Vastu Tips : ಬೆಳಿಗ್ಗೆ ಎದ್ದ ತಕ್ಷಣ ಯಾವತ್ತೂ ನೋಡಬೇಡಿ ಈ ವಸ್ತುಗಳನ್ನು!

ಕೆಲವು ವಸ್ತು, ವಿಷಯಗಳನ್ನು ನೋಡುವುದರಿಂದ ದಿನವೂ ಹಾಳಾಗುತ್ತದೆ ಮತ್ತು ಹಣದ ನಷ್ಟಕ್ಕೆ ಕಾರಣವಾಗುತ್ತದೆ ಎಂದರೆ ನಂಬುತ್ತೀರಾ. ಹೌದು ನಂಬಲೇಬೇಕು. ಜನ ಈ ವಿಷಯ, ವಸ್ತುಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಬೆಳಿಗ್ಗೆ ಎದ್ದ ನಂತರ ನೀವು ಯಾವತ್ತೂ ನೋಡಲೇಬಾರದ ಕೆಲ ವಸ್ತುಗಳ ಬಗ್ಗೆ ಮಾಹಿತಿ ತಂದಿದ್ದೇವೆ. ಈ ಕೆಳಗಿದೆ ನೋಡಿ..

Written by - Channabasava A Kashinakunti | Last Updated : Jan 7, 2023, 05:32 PM IST
  • ಜನ ಬೆಳಿಗ್ಗೆ ಎದ್ದು ತಕ್ಷಣ ಕೆಲ ವಸ್ತು, ವ್ಯಕ್ತಿ, ವಿಷಯಗಳನ್ನು ನೋಡಲು ಇಷ್ಟಪಡುತ್ತಾರೆ
  • ನೋಡುವುದರಿಂದ ದಿನವೂ ಹಾಳಾಗುತ್ತದೆ ಮತ್ತು ಹಣದ ನಷ್ಟಕ್ಕೆ ಕಾರಣ
  • ಬೆಳಿಗ್ಗೆ ಎದ್ದು ಯಾವುದೇ ವ್ಯಕ್ತಿಯ ನೆರಳನ್ನು ಅಥವಾ ನಿಮ್ಮ ನೆರಳನ್ನು ನೋಡಬಾರದು
Vastu Tips : ಬೆಳಿಗ್ಗೆ ಎದ್ದ ತಕ್ಷಣ ಯಾವತ್ತೂ ನೋಡಬೇಡಿ ಈ ವಸ್ತುಗಳನ್ನು! title=

Astro Tips In Kannada : ಸಾಮಾನ್ಯವಾಗಿ ಜನ ಬೆಳಿಗ್ಗೆ ಎದ್ದು ತಕ್ಷಣ ಕೆಲ ವಸ್ತು, ವ್ಯಕ್ತಿ, ವಿಷಯಗಳನ್ನು ನೋಡಲು ಇಷ್ಟಪಡುತ್ತಾರೆ, ಅದು ಅವರ ದಿನವನ್ನು ಉತ್ತಮಗೊಳಿಸುತ್ತದೆ. ಆದರೆ ಕೆಲವು ವಸ್ತು, ವಿಷಯಗಳನ್ನು ನೋಡುವುದರಿಂದ ದಿನವೂ ಹಾಳಾಗುತ್ತದೆ ಮತ್ತು ಹಣದ ನಷ್ಟಕ್ಕೆ ಕಾರಣವಾಗುತ್ತದೆ ಎಂದರೆ ನಂಬುತ್ತೀರಾ. ಹೌದು ನಂಬಲೇಬೇಕು. ಜನ ಈ ವಿಷಯ, ವಸ್ತುಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಬೆಳಿಗ್ಗೆ ಎದ್ದ ನಂತರ ನೀವು ಯಾವತ್ತೂ ನೋಡಲೇಬಾರದ ಕೆಲ ವಸ್ತುಗಳ ಬಗ್ಗೆ ಮಾಹಿತಿ ತಂದಿದ್ದೇವೆ. ಈ ಕೆಳಗಿದೆ ನೋಡಿ..

1. ಬೆಳಿಗ್ಗೆ ಎದ್ದು ಮುಸುರೆ ಪಾತ್ರೆಗಳನ್ನು ನೋಡಬೇಡಿ. ಮುಸುರೆ ಪಾತ್ರೆಗಳು ಬಡತನದ ಸಂಕೇತ. ರಾತ್ರಿ ಮಲಗುವ ಮುನ್ನ ಎಲ್ಲ ಪಾತ್ರೆಗಳನ್ನು ತೊಳೆದು ಮಲಗಿ ಎಂದು ಇದೇ ಕಾರಣಕ್ಕೆ ಶಾಸ್ತ್ರದಲ್ಲಿ ಹೇಳಿರುವುದು.

ಇದನ್ನೂ ಓದಿ : Raj Yoga 2023 : ಫೆಬ್ರವರಿಯಲ್ಲಿ ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ : ಇವರಿಗೆ ರಾಜಯೋಗ!

2. ಬೆಳಿಗ್ಗೆ ಎದ್ದು ಯಾವುದೇ ವ್ಯಕ್ತಿಯ ನೆರಳನ್ನು ಅಥವಾ ನಿಮ್ಮ ನೆರಳನ್ನು ನೋಡಬಾರದು. ವಿಶೇಷವಾಗಿ ಪಶ್ಚಿಮ ದಿಕ್ಕಿನಲ್ಲಿ ಕಂಡುಬರುವ ನೆರಳು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.

3. ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಮನೆಗೆ ಅಲಂಕಾರಿಕ ವಸ್ತುಗಳನ್ನು ತರುತ್ತಾರೆ. ಅವುಗಳಲ್ಲಿ ಒಂದು ಕಾಡು ಪ್ರಾಣಿಗಳ ಫೋಟೋಗಳು ಒಂದು. ಈ ಫೋಟೋಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಹೀಗಾಗಿ, ಬೆಳಿಗ್ಗೆ ಎದ್ದು ಕಾಡು ಪ್ರಾಣಿಗಳ ಫೋಟೋಗಳನ್ನು ನೋಡಬಾರದು. ಇದರಿಂದ ಮನಸ್ಸಿನಲ್ಲಿ ತಪ್ಪು ಆಲೋಚನೆಗಳು ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹುಟ್ಟಿಕೊಳ್ಳುತ್ತದೆ.

 4. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ಅಪ್ಪಿತಪ್ಪಿಯೂ ನೋಡಬಾರದು. ಕನ್ನಡಿಯು ರಾತ್ರಿಯಿಡೀ ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸುತ್ತದೆ. ಹೀಗಾಗಿ, ಬೆಳಿಗ್ಗೆ ಎದ್ದು ಕನ್ನಡಿ ನೋಡುವ ವ್ಯಕ್ತಿಯ ಮೇಲೆ ನಕಾರಾತ್ಮಕ ಶಕ್ತಿಯು ಪರಿಣಾಮ ಬೀರುತ್ತದೆ. ಹೀಗಾಗಿ, ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು.

ಇದನ್ನೂ ಓದಿ : Chanakya Niti : ಚಾಣಕ್ಯನ ಈ ನೀತಿ ಅನುಸರಿಸಿದರೆ 2023 ರಲ್ಲಿ ನಿಮಗೆ ಹಣದ ಮಳೆ ಸುರಿಯುತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News