ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ವಾಸ್ತು ಸಲಹೆ: ಜೀವನದಲ್ಲಿ ಸುಖ-ದುಃಖ ಎರಡೂ ಸಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಎಂಬುದು ಯಾವಾಗ ಮತ್ತು ಹೇಗೆ ಬದಲಾಗುತ್ತದೆ ಎಂಬುದನ್ನು ಯಾರಿಗೂ ಸಹ ಊಹಿಸಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಯಾವುದೂ ಸಹ ಶಾಶ್ವತವಲ್ಲ. ನಮ್ಮ ಕಷ್ಟಗಳೂ ಸಹ ಇದಕ್ಕೆ ಹೊರತಾಗಿರುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ ವ್ಯಕ್ತಿಯ ಜೀವನದಲ್ಲಿ ತಲೆದೂರಬಹುದಾದ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸಲಾಗಿದೆ. ಅಂತಹ ಒಂದು ಪರಿಹಾರವು ಬಾತ್ರೂಮ್ನಲ್ಲಿ ಇರಿಸಲಾಗಿರುವ ಬಕೆಟ್ನ ಬಣ್ಣಕ್ಕೆ ಸಂಬಂಧಿಸಿದೆ. 


COMMERCIAL BREAK
SCROLL TO CONTINUE READING

ಕೆಲವು ಬಾರಿ ನಾವು ಎಷ್ಟೇ ಕಷ್ಟ ಪಟ್ಟು ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಎಷ್ಟೇ ದುಡಿದರೂ ಸಹ ಸದಾ ಜೇಬು ಖಾಲಿಯಾಗಿರುತ್ತದೆ. ಇದರ ಹಿಂದೆ ವಾಸ್ತು ದೋಷವೂ ಒಂದು ಕಾರಣವಾಗಿರಬಹುದು. ಆದರೆ, ನಿಮ್ಮ ಬಾತ್ ರೂಂನಲ್ಲಿ ನಿರ್ದಿಷ್ಟ ಬಣ್ಣದ ಬಕೆಟ್ ಇಡುವುದರಿಂದ ಇದರಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. 


ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನ ಗೃಹದಲ್ಲಿ ನಿರ್ದಿಷ್ಟ ಬಣ್ಣದ ಬಕೆಟ್ ಅನ್ನು ಇಡುವುದರಿಂದ  ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬರುತ್ತವೆ. ಇದರೊಂದಿಗೆ ಮನೆಯಲ್ಲಿ ಸಂಪತ್ತಿನ ಆಗಮನವೂ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದರೆ, ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಮನೆಯ ಬಾತ್ ರೂಂನಲ್ಲಿ ಯಾವ ಬಣ್ಣದ ಬಕೆಟ್ ಇಡುವುದು ಶುಭ ಎಂದು ತಿಳಿಯಿರಿ.


ಇದನ್ನೂ ಓದಿ- Vastu Tips: ಈ 5 ವಸ್ತುಗಳನ್ನು ಎಂದಿಗೂ ಯಾರೊಂದಿಗೂ ಶೇರ್ ಮಾಡಬೇಡಿ, ಇದೇ ಬಡತನಕ್ಕೆ ಕಾರಣವಾಗಬಹುದು!


ಬಾತ್ ರೂಂನಲ್ಲಿ ಈ ಬಣ್ಣದ ಬಕೆಟ್ ಇಡುವುದರಿಂದ ವಾಸ್ತು ದೋಷ ನಿವಾರಣೆ:
ವಾಸ್ತು ಶಾಸ್ತ್ರದ ಪ್ರಕಾರ, ವಿವಿಧ ಬಣ್ಣಗಳು ನಮ್ಮ ಜೀವನದಲ್ಲಿ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಕೆಲವು ಬಣ್ಣಗಳನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ. ಅದರಲ್ಲಿ ನೀಲಿ ಬಣ್ಣವೂ ಒಂದು.  ನೀಲಿ ಬಣ್ಣವು ಯಾವುದೇ ವ್ಯಕ್ತಿಯ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಈ ಬಣ್ಣದ ಬಕೆಟ್ ಅನ್ನು ಬಳಸುವುದರಿಂದ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಕಡಿಮೆಯಾಗುತ್ತದೆ ಮತ್ತು ಜೀವನದಲ್ಲಿ ಸಮಸ್ಯೆಗಳನ್ನು ಸಹ ತಪ್ಪಿಸಬಹುದು. ಹಾಗೆಯೇ ಸ್ನಾನಗೃಹದಲ್ಲಿ ನೀಲಿ ಬಣ್ಣದ ವಸ್ತುವನ್ನು ಬಳಸುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. 
 
ಶನಿ-ರಾಹುವಿನ ಅಶುಭ ಪರಿಣಾಮಗಳಿಂದ ಮುಕ್ತಿ:
ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜೀವನದಲ್ಲಿ ಶನಿ-ರಾಹುವಿನ ಕೆಟ್ಟ ಕಾಲ ನಡೆಯುತ್ತಿದ್ದರೆ ಅವರು ನೀಲಿ ಬಣ್ಣದ ವಸ್ತುಗಳನ್ನು ಹೆಚ್ಚಾಗಿ ಬಳಸುವುದರಿಂದ ಪರಿಹಾರ ಪಡೆಯಬಹುದು. ಅಂತಹ ವ್ಯಕ್ತಿಯು ತಮ್ಮ ಬಾತ್ ರೂಂನಲ್ಲಿ ನೀಲಿ ಬಣ್ಣದ ಬಕೆಟ್ಗಳು ಮತ್ತು ಮಗ್ಗಳನ್ನು ಇಡಬೇಕು. ಮಾತ್ರವಲ್ಲ, ಅವರು ಸದಾ ನೀಲಿ ಬಣ್ಣದ ಕರವಸ್ತ್ರವನ್ನು ತಮ್ಮೊಂದಿಗೆ ಇಡಬೇಕು. ಇದರಿಂದ  ಶನಿ-ರಾಹುವಿನ ಅಶುಭ ಪರಿಣಾಮಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ.


ಇದನ್ನೂ ಓದಿ- ಈ ಸರಳ ಉಪಾಯ ಅನುಸರಿಸುವ ಮೂಲಕ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು


ಬಕೆಟ್‌ನಲ್ಲಿ ಯಾವಾಗಲೂ ನೀರು ತುಂಬಿರಲಿ:
ವಾಸ್ತು ಶಾಸ್ತ್ರದ ಪ್ರಕಾರ, ಬಾತ್ ರೂಂನಲ್ಲಿರುವ ಬಕೆಟ್ ಅನ್ನು ಎಂದಿಗೂ ಖಾಲಿ ಇಡಬಾರದು. ಅದರಲ್ಲಿ ಯಾವಾಗಲೂ ಸ್ವಲ್ಪ ನೀರು ತುಂಬಿರಬೇಕು. ಬಕೆಟ್‌ನಲ್ಲಿ ನೀರು ತುಂಬಿದ್ದರೆ ಅಂತಹ ಮನೆಯು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಮನೆಗೆ ಹಣದ ಹೊಸ ಮೂಲಗಳು ಬರುತ್ತಲೇ ಇರುತ್ತವೆ ಎಂಬ ನಂಬಿಕೆಯೂ ಇದೆ.


ಕಣ್ಣುಗಳಿಗೆ ಪ್ರಯೋಜನಕಾರಿ: 
ನೀಲಿ ಬಕೆಟ್‌ನ ಪ್ರಯೋಜನವೆಂದರೆ ಅದನ್ನು ನೈಸರ್ಗಿಕ ಬಣ್ಣವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಬಣ್ಣವು ಕಣ್ಣುಗಳನ್ನು ಕುಟುಕುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ನಾನಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಅನ್ನು ಬಳಸಿದರೆ, ಅದು ದೃಷ್ಟಿಯನ್ನು ಹೆಚ್ಚಿಸುತ್ತದೆ. ಇದು ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.