ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಯಾವುದೇ ಒಂದು  ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗುರುವು ಇದೀಗ ಮೀನ ರಾಶಿಯಲ್ಲಿ ಸಾಗುತ್ತಿದೆ. ಫೆಬ್ರವರಿ 15 ರಂದು ಶುಕ್ರನ ಪ್ರವೇಶ ಕೂಡಾ ಮೀನರಾಶಿಯಲ್ಲಾಗಿದೆ. ಈ ಮೂಲಕ ಶುಕ್ರ ಮತ್ತು ಗುರುವಿನ ಸಂಯೋಗ ಮೀನರಾಶಿಯಲ್ಲಿ ಆಗಿದೆ. ಈ ಸಂಯೋಗವು ಎಲ್ಲಾ 12 ರಾಶಿಯವರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೆ 3 ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. 


COMMERCIAL BREAK
SCROLL TO CONTINUE READING

ವೃಷಭ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಮತ್ತು ಶುಕ್ರನ ಸಂಯೋಜನೆಯು ಈ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಈ ಮೈತ್ರಿಯು ವೃಷಭ ರಾಶಿಯವರ ಸಂಕ್ರಮಣದ ಜಾತಕದ ಲಾಭದಾಯಕ ಸ್ಥಳದಲ್ಲಿ ರಚನೆಯಾಗಲಿದೆ.  ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ವಿತ್ತೀಯ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.  ಈ ಸಂದರ್ಭದಲ್ಲಿ ಯಾವುದೇ ಹೊಸ ಕೆಲಸವನ್ನು ಆರಂಭಿಸಬಹುದು. ಈ ಸಮಯದಲ್ಲಿ ಎಲ್ಲಾ ಗ್ರಹಗಳ ಅನುಗ್ರಹ ಸಿಗಲಿದೆ. 


ಇದನ್ನೂ ಓದಿ : Budh Gochar 2023 : ಬುಧ ಸಂಕ್ರಮಣ 2023 ರಿಂದ ಬುಧಾದಿತ್ಯ ಯೋಗ, ಈ ರಾಶಿಯವರಿಗೆ ಭಾರಿ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ!


ಮೇಷ ರಾಶಿ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಮತ್ತು ಶುಕ್ರನ ಸಂಯೋಗವು  ಮೇಷ ರಾಶಿಯವರಿಗೆ ಕೂಡಾ ಲಾಭದಾಯಕವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಸೌಕರ್ಯಗಳು ಹೆಚ್ಚಾಗುತ್ತವೆ. ಗೌರವ ಹೆಚ್ಚಾಗುವುದು. ವಿದೇಶಕ್ಕೆ ಸಂಬಂಧಿಸಿದ ವ್ಯವಹಾರ ಮಾಡುವವರು ಉತ್ತಮ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. ವಿದೇಶಕ್ಕೆ ಹೋಗಲು ಇಚ್ಛಿಸುವವರ ಇಷ್ಟಾರ್ಥಗಳು ನೆರವೇರುತ್ತವೆ. ಯಾವುದೇ ರೀತಿಯ ಆಸ್ತಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು. 


ಕಟಕ ರಾಶಿ :
ಗುರು ಮತ್ತು ಶುಕ್ರನ ಸಂಯೋಗವು ಕರ್ಕಾಟಕ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.ಈ ಸಂಯೋಗವು  ಕಟಕ ರಾಶಿಯ ಅದೃಷ್ಟದ ಸ್ಥಾನದಲ್ಲಿ ರೂಪುಗೊಳ್ಳಲಿದೆ. ಅದಕ್ಕಾಗಿಯೇ ಈ ಸಮಯದಲ್ಲಿ ಅದೃಷ್ಟ ನಿಮ್ಮನ್ನು ಹಿಂಬಾಲಿಸಲಿದೆ. ಹಿಂದೆ ಮಾಡಿದ ಕೆಲಸಗಳಿಗೂ ಈ ಅವಧಿಯಲ್ಲಿ ಶುಭ ಫಲ ಸಿಗುತ್ತದೆ. 


ಇದನ್ನೂ ಓದಿ : ಈ ದಿನ ಶನಿಯ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಎಂಟ್ರಿ, ಬುಧಾದಿತ್ಯ ಯೋಗದಿಂದ 3 ರಾಶಿಗಳಿಗೆ ಆಕಸ್ಮಿಕ ಧನಪ್ರಾಪ್ತಿಯ ಯೋಗ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.