Vastu Tips: ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಬೇಕೆಂದರೆ ಮನೆಯಲ್ಲಿ ಈ ದೇವರ ವಿಗ್ರಹ ಪ್ರತಿಷ್ಠಾಪಿಸಿ!

ಸರಿಯಾದ ಸ್ಥಳದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ.

Written by - Puttaraj K Alur | Last Updated : Sep 9, 2022, 09:10 AM IST
  • ಕೆಲವು ವಸ್ತುಗಳನ್ನು ಮನೆಯಲ್ಲಿಡುವುದರಿಂದ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ
  • ಸರಿಯಾದ ಸ್ಥಳದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದರೆ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸಿಗುತ್ತದೆ
  • ನಿಮ್ಮ ನಿವಾಸದಲ್ಲಿ ಸುಖ-ಸಂತೋಷದ ಜೊತೆಗೆ ಸಂಪತ್ತು-ಸಮೃದ್ಧಿ ಇರುತ್ತದೆ
Vastu Tips: ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಬೇಕೆಂದರೆ ಮನೆಯಲ್ಲಿ ಈ ದೇವರ ವಿಗ್ರಹ ಪ್ರತಿಷ್ಠಾಪಿಸಿ! title=
Vastu Tips for Money

ನವದೆಹಲಿ: ನಿಮ್ಮ ಮನೆಯಲ್ಲಿ ಹಣದ ಕೊರತೆ ಇದೆಯೇ? ಹಣ ಉಳಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ? ಹಣ ಬಂದ ತಕ್ಷಣವೇ ಖರ್ಚಾಗುತ್ತದೆಯೇ? ಇಂತಹ ಆರ್ಥಿಕ ಬಿಕ್ಕಟ್ಟು ಮನೆಯ ವಾಸ್ತುದೋಷಕ ಕಾರಣಕ್ಕೆ ಬಂದಿರಬಹುದು. ಈ ಸಮಸ್ಯೆಯ ನಿವಾರಣಗೆ ನೀವು ಕೆಲವು ಪರಿಹಾರ ಕ್ರಮಗಳನ್ನು ಮಾಡಬೇಕು.

ಈ ಸಮಸ್ಯೆ ಹೋಗಲಾಡಿಸಲು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿರುವ ಕೆಲವು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ಈ ಸಲಹೆಗಳನ್ನು ಪಾಲಿಸಿದರೆ ತಾಯಿ ಲಕ್ಷ್ಮಿದೇವಿ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ. ಲಕ್ಷ್ಮಿದೇವಿಯ ಅನುಗ್ರಹದಿಂದ ಆರ್ಥಿಕ ಬಿಕ್ಕಟ್ಟಿನಿಂದಲೂ ನೀವು ಪರಿಹಾರ ಪಡೆಯಬಹುದು. ಇದಕ್ಕೆ ನೀವು ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು. ಈ ವಸ್ತುಗಳನ್ನು ಇಡುವುದರಿಂದ ಮನೆ ಮತ್ತು ಲಕ್ಷ್ಮಿದೇವಿಯ ನಿವಾಸದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.

ಇದನ್ನೂ ಓದಿ: Palmistry : ಅಂಗೈಯಲ್ಲಿರುವ ಈ ಗುರುತುಗಳು ರಾಜಯೋಗ ಸೂಚಿಸುತ್ತವೆ

ಸುಖ, ಸಮೃದ್ಧಿ & ಸಂಪತ್ತು ಎಲ್ಲರ ಆಸೆ

ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಹಾತೊರೆಯುತ್ತಾನೆ. ಸುಖ-ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಯಾವುದೇ ಪ್ರದೇಶ, ನಗರ, ರಾಜ್ಯ ಅಥವಾ ಪ್ರಪಂಚದಲ್ಲಿ ವಾಸಿಸುವ ಪ್ರತಿಯೊಬ್ಬರ ಬಯಕೆಯೂ ಇದೆ ಆಗಿತ್ತದೆ. ಯಾವುದೇ ವ್ಯಕ್ತಿ ತಾನು ಶ್ರೀಮಂತನಾಗಿಲ್ಲದಿದ್ದರೂ ಪರವಾಗಿಲ್ಲ ಬಡತನ ಮತ್ತು ಹಣದ ಕೊರತೆ ಇರಬಾರದೆಂದು ಆಶಿಸುತ್ತಾನೆ.

ಯಾವುದೇ ವ್ಯಕ್ತಿ ಬಡತನದ ಮುಖವನ್ನು ನೋಡಲು ಬಯಸುವುದಿಲ್ಲ. ಯಾರೇ ಆಗಲಿ ಮೊದಲು ತಮ್ಮ ಮಕ್ಕಳ ಬೇಡಿಕೆ ಪೂರೈಸಲು ಬಯಸುತ್ತಾರೆ. ಪತ್ನಿ-ಪೋಕಷರು ಮತ್ತು ಮಕ್ಕಳ ಆಸೆಗಳನ್ನು ಪೂರೈಸುವುದೇ ವ್ಯಕ್ತಿಯೊಬ್ಬನ ಜವಾಬ್ದಾರಿಗಳಾಗಿರುತ್ತವೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯು ತನಗೆ ಬಡತನ ಬಾರದಿರಲಿ, ಹಣದ ಕೊರತೆ ಎದುರಾಗದಿರಲಿ ಎಂದು ಬಯಸುತ್ತಾನೆ.   

ಇದನ್ನೂ ಓದಿ: Panchak September 2022: ನಾಳೆಯಿಂದ 'ಚೋರ ಪಂಚಕ' ಆರಂಭ, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ!

ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಬೇಕು

ನೀವು ಬಡತನ ತಪ್ಪಿಸಲು ಬಯಸಿದ್ರೆ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು. ಇವುಗಳನ್ನು ಇಟ್ಟುಕೊಂಡ ನಂತರ ಬಡತನವು ಮನೆಗೆ ಬರುವುದಿಲ್ಲ. ಮೊದಲನೆಯದು ಗಣೇಶ ಮೂರ್ತಿ. ಶ್ರೀ ವಿನಾಯಕನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಮನೆಯಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನನ್ನು ಎಲ್ಲಾ ಅಡೆತಡೆಗಳ ನಾಶಕನೆಂದು ಪರಿಗಣಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವುದರಿಂದ ಯಾವುದೇ ಕೆಲಸ ಹಾಳಾಗುವುದಿಲ್ಲ ಮತ್ತು ಇದರಿಂದ ಹೆಚ್ಚು ಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಗಣೇಶನ ಮೂರ್ತಿಯನ್ನು ಮನೆಯಲ್ಲಿಡಬೇಕು.

ಈ ವಿಗ್ರಹವನ್ನು ಮನೆಯಲ್ಲಿ ಇರಿಸುವಾಗ ಅದರ ದೃಷ್ಟಿ ಮನೆಯ ಮುಖ್ಯ ದ್ವಾರದ ಮೇಲೆ ಬೀಳುವ ಜಾಗದಲ್ಲಿರುವಂತೆ ವಿಶೇಷ ಕಾಳಜಿ ವಹಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯು ಮನೆಗೆ ಬೇಗ ಬರುತ್ತಾಳೆ ಮತ್ತು ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಬಪ್ಪನನ್ನು ರಿದ್ಧಿ-ಸಿದ್ಧಿ ನೀಡುವವ ಎಂದು ಪರಿಗಣಿಸಲಾಗಿದೆ. ಆತನಿಂದ ನಿಮ್ಮ ಬಡತನವು ಮನೆಯಿಂದ ದೂರವಿರುತ್ತದೆ. ಆಹಾರ ಮತ್ತು ಹಣದ ಸಮಸ್ಯೆ ನಿಮಗೆ ಯಾವಾಗಲೂ ಕಾಡುವುದಿಲ್ಲ. ಹೀಗಾಗಿ ಸರಿಯಾದ ಸ್ಥಳದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News