ಹಣಕ್ಕಾಗಿ ವಾಸ್ತು:  ಜೀವನದಲ್ಲಿ ಪ್ರಗತಿ ಸಾಧಿಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಾರೆ. ಅವರಲ್ಲಿ ಹಲವರು ಯಶಸ್ವಿಯಾದರೆ, ಇನ್ನೂ ಕೆಲವರು ನಮ್ಮ ಹಣೆಬರಹ ಎಂದು ಸುಮ್ಮನಾಗುತ್ತಾರೆ. ಸಾಮಾನ್ಯವಾಗಿ, ಆರ್ಥಿಕ ಬಿಕ್ಕಟ್ಟಿಗೆ ಯೋಜನೆಯ ಕೊರತೆಯ ಜೊತೆಗೆ ಅದೃಷ್ಟವೂ ಕಾರಣ ಎಂದು ಹೇಳಲಾಗುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಹಣವನ್ನು ಎಣಿಸುವಾಗ ಮಾಡುವ ಅನೇಕ ತಪ್ಪುಗಳು ನಿಮ್ಮ ಬಡತನಕ್ಕೆ ಕಾರಣವಾಗಿರಬಹುದು ಎಂದು  ಹೇಳಲಾಗುತ್ತದೆ. ಅಂತಹ  ತಪ್ಪುಗಳು ಯಾವುವು ಮತ್ತು ಅವುಗಳನ್ನು ತಪ್ಪಿಸುವುದು ಹೇಗೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಹಣವನ್ನು ಎಲ್ಲೆಲ್ಲೋ ಇಡುವುದು:
ಹಣವನ್ನು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮೀ ಸ್ವರೂಪ ಎಂದು ಹೇಳಲಾಗುತ್ತದೆ. ಸಂಬಳ ಬಂದಾಗ ಅಥವಾ ಹೊರಗಿನಿಂದ ಹಣ ಬಂದಾಗ ಅನೇಕರು ಅದನ್ನು ಅಲ್ಲಿ ಇಲ್ಲಿ ಇಡುತ್ತಾರೆ. ಆದರೆ, ಹಣವನ್ನು ಈ ರೀತಿಯಾಗೆ ಎಲ್ಲೆಲ್ಲೋ ಇಡುವುದು ತಾಯಿ ಲಕ್ಷ್ಮಿಗೆ ಮಾಡುವ ಅವಮಾನವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಹಣವನ್ನು ಗೌರವಿಸಬೇಕು. ಅದನ್ನು ಎಲ್ಲೆಲ್ಲೋ ಇಡುವ ಬದಲಿಗೆ ಮನೆಯಲ್ಲಿ ನಿರ್ದಿಷ್ಟ ಜಾಗದಲ್ಲಿ,  ವಾಲ್ಟ್ ಅಥವಾ ಬೀರುಗಳಲ್ಲಿ ಇಟ್ಟುಕೊಳ್ಳಬೇಕು. ಅಲ್ಲಿ ಇಲ್ಲಿ ಹಣ ಇಟ್ಟರೆ ಬಡತನಕ್ಕೆ ಆಹ್ವಾನ ನೀಡಿದಂತಾಗುತ್ತದೆ. 


ಇದನ್ನೂ ಓದಿ- Vastu Tips: ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದೀರಾ? ನಿಮ್ಮ ಸ್ನಾನಗೃಹದಲ್ಲಿ ಈ ಬಣ್ಣದ ಬಕೆಟ್ ಇಟ್ಟು ನೋಡಿ!


ಹಣವನ್ನು ಕೊಡುವಾಗ ಎಸೆಯುವುದು;
ಅನೇಕ ಜನರು ಹಣವನ್ನು ಯಾರಿಗಾದರೂ ಕೊಡುವಾಗ ಎಸೆಯುವ ಅಭ್ಯಾಸ ಹೊಂದಿರುತ್ತಾರೆ.  ಆದರೆ, ಹಣ ನೀಡಲು ಇದು ಸರಿಯಾದ ವಿಧಾನವಲ್ಲ. ಇದು ಹಣಕ್ಕೆ ಮಾಡುವ ಅವಮಾನ ಮಾತ್ರವಲ್ಲ, ತಾಯಿ ಲಕ್ಷ್ಮಿಗೆ ತೋರುವ ಅಗೌರವ. ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬದಲಿಸಿಕೊಳ್ಳಿ ಇಲ್ಲದಿದ್ದರೆ ಬಡತನ ಮನೆ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 


ಇದನ್ನೂ ಓದಿ- ಮನೆಯ ಈ ದಿಕ್ಕಿನಲ್ಲಿ ಲಕ್ಷ್ಮೀಯ ಫೋಟೋ ಇರಿಸಿದರೆ 10 ಪಟ್ಟು ಹೆಚ್ಚು ಧನ ಪ್ರಾಪ್ತಿಯಾಗುವುದು


ಹಣ ಎಣಿಸುವಾಗ ಬೆರಳುಗಳಿಗೆ ಉಗುಳು ಹಚ್ಚುವುದು:
ಸಾಮಾನ್ಯವಾಗಿ ಕೆಲವರು ಹಣ ಎಣಿಸುವಾಗ ಬೆರಳಿಗೆ ಉಗುಳು ಹಚ್ಚಿಕೊಳ್ಳುತ್ತಾರೆ. ಇದರಿಂದ ನೋಟುಗಳನ್ನು ಎಣಿಸಲು ಸುಲಭವಾಗುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ. ಆದರೆ ಆಧ್ಯಾತ್ಮಿಕ ಮತ್ತು ವಾಸ್ತು  ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ. ನೀವು ಉಗುಳನ್ನು ಬಳಸಿ ನೋಟುಗಳನ್ನು ಎಣಿಸುವಾಗ, ನೀವು ಅಜಾಗರೂಕತೆಯಿಂದ ತಾಯಿ ಲಕ್ಷ್ಮಿಯನ್ನು ಅವಮಾನಿಸುತ್ತೀರಿ.  ಇದನ್ನು ತಪ್ಪಿಸಲು ನೀವು ಉಗುಳಿನ ಬದಲು ನೀರನ್ನು ಬಳಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.