Vastu shastra: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಕೆಲಸ ಮಾಡಲು ಕೆಲವು ನಿಯಮಗಳಿವೆ. ನಾವು ಆ ನಿಯಮಗಳನ್ನು ಪಾಲಿಸಬೇಕು. ಅದರಂತೆ ರಾತ್ರಿ ವೇಳೆ ಬಟ್ಟೆಗಳನ್ನು ಒಗೆಯಬಾರದು ಅಂದರೆ ವಾಶ್‌ ಮಾಡಬಾರದು ಅಂತಾ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ವೇಳೆ ಬಟ್ಟೆಗಳನ್ನು ತೊಳೆಯಬಾರದು ಅಥವಾ ಒಣಗಿಸಬಾರದು. ಹೀಗೆ ಮಾಡುವುದು ಶುಭವಲ್ಲ. ಇದರ ಹಿಂದಿನ ಕಾರಣದ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.    


COMMERCIAL BREAK
SCROLL TO CONTINUE READING

ಇದನ್ನೂ ಓದಿ: Hair Care Tips: ನಿಮ್ಮ ಕೂದಲು ದಟ್ಟವಾಗಿ ಬೆಳೆಯಬೇಕಾದ್ರೆ ಹೀಗೆ ಮಾಡಿ


ಯಾವುದೇ ಒಬ್ಬ ವ್ಯಕ್ತಿ ರಾತ್ರಿ ವೇಳೆ ಬಟ್ಟೆಗಳನ್ನು ಒಗೆದರೆ ಭವಿಷ್ಯದಲ್ಲಿ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಅಪ್ಪಿತಪ್ಪಿಯೂ ನೀವು ಈ ತಪ್ಪನ್ನು ಮಾಡಬಾರದು. ವಾಸ್ತು ಪ್ರಕಾರ ರಾತ್ರಿ ವೇಳೆ ಬಟ್ಟೆ ಒಗೆಯುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೊತ್ತುತರುತ್ತದೆ. ರಾತ್ರಿಯಲ್ಲಿ ಒದ್ದೆ ಬಟ್ಟೆಗಳನ್ನು ಹೊರಗೆ ಒಣಗಿಸಬಾರದು. ಇದರಿಂದ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಇದು ನೇರವಾಗಿ ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ: ಸರಿಯಾಗಿ ನಿದ್ರೆ ಬರುತ್ತಿಲ್ಲವೇ ಹಾಗಿದ್ರೆ ಇಲ್ಲಿದೆ ಒಂದು ಪರಿಹಾರ ! ಆದರೆ ಅದರ ಹಿಂದಿನ ಅಪಾಯಗಳು ಗಮನದಲ್ಲಿರಲಿ


ರಾತ್ರಿ ಒಗೆದ ಬಟ್ಟೆಗಳನ್ನು ಮರುದಿನ ಧರಿಸುವುದರಿಂದ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಆತನ ಪ್ರತಿಯೊಂದು ಕಾರ್ಯಕ್ಕೆ ಅಡ್ಡಿಯಾಗಬಹುದು. ರಾತ್ರಿ ಬಟ್ಟೆ ಒಗೆಯುವುದರಿಂದ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಹೀಗಾಗಿ ರಾತ್ರಿಯಲ್ಲಿ ಅಪ್ಪಿತಪ್ಪಿಯೂ ಬಟ್ಟೆ ವಾಶ್ ಮಾಡಬಾರದು. ರಾತ್ರಿ ಬಟ್ಟೆ ಒಗೆಯುವುದು, ಬಯಲಿನಲ್ಲಿ ಆ ಬಟ್ಟೆಗಳನ್ನು ಒಣಗಿಸುವುದು ಸರಿಯಲ್ಲ. ಬಟ್ಟೆಗಳನ್ನು ಬಯಲಿನಲ್ಲಿ ಒಣಗಿಸುವುದರಿಂದ ಅವುಗಳ ಮೇಲೆ ಕ್ರಿಮಿ ಕೀಟಾಣುಗಳು ಬರಬಹುದು. ಪಕ್ಷಿಗಳ ಮಲಮೂತ್ರ ಅದರ ಮೇಲೆ ಬೀಳುವ ಸಾಧ್ಯತೆ ಇರುತ್ತೆ. ಹೀಗಾಗಿ ರಾತ್ರಿ ಬಟ್ಟೆಗಳನ್ನು ಒಗೆದು ಹೊರಗಡೆ ಒಣಹಾಕುವುದು ಸರಿಯಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ