Turtle ring Benefits: ಆಮೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳಕರವಾಗಿದೆ. ಅನೇಕರು ಆಮೆಯ ಉಂಗುರವನ್ನು ಧರಿಸುವುದನ್ನು ನಾವು ನೋಡುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಮೆಯ ಉಂಗುರವನ್ನು ಧರಿಸಲು ಕೆಲವು ನಿಯಮಗಳಿವೆ. ಅದಕ್ಕನುಗುಣವಾಗಿ ಆಮೆಯ ಉಂಗುರ ಧರಿಸಿದರೆ ಆರ್ಥಿಕ ಲಾಭವನ್ನು ಪಡೆಯುತ್ತೀರಿ.


COMMERCIAL BREAK
SCROLL TO CONTINUE READING

ಆರ್ಥಿಕ ಸಮಸ್ಯೆಗಳಿಂದ ಸುತ್ತುವರಿದಿದ್ದರೆ ವಾಸ್ತು ನಿಯಮಗಳ ಪ್ರಕಾರ ಆಮೆಯ ಉಂಗುರವನ್ನು ಧರಿಸಿ. ಫೆಂಗ್ ಶೂಯಿ ವಾಸ್ತುದಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಮನೆಯಲ್ಲಿ ಆಮೆಯ ಆಕೃತಿ ಇಟ್ಟುಕೊಂಡರೆ ಆ ಮನೆಯ ವಾಸ್ತುದೋಷಗಳು ದೂರವಾಗುತ್ತವೆ. ಆ ಮನೆಯಲ್ಲಿರುವವರು ಸುಖಮಯ ಜೀವನ ನಡೆಸುತ್ತಾರೆ. ವಿಶೇಷವಾಗಿ ಲಕ್ಷ್ಮಿ ದೇವಿಯು ಆಮೆಯ ಉಂಗುರವನ್ನು ಧರಿಸುವವರ ಬಗ್ಗೆ ಕೃಪೆ ತೋರುತ್ತಾಳೆ ಎಂದು ನಂಬಲಾಗಿದೆ. ಏಕೆಂದರೆ ಆಮೆಯು ಭಗವಾನ್ ವಿಷ್ಣುವಿನ ಎರಡನೇ ಅವತಾರವಾದ ಕೂರ್ಮಾವತಾರವಾಗಿದೆ.


ಇದನ್ನೂ ಓದಿ: Budhaditya Rajyog 2024: ಕೆಲವೇ ಗಂಟೆಗಳಲ್ಲಿ ಬುಧಾದಿತ್ಯ ರಾಜಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಭಾರಿ ಧನ-ಸಂಪತ್ತು ಪ್ರಾಪ್ತಿ! 


ಸಾಮಾನ್ಯವಾಗಿ ಆಮೆಯ ಉಂಗುರವು ಒಳ್ಳೆಯತನದ ಸಂಕೇತವಾಗಿದೆ. ಸರಿಯಾದ ನಿಯಮಗಳ ಪ್ರಕಾರ ಅದನ್ನು ಧರಿಸಬೇಕು. ಇಲ್ಲದಿದ್ದರೆ ಅದು ಅಶುಭವನ್ನು ತರುತ್ತದೆ. ವಿಶೇಷವಾಗಿ ಆಮೆಯ ಉಂಗುರವನ್ನು ಧರಿಸುವಾಗ ನೆನಪಿಡುವ ಕೆಲವು ನಿಯಮಗಳಿವೆ. ಅದಕ್ಕೆ ತಕ್ಕಂತೆ ಧರಿಸಿದರೆ ನಿಮಗೆ ಹಣದ ಸಮಸ್ಯೆ ಇರುವುದಿಲ್ಲ. 


ಅದರಲ್ಲೂ ಈ ಆಮೆಯ ಉಂಗುರವನ್ನು ಶುಕ್ರವಾರವೇ ಖರೀದಿಸಬೇಕು. ಇದಲ್ಲದೆ, ಈ ಉಂಗುರವನ್ನು ಖರೀದಿಸಿ ಮನೆಗೆ ತಂದ ನಂತರ ಕೆಲವು ಗಂಟೆಗಳ ಕಾಲ ಹಾಲು ಅಥವಾ ಗಂಗಾಜಲದಲ್ಲಿ ಇಡುವುದು ಸೂಕ್ತ. ಉಂಗುರವನ್ನು ಸ್ವಚ್ಛಗೊಳಿಸಿದ ನಂತರ ಅದನ್ನು ಲಕ್ಷ್ಮಿ ದೇವಿಯ ಮುಂದಿಟ್ಟು ಪೂಜಿಸಬೇಕು. ಗುರುವಾರ ಅಥವಾ ಶುಕ್ರವಾರದಂದು ಈ ಉಂಗುರವನ್ನು ಧರಿಸುವುದು ಮಂಗಳಕರವೆಂದು ನಂಬಲಾಗಿದೆ.


ಆಮೆಯ ಉಂಗುರವನ್ನು ತೋರುಬೆರಳು ಅಥವಾ ಮಧ್ಯದ ಬೆರಳಿಗೆ ಧರಿಸಬೇಕು. ಈ ಉಂಗುರವನ್ನು ಆಮೆಯ ತಲೆಯು ನಿಮ್ಮನ್ನು ಎದುರಿಸುತ್ತಿರುವಂತೆ ಧರಿಸಬೇಕು. ಬೆಳ್ಳಿಯ ಆಮೆಯ ಉಂಗುರವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.


ಇದನ್ನೂ ಓದಿ:  Budhaditya Rajyog 2024: ಕೆಲವೇ ಗಂಟೆಗಳಲ್ಲಿ ಬುಧಾದಿತ್ಯ ರಾಜಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಭಾರಿ ಧನ-ಸಂಪತ್ತು ಪ್ರಾಪ್ತಿ!


ಉಂಗುರವನ್ನು ಧರಿಸುವುದರಿಂದ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಶಾಂತಿಯನ್ನು ತರುತ್ತದೆ. ಈ ಉಂಗುರವನ್ನು ಧರಿಸಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ನೆಮ್ಮದಿ ಇರುತ್ತದೆ. ಸಾಧ್ಯವಾದರೆ ಜ್ಯೋತಿಷ್ಯ ತಜ್ಞರನ್ನು ಸಂಪರ್ಕಿಸಿದ ನಂತರ ಜಾತಕದ ಪ್ರಕಾರ ಈ ಉಂಗುರವನ್ನು ಧರಿಸುವುದು ಉತ್ತಮ. 


(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ.) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.