಯ ಸಹಾಯವನ್ನು ಮಾಡಿ. ವ್ಯವಹಾರದಲ್ಲಿ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಇಲ್ಲವೇ ಭಾರೀ ನಷ್ಟ ಸಂಭವವಿದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನೀವಿಂದು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಮಾನಸಿಕ ಸಮಸ್ಯೆಗಳು ಮನೆಯವರ ಮೇಲೂ ಪ್ರಭಾವ ಬೀರಬಹುದು. ಉದ್ಯೋಗಾಕಾಂಕ್ಷಿಗಳಿಗೆ ಇಂದು ಶುಭ ಸುದ್ದಿ ಕೇಳುವ ನಿರೀಕ್ಷೆ ಇದೆ. ಹಣಕಾಸಿನ ಸ್ಥಿತಿಯೂ ಬಲಗೊಳ್ಳುತ್ತದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನೀವು ಅಮೂಲ್ಯವಾದ ವಸ್ತುಗಳನ್ನು ಉಡುಗೊರೆಯಾಗಿ ಪಡೆಯುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಸಂಭವವಿದೆ. ನಿಮ್ಮ ಸಂಗಾತಿಯೊಂದಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ವ್ಯವಹಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ