ಬೆಂಗಳೂರು : ಸನಾತನ ಧರ್ಮದಲ್ಲಿ ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ. ಈ ದಿನದಂದು ಗಣೇಶನ ವಿಶೇಷ ಪೂಜೆ ಮತ್ತು ಜ್ಯೋತಿಷ್ಯ ಪರಿಹಾರಗಳನ್ನು ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ ಎನ್ನುವುದು ನಂಬಿಕೆ.ಹಿಂದೂ ಧರ್ಮಗ್ರಂಥಗಳಲ್ಲಿ ಗಣೇಶನಿಗೆ ಮೊದಲ ಪೂಜೆ. ಯಾವುದೇ ಶುಭ ಕಾರ್ಯದ ಆರಂಭದಲ್ಲಿ ಗಣೇಶನನ್ನು ಸ್ತುತಿಸಿದರೆ ಆ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಬುಧವಾರದಂದು ಗಣಪತಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ವ್ಯಕ್ತಿಯನ್ನು ಎಲ್ಲಾ ತೊಂದರೆಗಳಿಂದ ಮುಕ್ತಗೊಳಿಸುತ್ತದೆ. 


ಇದನ್ನೂ ಓದಿ : ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಒಂದೇ ಸಮನೆ ಹೆಚ್ಚುತ್ತಾ ಹೋಗುವುದು ಸಿರಿ ಸಂಪತ್ತು!ಒಲಿದು ಬರುವುದು ನಿರೀಕ್ಷೆಗೂ ಮೀರಿದ ಯಶಸ್ಸು


ಬುಧವಾರದ ಪವಾಡ ಪರಿಹಾರ : 
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಬುಧವಾರದಂದು ಗಣಪತಿಯನ್ನು ಪೂಜಿಸುವಾಗ ಗರಿಕೆ ಹುಲ್ಲನ್ನು ಬಳಸಬೇಕು.ಗಣೇಶನಿಗೆ ಗರಿಕೆ ಹುಲ್ಲನ್ನು ಅರ್ಪಿಸುವುದರಿಂದ ಆತ  ಪ್ರಸನ್ನನಾಗುವುದರೊಂದಿಗೆ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.  


- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಬುಧವಾರದಂದು ಮನೆಯಲ್ಲಿ ಶಮಿ ಗಿಡಗಳನ್ನು ನೆಡುವುದು ಮಂಗಳಕರ.ಶಮಿ ಗಣೇಶನಿಗೆ ಪ್ರಿಯವಾದ ಗಿಡ. ಈ ಗಿಡ ಬೆಳೆದಂತೆ ಮನೆಯಲ್ಲಿ ಸಂಪತ್ತು ಕೂಡಾ ಹೆಚ್ಚುತ್ತದೆ. 


- ಬುಧವಾರದಂದು ಗಣೇಶನಿಗೆ ಬೆಲ್ಲ ಮತ್ತು ತುಪ್ಪವನ್ನು ಅರ್ಪಿಸಬೇಕು.ಈ ಪರಿಹಾರವನ್ನು ತ್ವರಿತವಾಗಿ ಮಾಡುವುದರಿಂದ ಗಣಪತಿ ಸಂತುಷ್ಟನಾಗುತ್ತಾನೆ. ಇದರೊಂದಿಗೆ ಜೀವನದಲ್ಲಿ ಎದುರಾಗುವ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವುದು. 


ಇದನ್ನೂ ಓದಿ:  ಗುರುವಿನ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೊಂದು ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ, ದುಪ್ಪಟ್ಟು ಆದಾಯ


-ಯಾವುದೇ ಕೆಲಸವು ದೀರ್ಘ ಸಮಯದವರೆಗೆ ಪೂರ್ಣಗೊಳ್ಳದೆ ಬಾಕಿ ಉಳಿದಿದ್ದರೆ, ಬುಧವಾರ ಮನೆಯಿಂದ ಹೊರಡುವಾಗ ಹಸಿರು ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.ಮನೆಯಿಂದ ಹೊರಡುವ ಮೊದಲು ಸ್ವಲ್ಪ ಸೊಂಪು ತಿನ್ನಿ.ಇದು ಎಲ್ಲಾ ರೀತಿಯ ಕಾರ್ಯಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. 


(ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.