Varamahalakshmi 2023 : ವರಲಕ್ಷ್ಮಿ ವ್ರತವನ್ನು ಶ್ರಾವಣ ಪೂರ್ಣಿಮಾ ಮುಂಚಿನ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ಬಾರಿ ಅದು ಆಗಸ್ಟ್ 26 ರಂದು ಬಂದಿದೆ. ಪ್ರತಿ ಶುಕ್ರವಾರ ಲಕ್ಷ್ಮಿಗೆ ಸಮರ್ಪಿತವಾಗಿದ್ದರೂ, ಶ್ರಾವಣ ಮಾಸದ ಶುಕ್ರವಾರದ ವರಲಕ್ಷ್ಮಿ ವ್ರತ ತುಂಬಾ ವಿಶೇಷವಾಗಿದೆ. ಲಕ್ಷ್ಮಿ ದೇವಿಯ ಆರಾಧನೆಗೆ ಶ್ರಾವಣ ಪೂರ್ಣಿಮಾ ಮುಂಚಿನ ಶುಕ್ರವಾರ ಬಹಳ ಮುಖ್ಯ. ಈ ದಿನ ಸರಿಯಾದ ಕ್ರಮದಲ್ಲಿ ಲಕ್ಷ್ಮಿಯನ್ನು ಪೂಜಿಸಿದರೆ ಜೀವನದಲ್ಲಿ ಹಣದ ಕೊರತೆ ಎಂದಿಗೂ ಬರುವುದಿಲ್ಲ. ವರಲಕ್ಷ್ಮಿ ವ್ರತದ ಮಹತ್ವ, ಶುಭ ಸಮಯ, ಪೂಜಾ ವಿಧಾನ ಬಗ್ಗೆ ತಿಳಿಯೋಣ. 


COMMERCIAL BREAK
SCROLL TO CONTINUE READING

ವರಲಕ್ಷ್ಮಿ ವ್ರತದ ಮಹತ್ವ


ಪೌರಾಣಿಕ ನಂಬಿಕೆಗಳ ಪ್ರಕಾರ, ವರಲಕ್ಷ್ಮಿ ಮಾತೆಯನ್ನು ಭಗವಾನ್ ವಿಷ್ಣುವಿನ ಪತ್ನಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅವಳು ಮಹಾಲಕ್ಷ್ಮಿಯ ಅವತಾರವೆಂದು ಹೇಳಲಾಗುತ್ತದೆ. ಶ್ರಾವಣ ಪೂರ್ಣಿಮಾ ಮುಂಚಿನ ಶುಕ್ರವಾರದಂದು ವರಲಕ್ಷ್ಮಿಯನ್ನು ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು ಧಾನ್ಯಗಳು ತುಂಬುತ್ತವೆ. ವಿವಾಹಿತ ಮಹಿಳೆಯರಿಗೆ ಈ ವ್ರತವು ಅತ್ಯಂತ ವಿಶೇಷವಾಗಿದೆ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಕುಟುಂಬದ ಸದಸ್ಯರಲ್ಲಿ ಐಕ್ಯತೆ ಹೆಚ್ಚಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಮಕ್ಕಳ ಸುಖವೂ ಪ್ರಾಪ್ತಿಯಾಗುತ್ತದೆ.


ಇದನ್ನೂ ಓದಿ: ರಮಹಾಲಕ್ಷ್ಮಿ ಹಬ್ಬದಂದು ಶಾಸ್ತ್ರಬದ್ಧವಾಗಿ ಈ ರೀತಿ ಪೂಜೆ ಮಾಡಿ, ಧನ ಧಾನ್ಯ ವೃದ್ಧಿಯಾಗುವುದು! 


ವರಲಕ್ಷ್ಮಿ ವ್ರತದ ಪೂಜೆಗೆ ಶುಭ ಸಮಯ


ವರಲಕ್ಷ್ಮಿ ವ್ರತವನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಒಡಿಶಾದ ಜನರು ವರಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಈ ದಿನ ಬೆಳಗ್ಗೆ 5.55 ರಿಂದ 7.42 ರವರೆಗೆ ಸಿಂಹ ಲಗ್ನದ ಪೂಜೆ ನಡೆಯಲಿದೆ. ಬಳಿಕ ಮಧ್ಯಾಹ್ನ 12.17ರಿಂದ 2.36ರವರೆಗೆ ವೃಶ್ಚಿಕ ರಾಶಿಯಲ್ಲಿ ಪೂಜೆ ನಡೆಯಲಿದೆ. ಸಂಜೆ 6.22ರಿಂದ ರಾತ್ರಿ 7.50ರವರೆಗೆ ಕುಂಭ ಲಗ್ನದ ಪೂಜೆ ನಡೆಯಲಿದೆ. ಅದರ ನಂತರ ರಾತ್ರಿ 10:50 ರಿಂದ 12:45 ರವರೆಗೆ ವೃಷಭ ಲಗ್ನದ ಪೂಜೆಯನ್ನು ಮಾಡಲಾಗುತ್ತದೆ.


ವರಲಕ್ಷ್ಮಿ ವ್ರತ ಪೂಜೆ ವಿಧಾನ


ವರಲಕ್ಷ್ಮಿ ವ್ರತದ ದಿನ ಮಹಿಳೆಯರು ಮುಂಜಾನೆ ಬೇಗ ಎದ್ದು ತಲೆಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸುತ್ತಾರೆ. ಈ ದಿನ ಮನೆಯನ್ನು ಸಹ ಸರಿಯಾಗಿ ಸ್ವಚ್ಛಗೊಳಿಸಬೇಕು. ಇಡೀ ಮನೆಯಲ್ಲಿ ಗಂಗಾಜಲವನ್ನು ಎರಚುವುದರಿಂದ ಅದು ಪವಿತ್ರವಾಗುತ್ತದೆ. ಮನೆಯ ಹೊರಗೆ ರಂಗೋಲಿ ಹಾಕಿ ಮುಖ್ಯ ಬಾಗಿಲಿನ ಎರಡೂ ಬದಿಯಲ್ಲಿ ಸ್ವಸ್ತಿಕ ಹಾಕಬೇಕು. ತಾಯಿ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ವಿಗ್ರಹಗಳನ್ನು ಪಂಚಾಮೃತದಿಂದ ಅಭಿಷೇಕ ಮಾಡಿ. ಈ ದಿನ ಲಕ್ಷ್ಮಿ ದೇವಿಯನ್ನು ಕಳಸವಿಟ್ಟು ಹೂವು, ಸೀರೆ, ಬಾಗಿನ ಅರ್ಪಿಸಿ ಸಿಂಗರಿಸಿ ಪೂಜಿಸಲಾಗುತ್ತದೆ. ನಂತರ ನೈವೇದ್ಯ ಮಾಡಿ, ಆರತಿ ಮಾಡುತ್ತಾರೆ.


ಇದನ್ನೂ ಓದಿ: ವರಲಕ್ಷ್ಮಿ ವ್ರತ 2023: ವರಮಹಾಲಕ್ಷ್ಮಿ ಹಬ್ಬದ ದಿನಾಂಕ, ಶುಭ ಸಮಯ ಮತ್ತು ಮಹತ್ವವನ್ನು ತಿಳಿಯಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.