Budhaditya Rajyog 2024: ಕೆಲವೇ ಗಂಟೆಗಳಲ್ಲಿ ಬುಧಾದಿತ್ಯ ರಾಜಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಭಾರಿ ಧನ-ಸಂಪತ್ತು ಪ್ರಾಪ್ತಿ!

Budhaditya Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಕರ ರಾಶಿಯಲ್ಲಿ ಬುಧ ಹಾಗೂ ಸೂರ್ಯನ ಮೈತ್ರಿಯಿಂದ ಬುಧಾದಿತ್ಯ ರಾಜಯೋಗ ರಚನೆಯಾಗುತ್ತಿದ್ದು, ಈ ರಾಜಯೋಗ ರಚನೆಯಿಂದ ಹಲವು ರಾಶಿಗಳ ಜನರ ಜೀವನದಲ್ಲಿ  ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಅಪಾರ ಧನ-ಸಂಪತ್ತು ಹರಿದುಬರಲಿದೆ.  (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಮಕರ ರಾಶಿಯಲ್ಲಿ ಬುಧ ಹಾಗೂ ಆದಿತ್ಯನ ಮೈತ್ರಿಯಿಂದ ಬುಧಾದಿತ್ಯ ರಾಜಯೋಗ ರಚನೆಯಾಗುತ್ತಿದ್ದು. ಈ ರಾಜಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸಲಿದೆ. ಆದರೆ ಮೂರು ರಾಶಿಗಳ ಜನರಿಗೆ ಈ ಯೋಗದಿಂದ ವಿಶೇಷ ಲಾಭಗಳು ಸಿಗಲಿದ್ದು, ಜೀವನದಲ್ಲಿ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗುವುದರ ಜೊತೆಗೆ ಅಪಾರ ಧನಸಂಪತ್ತು ಹರಿದುಬರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,  (Spiritual News In Kannada)

 

ಇದನ್ನೂ ಓದಿ-Surya Gochar 2024: ವರ್ಷದ ಬಳಿಕ ಮೀನ ರಾಶಿಗೆ ಸೂರ್ಯನ ಪ್ರವೇಶ, ಈ ಜನರ ಜೀವನದಲ್ಲಿ ಆಕಸ್ಮಿಕ ಧನಲಾಭದಿಂದ ಗೋಲ್ಡನ್ ಟೈಮ್ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Budhaditya Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಕರ ರಾಶಿಯಲ್ಲಿ ಬುಧ ಹಾಗೂ ಸೂರ್ಯನ ಮೈತ್ರಿಯಿಂದ ಬುಧಾದಿತ್ಯ ರಾಜಯೋಗ ರಚನೆಯಾಗುತ್ತಿದ್ದು, ಈ ರಾಜಯೋಗ ರಚನೆಯಿಂದ ಹಲವು ರಾಶಿಗಳ ಜನರ ಜೀವನದಲ್ಲಿ  ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಅಪಾರ ಧನ-ಸಂಪತ್ತು ಹರಿದುಬರಲಿದೆ.  (Spiritual News In Kannada)  

2 /5

ಮೇಷ ರಾಶಿ: ಈ ರಾಜಯೋಗ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ನಿಮ್ಮ ವೃತ್ತಿ ಹಾಗೂ ವ್ಯಾಪಾರದ ದೃಷ್ಟಿಯಿಂದ ಇದು ನಿಮಗೆ ವರದಾನ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಕೆಲಸ-ಕಾರ್ಯ-ವ್ಯಾಪಾರದಲ್ಲಿ ಅಪಾರ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿಯಲಿದೆ. ವೃತ್ತಿಪರ ಅವಕಾಶಗಳು ಉಜ್ವಲವಾಗಿರಲಿವೆ. ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರ ವರ್ಗದ ಜನರಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭ ಪ್ರಾಪ್ತಿಯಾಗಲಿದೆ. ಹೊಸ ಕೆಲಸ ಆರಂಭಿಸಲು ಇದು ಸಕಾಲವಾಗಿದೆ.   

3 /5

ಮಕರ ರಾಶಿ: ಈ ರಾಜಯೋಗ ನಿಮ್ಮ ಜಾತಕದ ಲಗ್ನ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ನಿಮ್ಮ ಸ್ಥಾನಮಾನ ಪ್ರತಿಷ್ಠೆ ಈ ಅವಧಿಯಲ್ಲಿ ಹೆಚ್ಚಾಗಲಿದೆ. ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಅಪಾರ ಬೆಂಬಲ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಒಂದು ಸಂತಸದ ಸುದ್ದಿ ಕೂಡ ಸಿಗಲಿದೆ. ವಿವಾಹಿತರ ಜೀವನದಲ್ಲಿ ಸಂಗಾತಿಗಳ ನಡುವೆ ಸಮತೋಲನ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ.   

4 /5

ಧನು ರಾಶಿ: ಈ ರಾಜಯೋಗ ನಿಮ್ಮ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧಣಪ್ರಾಪ್ತಿಯಾಗಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಈ ರಾಶಿಯ ಜನರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನೌಕರಿ ಹಾಗೂ ವ್ಯಾಪಾರದಲ್ಲಿ ಅಪಾರ ಧನಲಾಭ ಸಿಗಲಿದೆ. ಅಂದುಕೊಂಡ ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿವೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿಯೂ ಕೂಡ ಪ್ರಭಾವ ನೋಡಲು ಸಿಗಲಿದ್ದು, ಜನರು ನಿಮ್ಮಿಂದ ಇಂಪ್ರೆಸ್ ಆಗಲಿದ್ದಾರೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)