Mirror Vastu Tips: ಹಿಂದೂ ಧರ್ಮದಲ್ಲಿ ವಾಸ್ತುಶಾಸ್ತ್ರಕ್ಕೆ ವಿಶೇಷ ಸ್ಥಾನವಿದೆ. ವಾಸ್ತು ನಿಯಮಗಳನ್ನು ಪಾಲಿಸುವ ಮನೆಗೆ ಯಾವುದೇ ಆರ್ಥಿಕ ಸಮಸ್ಯೆ ಇರುವುದಿಲ್ಲ. ವಾಸ್ತು ಪ್ರಕಾರ ಕನ್ನಡಿಯನ್ನು ಯಾವ ದಿಕ್ಕಿಗೆ ಜೋಡಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ವಾಸ್ತು ಪ್ರಕಾರ, ಕನ್ನಡಿಯನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ, ಆ ಮನೆಯಲ್ಲಿ ಸಮಸ್ಯೆಗಳು ಅವರನ್ನು ಸುತ್ತುವರೆಯುತ್ತವೆ. ಮನೆಯ ಮೇಲೆ ನಕಾರಾತ್ಮಕ ಪರಿಣಾಮವೂ ಹೆಚ್ಚಾಗುತ್ತದೆ.


COMMERCIAL BREAK
SCROLL TO CONTINUE READING

ಮನೆಯಲ್ಲಿರುವ ಕನ್ನಡಿಗೂ ವಾಸ್ತು ಪ್ರಕಾರ ವಿಶೇಷ ದಿಕ್ಕು ಇರುತ್ತದೆ. ಮನೆಯಲ್ಲಿ ಕನ್ನಡಿ ಇಡುವಾಗ ಎರಡು ಕನ್ನಡಿಗಳನ್ನು ಮುಖಾಮುಖಿಯಾಗಿ ಇಡಬಾರದು. ಇದರಿಂದ ಮನೆಯಲ್ಲಿ ಅಶಾಂತಿ ಶುರುವಾಗುತ್ತದೆ. ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿಯೂ ಕನ್ನಡಿ ಇಡಬಾರದು. 


ಅಡುಗೆಮನೆಯಲ್ಲಿ ಯಾವುದೇ ಕನ್ನಡಿ ಇಡಬಾರದು. ಇದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಇದು ಸರಿಯಲ್ಲ. ವಿಶೇಷವಾಗಿ ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿ ಇಡಬೇಡಿ. 


ಇದನ್ನೂ ಓದಿ: ತಾಯಿ ಲಕ್ಷ್ಮಿ ಕೃಪೆಯಿಂದ ತಿಜೋರಿ ಹಣದಿಂದ ತುಂಬಿ ತುಳುಕಬೇಕೆ? ಮನೆಯಂಗಳದಲ್ಲಿರಲಿ ಈ ಹಣ್ಣಿನ ಗಿಡ 


ವಾಸ್ತು ಪ್ರಕಾರ ಕನ್ನಡಿಯನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು. ಸಾಮಾನ್ಯವಾಗಿ ಪೂರ್ವ ದಿಕ್ಕು ಸೂರ್ಯ ದೇವರನ್ನು ಪ್ರತಿನಿಧಿಸುತ್ತದೆ. ಮನೆಯ ಈಶಾನ್ಯ ಗೋಡೆಯ ಮೇಲೆ ಇರಿಸಲಾಗಿರುವ ಕನ್ನಡಿಯು ಪ್ರಗತಿಯನ್ನು ಪ್ರತಿನಿಧಿಸುತ್ತದೆ.


ನೀವು ಆಕಸ್ಮಿಕವಾಗಿ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಹಾಕಿದರೆ, ಮಲಗುವ ಮೊದಲು ಅದನ್ನು ಬಟ್ಟೆಯಿಂದ ಮುಚ್ಚಿ. ಕನ್ನಡಿಯಲ್ಲಿ ಹಾಸಿಗೆ ಪ್ರತಿಫಲಿಸದಂತೆ ನೋಡಿಕೊಳ್ಳಿ.


ವಾಸ್ತು ಪ್ರಕಾರ ಒಡೆದ ಕನ್ನಡಿ ಮತ್ತು ಒಡೆದ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬಾರದು. ಇವುಗಳ ಮೂಲಕ ಆ ಮನೆಯಲ್ಲಿ ನಕಾರಾತ್ಮಕತೆ ಹೊಮ್ಮುತ್ತದೆ.  


ಇದನ್ನೂ ಓದಿ: ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳ ಸಾವು.. 2024 ರಲ್ಲಿ ಒಳ್ಳೆಯ ದಿನಗಳಿಲ್ಲ: ಕೋಡಿಶ್ರೀ ಭಯಾನಕ ಭವಿಷ್ಯ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.