ಈ ದಿನ ಶನಿಯ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಎಂಟ್ರಿ, ಬುಧಾದಿತ್ಯ ಯೋಗದಿಂದ 3 ರಾಶಿಗಳಿಗೆ ಆಕಸ್ಮಿಕ ಧನಪ್ರಾಪ್ತಿಯ ಯೋಗ!

Mercury Transit In Aquarius: ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಹಾಗೂ ಆದಿತ್ಯ ಅಂದರೆ ಸೂರ್ಯನ ಮೈತ್ರಿ ನೆರವೇರಲಿದ್ದು, ಇದರಿಂದ ಕುಂಭ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ನಿರ್ಮಾಣಗೊಳ್ಳಲಿದೆ. ಈ ರಾಜಯೋಗದ ಕಾರಣ ಮೂರು ರಾಶಿಗಳ ಜಾತಕದವರಿಗೆ ಭಾರಿ ಮತ್ತು ಆಕಸ್ಮಿಕ ಧನಲಾಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಲ್ಲದೆ ಇವರ ಜೀವನದಲ್ಲಿ ಸಾಕಷ್ಟು ಉನ್ನತಿಯ ಸಂಕೇತಗಳು ಕೂಡ ಸಿಗುತ್ತಿವೆ.

Written by - Nitin Tabib | Last Updated : Feb 20, 2023, 07:29 PM IST
  • ಈ ರಾಜಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಕಂಡುಬರಲಿದೆ.
  • ಆದರೆ 3 ರಾಶಿಗಳ ಜನರು ಈ ಅತ್ಯಂತ ಶುಭಯೋಗದ ಲಾಭವನ್ನು ಪಡೆಯಲಿದ್ದಾರೆ,
  • ಈ ಅವಧಿಯಲ್ಲಿ ಈ ಜನರಿಗೆ ಹಠಾತ್ ವಿತ್ತೀಯ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳು ಕಂಡುಬರುತ್ತಿವೆ.
ಈ ದಿನ ಶನಿಯ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಎಂಟ್ರಿ, ಬುಧಾದಿತ್ಯ ಯೋಗದಿಂದ 3 ರಾಶಿಗಳಿಗೆ ಆಕಸ್ಮಿಕ ಧನಪ್ರಾಪ್ತಿಯ ಯೋಗ! title=
ಶನಿಯ ರಾಶಿಗೆ ಗ್ರಹಗಳ ರಾಜಕುಮಾರನ ಎಂಟ್ರಿ... ಯಾರಿಗೆ ಲಾಭ?

Budhaditya Rajyog: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ರಾಜಯೋಗವನ್ನು ಅತ್ಯಂತ ಮಂಗಳಕರ ಮತ್ತು ಫಲಪ್ರದ ಯೋಗವೆಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಈ ರಾಜಯೋಗವು ರೂಪುಗೊಳ್ಳುತ್ತದೆಯೋ ಆ ವ್ಯಕ್ತಿಗೆ ಸಮಾಜದಲ್ಲಿ ಘನತೆ-ಗೌರವ, ಪ್ರತಿಷ್ಠೆ ಲಭಿಸುತ್ತದೆ. ಗ್ರಹಗಳ ರಾಜ ಸೂರ್ಯ ಪ್ರಸ್ತುತ ಕುಂಭ ರಾಶಿ ವಿರಾಜಮಾನನಾಗಿದ್ದಾನೆ ಮತ್ತು ಫೆಬ್ರವರಿ 27 ರಂದು ಬುಧ ಕೂಡ ಕುಂಭ ರಾಶಿಯನ್ನು ಪ್ರವೇಶಿಸಲಿದೆ.  ಇದರಿಂದ ಅತ್ಯಂತ ಮಂಗಳಕರವಾದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಕಂಡುಬರಲಿದೆ. ಆದರೆ 3 ರಾಶಿಗಳ ಜನರು ಈ ಅತ್ಯಂತ ಶುಭಯೋಗದ ಲಾಭವನ್ನು ಪಡೆಯಲಿದ್ದಾರೆ, ಈ ಅವಧಿಯಲ್ಲಿ ಈ ಜನರಿಗೆ ಹಠಾತ್ ವಿತ್ತೀಯ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳು ಕಂಡುಬರುತ್ತಿವೆ. ಅದೃಷ್ಟವಂತ ಆ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಮಕರ ರಾಶಿ
ಬುಧಾದಿತ್ಯ ರಾಜಯೋಗವು ಮಕರ ರಾಶಿಯವರ ಪಾಲಿಗೆ ಅತ್ಯಂತ  ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ ದ್ವಿತೀಯ ಹಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ನೀವು ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ. ಇದರೊಂದಿಗೆ, ಅದೃಷ್ಟ ಕೂಡ ನಿಮ್ಮೊಂದಿಗೆ ಇರಲಿದೆ.  ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಅಲ್ಲದೆ, ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿರುವ ಜನರು ಈ ಅವಧಿಯಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ-ಮೀನ ರಾಶಿಯಲ್ಲಿ ವ್ಯಾಪಾರ ಕಾರಕ ಬುಧನ ಉದಯ, ಈ ರಾಶಿಗಳ ಜನರು ಮುಟ್ಟಿದ್ದೆಲ್ಲ ಚಿನ್ನ!

ವೃಷಭ ರಾಶಿ
ಬುಧಾದಿತ್ಯ ರಾಜಯೋಗವು ವೃಷಭ ರಾಶಿಯವರಿಗೆ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಕ್ಯಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಿರಿ. ಇದರೊಂದಿಗೆ, ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಕಾಣಬಹುದು. ನೀವು ಯಾವುದೇ ಆಸ್ತಿ ಅಥವಾ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಸಮಯವು ಅನುಕೂಲಕರವಾಗಿರುತ್ತದೆ. ಅಲ್ಲದೆ, ಈ ಸಮಯವು ಉದ್ಯಮಿಗಳಿಗೆ ಅನುಕೂಲಕರ ಸಾಬೀತಾಗಲಿದೆ. ಆದಾಯದಲ್ಲಿ ಹೆಚ್ಚಳವಾಗಬಹುದು. ಮತ್ತೊಂದೆಡೆ, ಉದ್ಯೋಗಿಗಳ ಅಪೇಕ್ಷಿತ ಹುದ್ದೆ ಸಿಗುವ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶ ಸಿಗಬಹುದು. ಮತ್ತೊಂದೆಡೆ, ನೀವು ರಾಜಕೀಯದೊಂದಿಗೆ ಸಂಬಂಧ ಹೊಂದಿದ್ದರೆ, ನಿಮಗೆ ಹುದ್ದೆ ಸಿಗಲಿದೆ.

ಇದನ್ನೂ ಓದಿ-ಮಾರ್ಚ್ 13 ರಂದು ಗ್ರಹಗಳ ಸೇನಾಪತಿಯ ಮಿಥುನ ಗೋಚರ, 3 ರಾಶಿಗಳ ಜನರಿಗೆ ಧನಲಾಭ-ಭಾಗ್ಯೋದಯದ ಯೋಗ!

ಸಿಂಹ ರಾಶಿ
ಬುಧಾದಿತ್ಯ ರಾಜಯೋಗದ ರಚನೆಯೊಂದಿಗೆ, ಸಿಂಹ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ ಸಪ್ತಮೇಶ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ಇದರೊಂದಿಗೆ ಬಾಳ ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರಲಿದೆ. ಇನ್ನೊಂದೆಡೆ ಅವಿವಾಹಿತರ ವಿವಾಹಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಮುಂದುವರೆಯಲಿವೆ. ಈ  ಸಮಯದಲ್ಲಿ, ನೀವು ದೊಡ್ಡ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಬಹುದು. ಇದರಲ್ಲಿ ನಿಮಗೆ ಲಾಭದ ಎಲ್ಲಾ ಸಾಧ್ಯತೆಗಳಿವೆ. ಮಗುವಿನ ಕಡೆಯಿಂದ ನೀವು ಕೆಲ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

ಇದನ್ನೂ ಓದಿ-Ugadi 2023: ಮಾರ್ಚ್ 22 ರಿಂದ ಹಿಂದೂ ಹೊಸವರ್ಷ ಆರಂಭ, 3 ರಾಶಿಗಳ ಜನರ ಜೀವನದಲ್ಲಿ ಭಾಗ್ಯೋದಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News