ಗುರು ವಕ್ರಿ  ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಬೃಹಸ್ಪತಿ ಪ್ರಸ್ತುತ ತನ್ನದೇ ಆದ ರಾಶಿಚಕ್ರದ ಮೀನ ರಾಶಿಯಲ್ಲಿದೆ ಮತ್ತು ಹಿಮ್ಮುಖವಾಗಿ ನಡೆಯುತ್ತಿದ್ದಾನೆ. ಮೀನ ರಾಶಿಯಲ್ಲಿ ಗುರು ಗ್ರಹದ ವಕ್ರ ನಡೆಯು ಕೇಂದ್ರದಲ್ಲಿ ತ್ರಿಕೋನ ರಾಜಯೋಗವನ್ನು ಸೃಷ್ಟಿಸುತ್ತದೆ, ಇದು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಜುಲೈನಲ್ಲಿ ಗುರು ವಕ್ರ ಚಲನೆ ಆರಂಭವಾಗಿದ್ದು ನವೆಂಬರ್ 24 ರವರೆಗೆ ಗುರು ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ಸಮಯವು 3 ರಾಶಿಯವರಿಗೆ ತುಂಬಾ ಶುಭವಾಗಿರುತ್ತದೆ. ನವೆಂಬರ್ ತಿಂಗಳವರೆಗೆ ಈ ರಾಶಿಯ ಜನರು ವ್ಯಾಪಾರ-ವ್ಯವಹಾರದಲ್ಲಿ ಬೃಹತ್ ಲಾಭ ಗಳಿಸುವ ಸಾಧ್ಯತೆ ಇದೆ. ಮಾತ್ರವಲ್ಲ, ಪ್ರತಿ ಕೆಲಸ ಕಾರ್ಯಗಳಲ್ಲೂ ಸಹ ಪ್ರಗತಿ ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.


COMMERCIAL BREAK
SCROLL TO CONTINUE READING

ಮೀನ ರಾಶಿಯಲ್ಲಿ ಗುರು ವಕ್ರಿ:  ಈ ಮೂರು ರಾಶಿಯವರಿಗೆ ಸರ್ವತೋಮುಖ ಪ್ರಗತಿ 
ವೃಷಭ ರಾಶಿ: 

ಮೀನ ರಾಶಿಯಲ್ಲಿ ಗುರು ಗ್ರಹದ ಹಿಮ್ಮುಖ ಚಲನೆಯಿಂದ ಉಂಟಾಗುತ್ತಿರುವ ತ್ರಿಕೋನ ರಾಜಯೋಗವು ವೃಷಭ ರಾಶಿಯವರಿಗೆ ಬಹಳ ಶುಭ ಪರಿಣಾಮವನ್ನು ಬೀರುತ್ತದೆ. ಈ ಜನರ ಆದಾಯ ಹೆಚ್ಚಾಗುತ್ತದೆ. ಹೊಸ ಮೂಲಗಳಿಂದ ಆದಾಯ ಲಭ್ಯವಾಗಲಿದೆ.  ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗುತ್ತದೆ. ಉದ್ಯಮಿಗಳ ಲಾಭ ಹೆಚ್ಚಾಗುತ್ತದೆ, ದೊಡ್ಡ ಆರ್ಡರ್ ಗಳು ಕೈ ಸೇರಬಹುದು. ಆಸ್ತಿ ವಾಹನದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಪಡೆಯುತ್ತೀರಿ. 


ಇದನ್ನೂ ಓದಿ- Budh Vakri 2022: ಕನ್ಯಾರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ- ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ


ಮಿಥುನ ರಾಶಿ: 
ಹಿಮ್ಮುಖ ಗುರು ಮಿಥುನ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ನೀಡಬಹುದು. ಹೊಸ ಉದ್ಯೋಗದ ಆಫರ್ ಬರಬಹುದು. ಬಡ್ತಿ ಪಡೆಯಬಹುದು. ವ್ಯಾಪಾರಸ್ಥರಿಗೆ ಧನ ಲಾಭವಾಗಲಿದೆ. 


ಇದನ್ನೂ ಓದಿ- Shani Sade Sati: ಈ ಐದು ರಾಶಿಯವರಿಗೆ ಶನಿ ಸಾಡೇಸಾತಿ, ಧೈಯಾ ಪ್ರಭಾವ, ನಿಮ್ಮ ರಾಶಿಯೂ ಇದೆಯೇ?


ಕರ್ಕಾಟಕ ರಾಶಿ: 
ಹಿಮ್ಮುಖ ಗುರುವು ಕರ್ಕ ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸುತ್ತಾನೆ. ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟದ ಬೆಂಬಲ ಸಿಗುತ್ತದೆ. ಪ್ರಮುಖ ಕೆಲಸಗಳಲ್ಲಿ ಇಷ್ಟು ದಿನಗಳ ಕಾಲ ಎದುರಾಗಿದ್ದ ಅಡೆತಡೆಗಳನ್ನೂ  ನಿವಾರಿಸಬಹುದು. ವಿದೇಶಕ್ಕೆ ಹೋಗಲು ಬಯಸುವವರ ಆಸೆ ಈಡೇರಲಿದೆ. ಇಲ್ಲವಾದಲ್ಲಿ ದೇಶದಲ್ಲೇ ದೀರ್ಘ ಪ್ರಯಾಣ ಮಾಡಬಹುದು. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೂ ಲಾಭವಾಗಲಿದೆ. ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಲಿವೆ. 

https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.