Vastu Tips: ಲಕ್ಷ್ಮಿದೇವಿ ಆಶೀರ್ವಾದಕ್ಕಾಗಿ ನಿತ್ಯ ಮುಂಜಾನೆ ಎದ್ದ ಬಳಿಕ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ
Vastu Tips: ಪ್ರತಿಯೊಬ್ಬರೂ ಸಹ ತಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು. ಸುಖ-ಸಂತೋಷಕ್ಕೆ ಕೊಂಚವೂ ಕೊರತೆ ಆಗಬಾರದು ಎಂದು ಬಯಸುತ್ತಾರೆ. ವಾಸ್ತು ಪ್ರಕಾರ, ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮುಖ್ಯ ದ್ವಾರದಲ್ಲಿ ಈ ಒಂದು ಕೆಲಸ ಮಾಡಿದರೆ ಸಾಕು ಅಂತಹ ಮನೆಯಲ್ಲಿ ಸದಾ ತಾಯಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ.
Vastu Tips: ಮನೆಯಲ್ಲಿ ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿ ನೆಲೆಸಲೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ವಾಸ್ತು ಶಾಸ್ತ್ರದಲ್ಲಿಯೂ ಕೂಡ ಇದಕ್ಕಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತು ಪ್ರಕಾರ, ನಿತ್ಯ ಮುಂಜಾನೆ ಎದ್ದ ಕೂಡಲೇ ಮನೆಯ ಮುಖ್ಯ ದ್ವಾರದ ಬಳಿ ಕೆಲವು ಕೆಲಸಗಳನ್ನು ಮಾಡಿದರೆ ಸಾಕು ಅಂತಹ ಮನೆಯಲ್ಲಿ ಮಾತೆ ಮಹಾಲಕ್ಷ್ಮೀ ಸದಾ ಮನೆಯಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸುವಂತೆ ಮಾಡಲು ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮುಖ್ಯ ಬಾಗಿಲಲ್ಲಿ ಈ ಕೆಲಸ ಮಾಡಿ:-
* ಸ್ವಚ್ಛತೆಗೆ ಪ್ರಾಮುಖ್ಯತೆ:
ಅಶುದ್ಧವಾಗಿರುವ ಜಾಗದಲ್ಲಿ ಸಂಪತ್ತಿನ ದೇವತೆಯಾದ ಮಹಾಲಕ್ಷ್ಮೀ ಎಂದಿಗೂ ಕೂಡ ಕ್ಷಣಮಾತ್ರವೂ ನಿಲ್ಲುವುದಿಲ್ಲ. ಹಾಗಾಗಿ, ನಿತ್ಯ ಮುಂಜಾನೆ ಎದ್ದ ಕೂಡಲೇ ನಿಮ್ಮ ಮನೆಯನ್ನು ಮಾತ್ರವಲ್ಲ, ಮನೆಯ ಮುಖ್ಯ ದ್ವಾರದ ಬಳಿಯೂ ಕೂಡ ಸ್ವಚ್ಛಗೊಳಿಸಿ.
ಇದನ್ನೂ ಓದಿ- ಏಪ್ರಿಲ್ 22ರಿಂದ ಸೂರ್ಯ, ರಾಹು, ಗುರು ಮೈತ್ರಿ: ಈ ರಾಶಿಯವರು ತುಂಬಾ ಎಚ್ಚರದಿಂದಿರಬೇಕು
ರಂಗೋಲಿ:
ವಾಸ್ತು ಶಾಸ್ತ್ರದಲ್ಲಿ, ಮನೆಯ ಯಜಮಾನಿ ಬೆಳಿಗ್ಗೆ ಎದ್ದ ಕೂಡಲೇ ಮನೆ ಮುಂದೆ ಸ್ವಚ್ಛಗೊಳಿಸಿ ರಂಗೋಲಿ ಬಿಡುವುದರಿಂದ ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದಲ್ಲದೆ, ಮನೆಯ ಮುಖ್ಯ ದ್ವಾರದಲ್ಲಿ ರಂಗೋಲಿ ಬಿಡುವುದರಿಂದ ದುಷ್ಟ ಶಕ್ತಿಗಳು ಮನೆಯಿಂದ ಹೊರಹೋಗುತ್ತವೆ ಎಂಬ ನಂಬಿಕೆಯೂ ಇದೆ.
ಇದನ್ನೂ ಓದಿ- Vastu Tips: ಮನೆಯಲ್ಲಿ ಈ 4 ಗಿಡಗಳಿದ್ದರೆ ಸಾಕು ಶನಿ-ರಾಹುವಿನ ದುಷ್ಟ ಕಣ್ಣು ನಿಮ್ಮ ಹತ್ತಿರವೂ ಸುಳಿಯಲ್ಲ
ಸ್ನಾನದ ಬಳಿಕ ತಪ್ಪದೇ ಈ ಕೆಲಸ ಮಾಡಿ:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಯಜಮಾನಿ ಸ್ನಾನ ಮಾಡಿದ ನಂತರ ದೇವರಿಗೆ ಪೂಜೆ ಮಾಡಿ, ಬಳಿಕ ಅರಿಶಿನ ಮಿಶ್ರಿತ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಪ್ರೋಕ್ಷಣೆ ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಗೆ ಲಕ್ಷ್ಮಿಯ ಪ್ರವೇಶವಾಗುತ್ತದೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.