Shukra Gochar 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಐಷಾರಾಮಿ, ಪ್ರೀತಿ, ಪ್ರಣಯಕಾರಕ ಶುಕ್ರ ಬಲವಾಗಿದ್ದಾಗ ಅವರ ಜೀವನದಲ್ಲಿ ಸುಖ-ಸಂಪತ್ತಿಗೆ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. 2024ರ ಮಾರ್ಚ್ 31ರಂದು ಮೀನ ರಾಶಿಗೆ ಪ್ರವೇಶಿಸಿರುವ ಶುಕ್ರನು ಏಪ್ರಿಲ್ 24ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವು ಕೆಲವು ರಾಶಿಯವರ ಜೀವನದಲ್ಲಿ ಪ್ರೀತಿಯ ಹೊಳೆ ಹರಿಸಲಿದ್ದು, ಸಂಪತ್ತು ವೃದ್ಧಿಯಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ....  


COMMERCIAL BREAK
SCROLL TO CONTINUE READING

ಮೀನ ರಾಶಿಯಲ್ಲಿ ಶುಕ್ರ ಸಂಚಾರ: ಈ ರಾಶಿಯವರಿಗೆ ಸಿಗಲಿದೆ ನಿಜವಾದ ಪ್ರೀತಿ, ಹೆಚ್ಚಾಗಲಿದೆ ಸಂಪತ್ತು:- 
ವೃಷಭ ರಾಶಿ: 

ಶುಕ್ರ ರಾಶಿ ಪರಿವರ್ತನೆಯು (Shukra Rashi Parivartane) ವೃಷಭ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸಲಿದೆ. ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು, ಪ್ರತಿ ಕೆಲಸದಲ್ಲೂ ವಿಜಯ ಸಾಧಿಸುವಿರಿ. ನಿಮ್ಮ ಬಹುದಿನದ ಕನಸುಗಳು ಈಡೇರಲಿವೆ. 


ಕರ್ಕಾಟಕ ರಾಶಿ: 
ಶುಕ್ರ ಸಂಚಾರವು ಕರ್ಕಾಟಕ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲವನ್ನು ನೀಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ತೀರ್ಥಯಾತ್ರೆ ಕೈಗೊಳ್ಳುವ ಅವಕಾಶವೂ ಪ್ರಾಪ್ತಿಯಾಗಲಿದೆ. 


ಇದನ್ನೂ ಓದಿ- Surya Gochar 2024: ಸೂರ್ಯ ಸಂಚಾರದಿಂದ ಬೆಳಗಲಿದೆ ಈ ರಾಶಿಯವರ ಭಾಗ್ಯ, ತಿಂಗಳೆಲ್ಲಾ ಅದೃಷ್ಟ


ವೃಶ್ಚಿಕ ರಾಶಿ: 
ಶುಕ್ರ ರಾಶಿ ಪರಿವರ್ತನೆಯು ವೃಶ್ಚಿಕ ರಾಶಿಯ ಜನರ ಜೀವನದಲ್ಲಿ ಪ್ರೀತಿಯ (Love) ಹೊಳೆಯನ್ನು ಹರಿಸಲಿದೆ. ದಂಪತಿಗಳ ನಡುವೆ ಮೂಡಿದ್ದ ಭಿನ್ನಾಭಿಪ್ರಾಯಗಳು ಸರಿ ಹೋಗಲಿವೆ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. 


ಧನು ರಾಶಿ: 
ಶುಕ್ರ ಸಂಚಾರ ಬದಲಾವಣೆಯು ಧನು ರಾಶಿಯವರಿಗೆ ಭೂಮಿಯಿಂದ ಲಾಭ, ವಾಹನ ಖರೀದಿ ಯೋಗವೂ ಇದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಹೆತ್ತವರ ಆಶೀರ್ವಾದದಿಂದ ಹಣಕಾಸಿನ ಸ್ಥಿತಿಯೂ ಬಲಗೊಳ್ಳಲಿದೆ. 


ಇದನ್ನೂ ಓದಿ- 30 ವರ್ಷಗಳ ನಂತರ ಈ ರಾಶಿಗಳಿಗೆ ಯುಗಾದಿ ದಿನವೇ ರಾಜಯೋಗ... ಅಪಾರ ಹಣ ಸಂಪತ್ತು ಜೊತೆಗೆ ಎಲ್ಲ ಕೆಲಸದಲ್ಲೂ ವಿಜಯ, ಅದೃಷ್ಟವೆಲ್ಲ ನಿಮ್ಮದೇ!!


ಮೀನ ರಾಶಿ: 
ಶುಕ್ರ ಸಂಚಾರವು ಮೀನ ರಾಶಿಯ ಜನರಿಗೆ ವೃತ್ತಿ (Career) ಜೀವನದಲ್ಲಿ ಕೀರ್ತಿಯನ್ನು ಹೆಚ್ಚಿಸಲಿದೆ. ಇನ್ನೂ ಒಂಟಿಯಾಗಿರುವ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಯೋಗವೂ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.