ಅನಂತ ಚತುರ್ದಶಿಯಂದು ಈ ರಕ್ಷಾಸೂತ್ರ ಧರಿಸಿ: ಅಡೆತಡೆಗಳು ನಿವಾರಣೆ ಜೊತೆಗೆ ನಿಮಗೆ ಯಶಸ್ಸು ಸಿಗುತ್ತದೆ!
ನಾಳೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಅನಂತ ಚತುರ್ದಶಿ ಉಪವಾಸ ಆಚರಿಸಲಾಗುತ್ತದೆ. ಈ ದಿನದಂದು 14 ಗಂಟುಗಳ ರಕ್ಷಾಸೂತ್ರವನ್ನು ಧರಿಸುವುದು ಅಪಾರ ಯಶಸ್ಸನ್ನು ನೀಡುತ್ತದೆ.
ನವದೆಹಲಿ: ಹಿಂದೂ ಧರ್ಮದಲ್ಲಿ ಅನಂತ ಚತುರ್ದಶಿಗೆ ಹೆಚ್ಚಿನ ಮಹತ್ವವಿದೆ. ಈ ದಿನದಂದು ಗಣೇಶೋತ್ಸವವು ಗಣಪತಿ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ. 10 ದಿನಗಳ ಕಾಲ ತನ್ನ ಭಕ್ತರೊಂದಿಗಿದ್ದ ಗಣೇಶನು ತನ್ನ ಲೋಕಕ್ಕೆ ಹಿಂದಿರುಗುತ್ತಾನೆ. ಗಣೇಶ ಪೂಜೆ-ನಿಮಜ್ಜನದ ಹೊರತಾಗಿ ಅನಂತ ಚತುರ್ದಶಿಯ ದಿನವು ವಿಷ್ಣುವಿನ ಆರಾಧನೆಗೆ ಬಹಳ ವಿಶೇಷವಾಗಿದೆ.
ಈ ದಿನಾಂಕವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಭಗವಾನ್ ವಿಷ್ಣುವನ್ನು ಆರಾಧಿಸುವುದು, ಉಪವಾಸ ಮಾಡುವುದು, ಕಥೆಗಳನ್ನು ಓದುವುದು ಈ ದಿನ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೆ ಈ ದಿನದಂದು 14 ಗಂಟುಗಳ ವಿಶೇಷ ರಕ್ಷಾಸೂತ್ರವನ್ನು ಧರಿಸಬೇಕು. ಭಗವಾನ್ ವಿಷ್ಣುವಿನ ಕೃಪೆಯಿಂದ ಈ ರಕ್ಷಾಸೂತ್ರವು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: Pitru Paksha : ಹೆಣ್ಣು ಮಕ್ಕಳೂ ಶ್ರಾದ್ಧ ಕರ್ಮ ಮಾಡಬಹುದೇ! ಧರ್ಮಗ್ರಂಥ ಏನು ಹೇಳುತ್ತೆ?
ಅನಂತ ಚತುರ್ದಶಿ ತಿಥಿ ಮತ್ತು ಶುಭ ಸಮಯ
ಭಾದ್ರಪದ ಮಾಸದ ಚತುರ್ದಶಿ ದಿನಾಂಕವು ಸೆಪ್ಟೆಂಬರ್ 8ರ ಗುರುವಾರ ರಾತ್ರಿ 09.02ರಿಂದ ಸೆಪ್ಟೆಂಬರ್ 9ರ ಶುಕ್ರವಾರ ಸಂಜೆ 06.07ರವರೆಗೆ ಇರುತ್ತದೆ. ಉದಯತಿಥಿ ಪ್ರಕಾರ ಅನಂತ ಚತುರ್ದಶಿಯನ್ನು ಸೆಪ್ಟೆಂಬರ್ 9ರ ಗುರುವಾರ ಆಚರಿಸಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವಿನ ಆರಾಧನೆ, ಉಪವಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದರೊಂದಿಗೆ ಅನಂತ ಚತುರ್ದಶಿಯ ಕಥೆಯನ್ನೂ ಓದಬೇಕು. ಹೀಗೆ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ಕೈಗೆ 14 ಗಂಟುಗಳ ರಕ್ಷಾಸೂತ್ರ ಕಟ್ಟಿಕೊಳ್ಳಬೇಕು
ಅನಂತ ಚತುರ್ದಶಿ ಉಪವಾಸ ಮತ್ತು ಪೂಜೆಯ ಹೊರತಾಗಿ ಈ ದಿನ ಕೆಲವು ಪರಿಹಾರ ಕ್ರಮಗಳನ್ನು ಮಾಡಬೇಕು. ಅನಂತ ಚತುರ್ದಶಿಯ ದಿನದಂದು ನಿಮ್ಮ ಕೈಯಲ್ಲಿ ಅನಂತ ದಾರವನ್ನು ಕಟ್ಟಿಕೊಳ್ಳಬೇಕು. ಇದನ್ನು ಕಟ್ಟುವುದರಿಂದ ಜೀವನದ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಅನಂತ ಸೂತ್ರವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ನೀಡುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಿಷ್ಣುವಿಗೆ ಅರ್ಪಿಸುವ 14 ಗಂಟುಗಳ ಈ ರಕ್ಷಾಸೂತ್ರವು 14 ಲೋಕಗಳನ್ನು ಪ್ರತಿನಿಧಿಸುತ್ತದೆ. ಅನಂತ ಚತುರ್ದಶಿಯ ದಿನದಂದು ನಿಯಮದ ಪ್ರಕಾರ ಈ ದಾರವನ್ನು ಕಟ್ಟಿಕೊಂಡು ಉಪವಾಸ ಮಾಡಿ ಪೂಜಿಸುವುದರಿಂದ ಪಾಪಗಳು ಪರಿಹಾರವಾಗಿ ಪುಣ್ಯ-ಫಲಗಳು ದೊರೆಯುತ್ತವೆ.
ಇದನ್ನೂ ಓದಿ: ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ ದರಿದ್ರ ವಕ್ಕರಿಸಿಕೊಳ್ಳುವುದು ಹುಷಾರ್.!
ಈ ರೀತಿ ಅನಂತ ಸೂತ್ರವನ್ನು ಧರಿಸಿ
ಅನಂತ ಚತುರ್ದಶಿಯಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ದೇವಸ್ಥಾನಕ್ಕೆ ಅಥವಾ ಮನೆಗೆ ಹೋಗಿ ಪೂಜೆ ಮಾಡಬೇಕು. ಇದಕ್ಕಾಗಿ ಕಲಶವನ್ನು ಸ್ಥಾಪಿಸಿ ಅದರ ಮೇಲೆ ಲೋಹದ ಮಡಕೆಯನ್ನು ಇರಿಸಿ ಅನಂತ ದೇವರನ್ನು ಸ್ಥಾಪಿಸಬೇಕು. ಇದು ವಿಷ್ಣುವಿನ ರೂಪವಾಗಿರಬೇಕು. ನಂತರ ನೂಲು ಅಥವಾ ರೇಷ್ಮೆ ದಾರಕ್ಕೆ ಅರಿಶಿನ ಮತ್ತು ಕುಂಕುಮದ ಬಣ್ಣ ಹಾಕಿ ಅದರಲ್ಲಿ 14 ಗಂಟುಗಳನ್ನು ಹಾಕಿ ರಕ್ಷಾಸೂತ್ರವನ್ನು ಮಾಡಬೇಕು. ಭಗವಂತನಿಗೆ ಹಣ್ಣು, ಹೂವು, ಅರಿಶಿನ, ಅಕ್ಷತೆ ಮತ್ತು ಪ್ರಸಾದ ಇತ್ಯಾದಿಗಳನ್ನು ಅರ್ಪಿಸಿ ನಿಯಮಾನುಸಾರ ಪೂಜಿಸಬೇಕು. ಕೊನೆಯಲ್ಲಿ ಅನಂತ ಚತುರ್ದಶಿಯ ಕಥೆಯನ್ನು ಓದಿ ಬಳಿಕ ಬಲಗೈಯಲ್ಲಿ ಅನಂತ ಸೂತ್ರವನ್ನು ಧರಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.