Vastu Tips: ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿರುತ್ತದೆ. ಮನೆಯಲ್ಲಿರುವ ಪ್ರತಿ ವಸ್ತುವನ್ನು ವಾಸ್ತುವಿನ ಪ್ರಕಾರ ಇಡುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ ತಪ್ಪಾದ ದಿಕ್ಕಿನಲ್ಲಿ ತಪ್ಪಾದ ವಸ್ತುವನ್ನು ಇಡುವುದರಿಂದ ಇದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದರಿಂದಾಗಿ ಮನೆಯಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದಲ್ಲಿ, ಪೂರ್ವ ದಿಕ್ಕಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ತಿಳಿಸಲಾಗಿದೆ. ಇದನ್ನು ಅನುಸರಿಸುವುದರಿಂದ ಅಂತಹ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ತುಂಬಿರುತ್ತದೆ. ಅಂತಹ ಮನೆಯಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಇರುವುದಿಲ್ಲ. ಸುಖ-ಸಂತೋಷಕ್ಕೆ ಕೊರತೆ ಇರುವುದಿಲ್ಲ. ಆ ಮನೆಯ ಯಜಮಾನನಿಗೆ ಸೋಲೆಂಬುದೇ ಇರುವುದಿಲ್ಲ ಎಂಬ ನಂಬಿಕೆಯಿದೆ. 


ಮನೆಯ ಪೂರ್ವ ದಿಕ್ಕಿನಲ್ಲಿ ಈ ವಸ್ತುಗಳಿದ್ದರೆ ಆರ್ಥಿಕ ಲಾಭ, ಪ್ರಗತಿ, ಸಂತೋಷ: 
ಸೂರ್ಯ ದೇವರ ಚಿತ್ರ: 

ಗ್ರಹಗಳ ಅಧಿಪತಿ ಸೂರ್ಯದೇವ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ, ಈ ದಿಕ್ಕಿನಲ್ಲಿ ಸೂರ್ಯನ ಫೋಟೋ ಇಡುವುದರಿಂದ ವ್ಯಕ್ತಿ ಪ್ರಗತಿಯ ಮೆಟ್ಟಿಲುಗಳನ್ನು ಏರುತ್ತಾನೆ. ಆ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Weekly Career Horoscope: 2023ರ ಕೊನೆಯ ವಾರ 3 ರಾಶಿಯವರಿಗೆ ಸಿಗಲಿದೆ ಗುಡ್ ನ್ಯೂಸ್


ಕಿಟಕಿಗಳು ಮತ್ತು ಬಾಗಿಲುಗಳು: 
ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರ ಪೂರ್ವ ದಿಕ್ಕಿಗಿದ್ದರೆ ತುಂಬಾ ಶ್ರೇಷ್ಠ. ಮನೆಯ ದ್ವಾರ ಮಾತ್ರವಲ್ಲದೆ, ಕಿಟಕಿಗಳು ಕೂಡ ಪೂರ್ವ ದಿಕ್ಕಿನಲ್ಲಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದಾಗಿ, ಸೂರ್ಯ ಉದಯಿಸಿದಾಗ ಕಿರಣಗಳು ಮನೆಯೊಳಗೆ ಪ್ರವೇಶಿಸುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ತಂದು ಮನೆಯ ಸದಸ್ಯರ ಮನಸ್ಸನ್ನು ಶಾಂತಗೊಳಿಸುತ್ತದೆ. ಅಂತಹ ಮನೆಯಲ್ಲಿ ನೆಮ್ಮದಿ ತುಂಬಿರುತ್ತದೆ ಎನ್ನಲಾಗುತ್ತದೆ. 


ಪರಿಮಳಯುಕ್ತ ಹೂವುಗಳು: 
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂರ್ವ ದಿಕ್ಕಿನಲ್ಲಿ ಸುಗಂಧಭರಿತ ಹೂವಿನ ಗಿಡಗಳನ್ನು ಇಡುವುದು ತುಂಬಾ ಶುಭಕರ. ಇದರಿಂದ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಪ್ರಸನ್ನಲಾಗುತ್ತದೆ. ಅಂತಹ ಮನೆಯಲ್ಲಿ ಲಕ್ಷ್ಮಿ ಪ್ರವೇಶವಾಗಿ, ಸದಾ ಆ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Shani Budh Yuti: ಮೂರು ದಶಕಗಳ ಬಳಿಕ ಬುಧ ಶನಿ ಮೈತ್ರಿ, ಈ ರಾಶಿಯವರಿಗೆ ಸುವರ್ಣ ಯುಗ


ಸ್ಟಡಿ ಟೇಬಲ್ : 
ಮನೆಯಲ್ಲಿ ಮಕ್ಕಳು ಓದುವ ಸ್ಥಳ ಅಥವಾ ಸ್ಟಡಿ ಟೇಬಲ್ ಅನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡುವುದು ತುಂಬಾ ಪ್ರಯೋಜನಕಾರಿ ಆಗಿದೆ. ಇದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗುತ್ತದೆ. ಏಕಾಗ್ರತೆಯಿಂದ, ಶಾಂತ ಚಿತ್ತತೆಯಿಂದ ಓದುವುದರಿಂದ ಅವರು ಅಧ್ಯಯನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. 


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.