Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿ ವಸ್ತುವು ಆ ಮನೆಯ ಯಜಮಾನನ ಪ್ರಗತಿಯ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತವೆ. ಮನೆಯಲ್ಲಿರುವ ವಸ್ತುಗಳು ವ್ಯಕ್ತಿಯ ಪ್ರಗತಿಗೆ ಕಾರಣವಾಗುವಂತೆಯೇ, ಕೆಲವು ವಸ್ತುಗಳು ವ್ಯಕ್ತಿಯ ಜೀವನವನ್ನೇ ಸರ್ವ ನಾಶ ಮಾಡುತ್ತವೆ ಎಂದು ಹೇಳಲಾಗುತ್ತದೆ. ವಾಸ್ತುವಿನ ಪ್ರಕಾರ, ಮನೆಯ ಸ್ನಾನಗೃಹ, ವಾಶ್‌ರೂಮ್‌ ಎಂದರೆ ಬಾತ್ ರೂಂನಲ್ಲಿರುವ ಕೆಲವು ವಸ್ತುಗಳು ಮನೆಯಲ್ಲಿ ಬಡತನವನ್ನು ಆಹ್ವಾನಿಸುತ್ತವೆ. ಇದರಿಂದ ವ್ಯಕ್ತಿಯು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕುವಂತಾಗುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಸ್ನಾನಗೃಹ ವಾಸ್ತು ಪ್ರಕಾರವಾಗಿರುವುದು ಮಾತ್ರವಲ್ಲ, ಅಲ್ಲಿರುವ ವಸ್ತುಗಳು ಕೂಡ ವಾಸ್ತುವಿಗೆ ಸಂಬಂಧಿಸಿವೆ. ವಾಸ್ತುವಿನ ಪ್ರಕಾರ, ಮನೆಯ ಬಾತ್ ರೂಂನಲ್ಲಿರುವ ಕೆಲವು ಸಣ್ಣ ವಸ್ತುಗಳು ಕೂಡ ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಈ ವಸ್ತುಗಳು ಸ್ನಾನಗೃಹದಲ್ಲಿದ್ದರೆ ಅಂತಹ ಮನೆಯಲ್ಲಿ ಎಷ್ಟು ಹಣ ಸಂಪಾದಿಸಿದರೂ ಅದು ಕೈಯಲ್ಲಿ ನಿಲ್ಲುವುದೇ ಇಲ್ಲ. ಇದರಿಂದಾಗಿ ಅಂತಹ ಮನೆಯಲ್ಲಿ ಬಡತನ ತಾಂಡವವಾಡಬಹುದು ಎಂತಲೂ ಹೇಳಲಾಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಮನೆಯ ಸ್ನಾನ ಗೃಹದಲ್ಲಿಯೂ ಈ ವಸ್ತುಗಳಿದ್ದರೆ ಅವುಗಳನ್ನು ತಕ್ಷಣವೇ ಹೊರಹಾಕುವುದು ಸೂಕ್ತ.


ನಿಮ್ಮ ಮನೆಯ ಸ್ನಾನಗೃಹದಲ್ಲಿರುವ ಈ ವಸ್ತುಗಳಿಂದಲೂ ಬಡತನ ಬರುತ್ತೆ, ಎಚ್ಚರ !
ವಾಸ್ತು ಪ್ರಕಾರ, ಸ್ನಾನ ಗೃಹದಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅವುಗಳೆಂದರೆ,


* ಕಿತ್ತು ಹೋಗಿರುವ ಚಪ್ಪಲಿ:
ಕೆಲವರು ಸ್ನಾನಗೃಹಕ್ಕೆ ತಾನೇ ಎಂದು ಹಳೆಯ, ಕಿತ್ತು ಹೋಗಿರುವ ಚಪ್ಪಲಿಯನ್ನು ಬಳಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಎಚ್ಚರ ಅದು ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ- Vastu Tips : ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ, ನಿಮಗೆ ಆರ್ಥಿಕ ಸಂಕಷ್ಟ ತಪ್ಪಿದಲ್ಲ!


* ಮುರಿದ ಕನ್ನಡಿ:
ವಾಸ್ತು ಪ್ರಕಾರ, ಮನೆಯ ಸ್ನಾನ ಗೃಹದಲ್ಲಿ ಮುರಿದ ಕನ್ನಡಿ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಆರ್ಥಿಕ ನಷ್ಟ ಉಂಟಾಗುವುದರ ಜೊತೆಗೆ ದಾರಿದ್ರ್ಯ ಮನೆಯನ್ನು ಆವರಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ, ನಿಮ್ಮ ಬಾತ್ ರೂಂನಲ್ಲಿಯೂ ಮುರಿದ ಕನ್ನಡಿ ಇದ್ದರೆ ಕೂಡಲೇ ಅದನ್ನು ಮನೆಯಿಂದ ಹೊರಹಾಕಿ.


* ಕೂದಲು:
ತಲೆಗೆ ಸ್ನಾನ ಮಾಡಿದಾಗ ಕೂದಲು ಉದುರುವುದು ಸಾಮಾನ್ಯ. ಆದರೆ, ಅದನ್ನು ತಕ್ಷಣವೇ ತೆಗೆದು ಕಸಕ್ಕೆ ಹಾಕಿ. ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಚದುರಿದ ಕೂದಲು ಶನಿ ಮತ್ತು ಮಂಗಳ ದೋಷಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ. 


ಇದನ್ನೂ ಓದಿ- Sleeping Direction: ವಾಸ್ತುಪ್ರಕಾರ ಮಲಗಲು ಈ ದಿಕ್ಕು ಅತ್ಯುತ್ತಮ, ಬಹಳಷ್ಟು ಧನಲಾಭ!


* ಖಾಲಿ ಬಕೆಟ್:
ವಾಸ್ತು ಪ್ರಕಾರ, ಸ್ನಾನ ಗೃಹದಲ್ಲಿ ಖಾಲಿ ಬಕೆಟ್ ಇಡುವುದನ್ನು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ ಎನ್ನಲಾಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಬಾತ್ ರೂಂನಲ್ಲಿರುವ ಬಕೆಟ್ನಲ್ಲಿ ಸದಾ ನೀರು ತುಂಬಿರುವಂತೆ ನೋಡಿಕೊಳ್ಳಿ.


* ಒದ್ದೆ ಬಟ್ಟೆ:
ಕೆಲವರು ಸ್ನಾನಗೃಹದಲ್ಲಿ ಬಟ್ಟೆಯನ್ನು ಒದ್ದೆಕಟ್ಟಿ ಹಾಗೆಯೇ ಬಿಟ್ಟಿರುತ್ತಾರೆ. ಇಂತಹ ಅಭ್ಯಾಸವನ್ನು ಈಗಲೇ ಬಿಟ್ಟು ಬಿಡಿ. ಏಕೆಂದರೆ ಇದು ಸೂರ್ಯ ದೋಷಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ, ವಾಸ್ತು ಪ್ರಕಾರ, ಅಂತಹ ಮನೆಯಲ್ಲಿ ಶಾಂತಿ ಎಂಬುದೇ ಇರುವುದಿಲ್ಲ ಎನ್ನಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.