Weekly Horoscope: ಜುಲೈ ತಿಂಗಳ ಮೊದಲ ವಾರ ಯಾರ ಭವಿಷ್ಯ ಹೇಗಿದೆ
Weekly Horoscope From July 03rd to July 09th: ಜುಲೈ ಮೊದಲ ವಾರದಲ್ಲಿ ಕೆಲವು ರಾಶಿಯವರಿಗೆ ನಾನಾ ರೀತಿಯ ಸವಾಲುಗಳು ಎದುರಾಗಬಹುದು. ಇನ್ನೂ ಕೆಲವು ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಹಣಕಾಸಿನ ಪ್ರಯೋಜನವೂ ಆಗಲಿದೆ. ಈ ವಾರದ ದ್ವಾದಶ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
Weekly Horoscope in Kannada July 03rd to July 09th: ಜುಲೈ ತಿಂಗಳ ಮೊದಲ ವಾರ ಕೆಲವು ಪ್ರಮುಖ ಗ್ರಹಗಳ ರಾಶಿ ಬದಲಾವಣೆ ನಡೆಯಲಿದೆ. ಐಷಾರಾಮಿ ಜೀವನಕಾರಕನಾದ ಶುಕ್ರ ಈ ಸಮಯದಲ್ಲಿ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಲ್ಲದೆ, ಬುದ್ದಿ, ಮಾತಿನಕಾರಕನಾದ ಬುಧನು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಾಪ್ತಾಹಿಕದಲ್ಲಿ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಲ್ಲಿ ಕೆಲವು ರಾಶಿಯವರಿಗೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಭಾರೀ ಏರಿಳಿತಗಳು ಕಂಡು ಬರಲಿವೆ. ಇನ್ನೂ ಕೆಲವರಿಗೆ ಶುಭ ದಿನಗಳು ಆರಂಭವಾಗಿದ್ದು, ನೆಮ್ಮದಿಯ ಜೀವನ ನಡೆಸುವರು ಎಂದು ಹೇಳಲಾಗುತ್ತಿದೆ.
ಮೇಷ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಮೇಷ ರಾಶಿಯವರು ಈ ವಾರ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಆದಾಗ್ಯೂ, ನೀವು ಎಲ್ಲರ ಬಗ್ಗೆ ಗಮನ ಹರಿಸುವುದರ ಹೊರತಾಗಿ ನಿಮ್ಮ ವೈಯಕ್ತಿಕ ವಿಚಾರದತ್ತ ಹೆಚ್ಚು ಗಮನಹರಿಸುವುದು ಒಳ್ಳೆಯದು. ಉದ್ಯೋಗ ರಂಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ನಿಮಗೆ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ಪ್ರಯೋಜನಕಾರಿ ಆಗಲಿದೆ. ಇದಲ್ಲದೆ,ನೀವು ಹೊಸ ಮನೆ, ವಾಹನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಮಂಗಳಕರ ಸಮಯವಾಗಿದೆ. ಆರೋಗ್ಯ ಸಮಸ್ಯೆಗಳು ಉಂಟಾಗಬಹುದಾದ್ದರಿಂದ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ವೃಷಭ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಈ ವಾರ ವೃಷಭ ರಾಶಿಯವರಿಗೆ ಸವಾಲಿನ ವಾರ ಎಂತಲೇ ಹೇಳಬಹುದು. ಆದಾಗ್ಯೂ, ನಿಮ್ಮ ಹಾದಿಯಲ್ಲಿ ಹಲವಾರು ಆಸಕ್ತಿದಾಯಕ ವಿಷಯಗಳು ಬರಲಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರವೇ ನೀವು ಉತ್ತಮ ಫಲ ಪಡೆಯಬಹುದು. ಈ ವಾರ ಪೂರ್ತಿ ಒಂದಲ್ಲಾ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾದಿಸಬಹುದು. ವೃತ್ತಿಪರ ಜೀವನದ ವಿವಿಧ ಅಂಶಗಳನ್ನು ಅನ್ವೇಷಿಸೌ ಇದು ಸರಿಯಾದ ಸಮಯ. ನಿಮ್ಮ ಮನೆಯ ಹಿರಿಯರ ಮಾತನ್ನು ಆಲಿಸಿ.
ಮಿಥುನ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಜುಲೈ ಮಾಸದ ಮೊದಲ ವಾರ ಮಿಥುನ ರಾಶಿಯವರಿಗೆ ಯಶಸ್ಸಿನ ಹಾದಿಯನ್ನು ತೆರೆಯಲಿದೆ. ಈ ವಾರ ನೀವು ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ಆತ್ಮ ವಿಶ್ವಾಸದಿಂದ ಮಾಡುವ ಯಾವುದೇ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸು ನಿಮ್ಮ ಪಾಲಿಗಿದೆ. ಮಾತ್ರವಲ್ಲ, ನಿಮ್ಮ ಈ ಸ್ವಭಾವವೂ ಇತರರನ್ನೂ ಕೂಡ ಪ್ರೇರೇಪಿಸುತ್ತದೆ. ಯಾವುದೇ ಕೆಟ್ಟ ಸಂದರ್ಭವನ್ನೂ ಕೂಡ ನೀವು ನಿಮ್ಮ ಪರವಾಗಿ ತಿರುಗಿಸಬಹುದಾದ ಸಾಮರ್ಥ್ಯವನ್ನು ಹೊಂದಿದ್ದೀರಿ. ನಿಮ್ಮ ಬಹುದಿನಗಳ ಕನಸು ಈ ಸಮಯದಲ್ಲಿ ನನಸಾಗಲಿದೆ.
ಕರ್ಕಾಟಕ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಈ ವಾರ ನೀವು ನಿಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸುವಿರಿ. ನೀವು ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ಪ್ರಯತ್ನಿಸಿದರೆ ಮಾನಸಿಕ ಶಾಂತಿಯೂ ಲಭಿಸಲಿದೆ. ಈ ವಾರ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸುಧಾರಣೆ ತರಲು ಸಾಕಷ್ಟು ಪ್ರಯತ್ನಿಸುವಿರಿ. ಆದರೆ, ನೆನಪಿಡಿ, ಜೀವನದಲ್ಲಿ ಯಶಸ್ಸನ್ನು ಗಳಿಸಲು ಪರಿಶ್ರಮ ಮುಖ್ಯವೇ ಹೊರತು ಇದಕ್ಕೆ ಯಾವುದೇ ಶಾರ್ಟ್ಕಟ್ ಗಳಿಲ್ಲ. ಯೋಜಿಸಿ ಕೆಲಸ ಮಾಡಿದರೆ ನೀವು ಬಯಸಿದ ಫಲ ಸಿಗಲಿದೆ.
ಇದನ್ನೂ ಓದಿ- ಡ್ಯಾಂನಲ್ಲಿ ಪತ್ತೆಯಾಯ್ತು ಪುರಾತನ ದೇವಾಲಯ
ಸಿಂಹ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಸಿಂಹ ರಾಶಿಯವರೇ ಈ ವಾರ ನೀವು ನಿಮ್ಮ ಮಾತಿಗೆ ಕಡಿವಾಣ ಹಾಕದಿದ್ದರೆ ವಿನಾಕಾರಣ ವಿವಾದಗಳಲ್ಲಿ ಸಿಲುಕಬಹುದು. ಇದಲ್ಲದೆ, ಹಿತ ಶತ್ರುಗಳ ಉಪಟಳ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಂತಹವರ ಬಗ್ಗೆ ಎಚ್ಚರದಿಂದಿರಿ. ಆದಾಗ್ಯೂ, ವೈಯಕ್ತಿಕ ಜೀವನದಲ್ಲಿ ಶಾಂತಿಯಿಂದ ಇದ್ದರೆ ಇದು ಅದ್ಭುತ ಸಮಯ ಎಂದು ಸಾಬೀತುಪಡಿಸಲಿದೆ. ಸ್ವಲ್ಪ ಸಮಯ ನಿಮಗಾಗಿ ಮೀಸಲಿಡಿ. ಏಕಾಂಗಿಯಾಗಿ ಕಾಲ ಕಳೆಯಲು ಪ್ರಯತ್ನಿಸಿ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಮದುವೆ ಬಗ್ಗೆ ತೀರ್ಮಾನಿಸಲು ಇದು ಉತ್ತಮ ಸಮಯ.
ಕನ್ಯಾ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಕನ್ಯಾ ರಾಶಿಯವರಿಗೂ ಕೂಡ ಇದು ಸವಾಲಿನ ಸಮಯ. ಪ್ರಮುಖ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಣಾಯಕವಾಗಿರುತ್ತದೆ. ಆದಾಗ್ಯೂ, ನೀವು ಏನು ತ್ಯಾಗ ಮಾಡುತ್ತಿದ್ದೀರಿ ಎಂಬುದರ ಜೊತೆಗೆ ಶಿಸ್ತನ್ನು ರೂಢಿಸಿಕೊಳ್ಳುವುದರಿಂದ ಮಾತ್ರವೇ ನೀವು ನಿಮ್ಮ ಜೀವನದ ಹಾದಿಯನ್ನು ಸರಿಪಡಿಸಬಹುದು ಎಂಬುದನ್ನೂ ನೆನಪಿನಲ್ಲಿಡಿ. ಈ ಪ್ರಮುಖ ಬದಲಾವಣೆಗಳು ನಿಮ್ಮನ್ನು ಶೀಘ್ರದಲ್ಲೇ ಪ್ರಗತಿಯತ್ತ ಕೊಂಡೊಯ್ಯುತ್ತದೆ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಕುಟುಂಬದವರೊಂದಿಗೆ ಮುಕ್ತವಾಗಿ ಮಾತನಾಡಿ.
ತುಲಾ ರಾಶಿಯವರ ಸಾಪ್ತಾಹಿಕ ಭವಿಷ್ಯ:
ತುಲಾ ರಾಶಿಯವರು ಈ ವಾರ ಜೀವನದಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮಾಡುವ ಹೊಸ ಉತ್ತೇಜಕ ಪ್ರಯತ್ನಗಳು ನಿಮಗೆ ಗಮನಾರ್ಹ ಪ್ರಗತಿಯನ್ನು ನೀಡುತ್ತವೆ. ನಿಮ್ಮ ವೃತ್ತಿಪರ ಬದ್ದತೆಗಳಿಗೆ ಸಂಬಂಧಿಸಿದನೇ ವಿವಿವ್ಧ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ನೀವು ಯಶಸ್ವಿಯಾಗ್ಲೈದ್ದು, ಇದರಿಂದ ಆರ್ಥಿಕವಾಗಿಯೂ ಪ್ರಯೋಜನವನ್ನು ಪಡೆಯಲಿದ್ದೀರಿ. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ವಿಷಯಗಳನ್ನು ಸುಲಭವಾಗಿ ಪರಿಹರಿಸುವ ನಿಮ್ಮ ಸಾಮರ್ಥ್ಯವು ಎಲ್ಲರಿಂದ ಮೆಚ್ಚುಗೆಯನ್ನು ಪಡೆಯಲಿದೆ.
ವೃಶ್ಚಿಕ ರಾಶಿಯವರ ಸಾಪ್ತಾಹಿಕ ಭವಿಷ್ಯ:
ವೃಶ್ಚಿಕ ರಾಶಿಯವರು ಈ ವಾರ ವೃತ್ತಿ ಬದುಕಿನಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲಿಯೂ ಕೂಡ ಅಪಾರ ಯಶಸ್ಸು, ಕೀರಿತ್ಯಾನ್ನು ಪಡೆಯುವರು. ಕೆಲವು ಸಂದರ್ಭಗಳಲ್ಲಿ ನೀವು ನಷ್ಟ ಅನುಭವಿಸಬಹುದು, ಇದರಿಂದ ನಿರಾಶೆ ನಿಮ್ಮನ್ನು ಕಾಡಬಹುದು. ಆದರೂ, ನೀವು ಪುಟಿದೇಳುವ, ತ್ವರಿತವಾಗಿ ಶಕ್ತಿಯನ್ನು ಮರಳಿ ಪಡೆಯುವ ಸ್ಥಿತಿಸ್ಥಾಪಕವನ್ನು ಹೊಂದಿದ್ದೀರಿ ಎಂಬುದನ್ನು ಎಂದಿಗೂ ಮರೆಯಬೇಡಿ. ಸಂಕಲ್ಪದಿಂದ ನೀವು ಕಷ್ಟದ ಸಮಯವನ್ನು ಸುಲಭವಾಗಿ ಜಯಿಸುತ್ತೀರಿ. ಜನರು ನಿಮ್ಮ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಾರೆ. ನಿಮ್ಮ ಉಪಸ್ಥಿತಿಯನ್ನು ಪ್ರಶಂಸಿಸುತ್ತಾರೆ.
ಇದನ್ನೂ ಓದಿ- Budh Gochar in Kark 2023: ಜುಲೈ 8ರಿಂದ ಈ ರಾಶಿಯವರಿಗೆ ಹಣದ ಸುರಿಮಳೆ, ಉದ್ಯೋಗದಲ್ಲಿ ಯಶಸ್ಸು
ಧನು ರಾಶಿಯವರ ಸಾಪ್ತಾಹಿಕ ಭವಿಷ್ಯ:
ಧನು ರಾಶಿಯವರು ಈ ವಾರ ತುಂಬಾ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುತ್ತೀರಿ. ಉದ್ಯೋಗ ರಂಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಎಲ್ಲವನ್ನೂ ಕೂಡ ಬಹಳ ಸೊಗಸಾಗಿ ಮುಂದುವರೆಸುವ ಸಾಮರ್ಥ್ಯ ನಿಮ್ಮಲ್ಲಿದೆ. ಯಾವುದೇ ಕೆಲಸದಲ್ಲೂ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಇದ್ದರೆ ಮಾತ್ರವೇ ಮುಂದುವರೆಯಲು ಸಾಧ್ಯ ಎಂಬುದನ್ನೂ ನೆನಪಿನಲ್ಲಿಡಿ. ನಿಮ್ಮ ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ.
ಮಕರ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಮಕರ ರಾಶಿಯವರಿಗೂ ಕೂಡ ಇದು ಅನುಕೂಲಕರ ವಾರವಾಗಿದೆ. ಈ ಸಮಯದಲ್ಲಿ ನೀವು ಹೆಚ್ಚಿನದನ್ನು ಏನಾದರೂ ಮಾಡಲು ಪ್ರಯತ್ನಿಸಬಹುದು. ಸಮಾಜದಲ್ಲಿ ಪ್ರಮಾಣಿತ ಜೀವನ ಶೈಲಿಯನ್ನು ಕಾಪಾಡಿಕೊಳ್ಳಬೇಕು. ಇದರಿಂದ ನಿಮ್ಮ ಮೌಲ್ಯಗಳು ಹೆಚ್ಚಾಗುತ್ತವೆ. ನಿಮ್ಮ ಸ್ವಂತ ಅಭಿವೃದ್ಧಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಆದ್ಯತೆ ನೀಡಿ. ಇದು ಸವಾಲಿನ ಸಮಯವಾಗಿದ್ದರೂ ಸಹ ನೀವು ಸವಾಲುಗಳನ್ನು ಎದುರಿಸಿ ಮುನ್ನುಗ್ಗುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಪ್ರಗತಿ ಕಾಣಬಹುದು.
ಕುಂಭ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಕುಂಭ ರಾಶಿಯವರಿಗೆ ಈ ವಾರ ಅತ್ಯುತ್ತಮ ಸಮಯವಲ್ಲ. ಆದರೂ, ಮಿಶ್ರ ಫಲಗಳನ್ನು ಪಡೆಯಬಹುದಾದ ವಾರ. ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ನೀವು ಇನ್ನಷ್ಟು ಗಟ್ಟಿಯಾಗುವಿರಿ. ನಿಮ್ಮನ್ನು ಇತರರಿಗೆ ಹೊಲಿಸಿಕೊಂಡು ಹೊಟ್ಟೆಕಿಚ್ಚು ಪಡುವ ಬದಲಿಗೆ ನಿಯಮ್ಮ ಬೆಳವಣಿಗೆ, ಅಭಿವೃದ್ಧಿಗೆ ಪೂರಕವಾಗಿ ಕೆಲಸಗಳನ್ನು ಮಾಡುವುರು ಹೆಚ್ಚು ಸೂಕ್ತವಾಗಿದೆ. ಉದ್ಯೋಗ ರಂಗದಲ್ಲಿ ನಿಮ್ಮ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ.
ಮೀನ ರಾಶಿಯವರ ಸಾಪ್ತಾಹಿಕ ಭವಿಷ್ಯ:
ಮೀನ ರಾಶಿಯವರೇ, ನೀವು ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರೆ ಆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗುವುದು ಬಹಳ ಅಗತ್ಯ. ಈ ವಾರ ನೀವು ನಿಮ್ಮ ಕುಟುಂಬಸ್ಥರೊಂದಿಗೆ ಸಂವಹನ ನಡೆಸಿ ಅವರ ಭಾವನೆಗಳನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದ ಪರಸ್ಪರರ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ವೃತ್ತಿ ರಂಗದಲ್ಲಿಯೂ ನೀವು ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುವಿರಿ. ನಿಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಶ್ರದ್ದೆಯಿಂದ ಕೆಲಸ ಮಾಡುವುದು ಮುಖ್ಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.