Vastu tips: ಭಾರತದಲ್ಲಿ ವಾಸ್ತುವನ್ನು ವ್ಯಾಪಕವಾಗಿ ನಂಬಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಕಟ್ಟಿದರೆ ಮತ್ತು ವಸ್ತುಗಳನ್ನು ಜೋಡಿಸಿದರೆ ಶುಭ ಕಾರ್ಯಗಳು ನಡೆಯುತ್ತವೆ ಎಂಬ ನಂಬಿಕೆ ಇದೆ. ತಜ್ಞರು ಪ್ರಕಾರ ಜೀವನದಲ್ಲಿ ಎದುರಾಗುವ ಹಲವು ರೀತಿಯ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರ ಪರಿಹಾರ ನೀಡುತ್ತದೆ. ವಾಸ್ತು ಪ್ರಕಾರ ಕೆಲವು ಸಸ್ಯಗಳನ್ನು ಮನೆಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗದರೆ ಆ ಸಸ್ಯಯಾವುದು ಇದರಿಂದ ಏನು ಲಾಭ ಎನ್ನುವುದನ್ನು ಇಲ್ಲಿ ತಿಳಿಯೋಣ..


COMMERCIAL BREAK
SCROLL TO CONTINUE READING

ಹೌದು ಆ ಸಸ್ಯ ದಾಸವಾಳ. ಈ ಗಿಡವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ವಾಸ್ತು ಹೇಳುತ್ತದೆ. ದಾಸವಾಳ ಗಿಡಗಳ ಪ್ರಯೋಜನಗಳೇನು..? ಅವುಗಳನ್ನು ಮನೆಗಳಲ್ಲಿ ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುವುದನ್ನು ನೋಡೋಣ.


ಇದನ್ನೂ ಓದಿ: Ubhayachari Rajyog 2024: ಕುಂಭ ರಾಶಿಯಲ್ಲಿ ಸೂರ್ಯನಿಂದ 'ಉಭಯಚರಿ ರಾಜಯೋಗ' ನಿರ್ಮಾಣ,ಈ ಜನರಿಗೆ ಆಷ್ಟ ದಿಕ್ಕುಗಳಿಂದ ಹರಿದುಬರಲಿದೆ ಭಾರಿ ಧನಸಂಪತ್ತು!


* ಪೂರ್ವ ದಿಕ್ಕು ಶುಭ


ವಾಸ್ತು ಶಾಸ್ತ್ರದ ಪ್ರಕಾರ, ದಾಸವಾಳ ಗಿಡವನ್ನು ಮನೆಯ ಉತ್ತಮ ದಿಕ್ಕಿನಲ್ಲಿ ನೆಡುವುದರಿಂದ ಹಲವಾರು ಪ್ರಯೋಜನಗಳಿವೆ. ಅಂದರೆ ಪೂರ್ವಕ್ಕೆ ಮುಖ ಮಾಡಿ ಗಿಡ ನೆಡಬೇಕು. ಆಗ ಮಾತ್ರ ಮನೆಗೆ ಶುಭವಾಗುವುದು ಎನ್ನಲಾಗುತ್ತದೆ.


* ದಾಸವಾಳದ ಹೂವುಗಳಿಂದ ಲಕ್ಷ್ಮಿ ದೇವಿಗೆ ಪೂಜೆ


ಹಿಂದೂ ಸಂಪ್ರದಾಯದ ಪ್ರಕಾರ, ದಾಸವಾಳದ ಹೂವುಗಳಿಂದ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಲಾಭದಾಯಕ ಎನ್ನುತಾರೆ. ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಕೆಂಪು ದಾಸವಾಳದ ಹೂವುಗಳನ್ನು ಅರ್ಪಿಸಬೇಕು. ಇದರಿಂದ ಕುಟುಂಬದ ಸದಸ್ಯರಿಗೆ ಯಾವುದೇ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. ಮನೆಯಲ್ಲಿ ಯಾವಾಗಲೂ ಹಣ ನಿಂತಿರುತ್ತದೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ: 200 ವರ್ಷ ನಂತರ ಈ ಜನ್ಮರಾಶಿಗಳಿಗೆ ಅದೃಷ್ಟದ ಪರ್ವಕಾಲ, ಧನ ಸಂಪತ್ತಿನ ಮಳೆ.. ಇನ್ನೇನಿದ್ದರೂ ಗೆಲುವಿನ ಓಟವೇ!


* ಮಂಗಲ ದೋಷ ನಿವಾರಣೆಗೆ?


ದಾಸವಾಳ ಗಿಡವನ್ನು ಬೆಳೆಸುವುದರಿಂದ ಬಂಧಗಳು ಬಲಗೊಳ್ಳುತಾರೆ. ಅಲ್ಲದೇ ಕುಟುಂಬದಲ್ಲಿನ ಕಲಹಗಳು ಬಗೆಹರಿಯುವುದರೊಂದಿಗೆ ಸಂತೋಷವು ಉಕ್ಕಿ ಹರಿಯುತ್ತದೆ. ದಾಂಪತ್ಯ ಜೀವನ ಸುಗಮವಾಗಲಿದೆ. ಪೂಜೆಯ ಸಮಯದಲ್ಲಿ, ದಾಸವಾಳದ ಹೂವುಗಳನ್ನು ದುರ್ಗಾ ದೇವಿ, ಲಕ್ಷ್ಮಿ ದೇವಿ ಮತ್ತು ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ದೋಷಗಳು ಪರಿಹಾರವಾಗುತ್ತದೆ ಎನ್ನಲಾಗುತ್ತದೆ ಹಾಗೂ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಇದರುವುದಿಲ್ಲ. ಅಲ್ಲದೇ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತವೆ. 


* ಆರ್ಥಿಕವಾಗಿ ಸುಸ್ಥಿರ


ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಮನೆಯಲ್ಲಿ ದಾಸವಾಳದ ಗಿಡವನ್ನು ಬೆಳೆಸಬೇಕು. ಪರಿಣಾಮವಾಗಿ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ನಿಮ್ಮ ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುತ್ತವೆ. ಆಸ್ತಿ ವಿವಾದಗಳು ಬಗೆಹರಿಯಲಿವೆ. ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಕುಟುಂಬದ ಸದಸ್ಯರು ಆರೋಗ್ಯವಾಗಿರುತ್ತಾರೆ.


ಇದನ್ನೂ ಓದಿ: Weekly Love Horoscope: ಪ್ರೀತಿಯ ವಿಷಯದಲ್ಲಿ ಫೆಬ್ರವರಿ ನಾಲ್ಕನೇ ವಾರ ಹೇಗಿರುತ್ತದೆ..?


* ಮನೆಗೆ ಧನಾತ್ಮಕ ಶಕ್ತಿ


ಕೌಟುಂಬಿಕ ಕಲಹಗಳನ್ನು ತಪ್ಪಿಸಲು ದಾಸವಾಳ ಗಿಡವನ್ನು ಮನೆಯ ಆವರಣದಲ್ಲಿ ನೆಡಬೇಕು. ಇದು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುತ್ತದೆ.


* ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು


ನೀವು ವ್ಯಾಪಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ,  ಆಗ ಮನೆಯಲ್ಲಿ ದಾಸವಾಳದ ಗಿಡವನ್ನು ನೆಡಬೇಕು. ಈ ದಾಸವಾಳದ ಹೂಗಳನ್ನು ನೀರಿನಲ್ಲಿ ಹಾಕಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಆ ನಂತರ ಆ ನೀರನ್ನು ದಾಸವಾಳ ಗಿಡಕ್ಕೆ ಸುರಿಯಿರಿ. ಇದು ವ್ಯಾಪಾರ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವಿರಿ.


(ಸೂಚನೆ:  ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.