ಡ್ಯಾಂನಲ್ಲಿ ಪತ್ತೆಯಾಯ್ತು ಪುರಾತನ ದೇವಾಲಯ

1977ನೇ ಇಸವಿಯಲ್ಲಿ ಹಿಡಕಲ್ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಠ್ಠಲ ದೇವಸ್ಥಾನವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಅದಾದ ಬಳಿಕ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಂತ ಸಂದರ್ಭಗಳಲ್ಲಿ ಮಾತ್ರ ಈ ದೇವಸ್ಥಾನವು ಕಾಣಸಿಗುತ್ತದೆ. ವರ್ಷದ 10 ತಿಂಗಳುಗಳು ಈ ದೇವಸ್ಥಾನವು ನೀರಿನಲ್ಲಿ ಮುಳುಗಡೆಯಾಗಿರುತ್ತದೆ. 

Written by - Yashaswini V | Last Updated : Jun 30, 2023, 05:25 PM IST
  • ಹಿಡಕಲ್ ಜಲಾಶಯದ ಹಿನ್ನಿರಿನಲ್ಲಿ ವಿಠ್ಠಲ ದೇವಸ್ಥಾನವು ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.
  • ಕಳೆದ 12 ವರ್ಷಗಳ ಬಳಿಕ ಈ ದೇವಸ್ಥಾನವು ಸಂಪೂರ್ಣವಾಗಿ ಕಾಣಿಸಿಕೊಂಡಿದೆ.
  • 1928 ರಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ.
ಡ್ಯಾಂನಲ್ಲಿ ಪತ್ತೆಯಾಯ್ತು ಪುರಾತನ ದೇವಾಲಯ  title=
Ancient Temple

Ancient Temple: ಜೂನ್ ತಿಂಗಳು ಮುಗಿಯೋದ್ರಲ್ಲಿದೆ ಆದ್ರೂ ಮಳೆ ಮಾತ್ರ ಆಗೋ ಯಾವ ಲಕ್ಷಣಗಳು ಕಾಣ್ತಿಲ್ಲ. ಮಳೆಯಾಗದೇ ಇರೋದ್ರಿಂದ ಉತ್ತರ ಕರ್ನಾಟಕದ ಬಹುತೇಕ ಡ್ಯಾಂಗಳು ಖಾಲಿಖಾಲಿಯಾಗಿವೆ. ಹಿಡಕಲ್ ಡ್ಯಾಂ ಖಾಲಿಯಾಗ್ತಿದ್ದಂತೆ ಬರೋಬ್ಬರಿ 12 ವರ್ಷಗಳ ನಂತರ ಪುರಾತನ ದೇವಸ್ಥಾನವೊಂದು ದರ್ಶನಕ್ಕೆ ಮುಕ್ತವಾಗಿದೆ. ಹಾಗಿದ್ರೆ ಏನಿದು ಸ್ಟೋರಿ ಅಂತೀರಾ...? ಇಲ್ಲಿದೆ ನೋಡಿ ಒಂದು ವರದಿ...!

ಹೌದು...ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಬರದ ಛಾಯೇ ಆವರಿಸಿದೆ. ಜಿಲ್ಲೆಯ ಬಹುತೇಕ ನದಿಗಳು ಸಂಪೂರ್ಣ ಒಣಗಿಹೋಗಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಸದ್ಯ ಸಂಪೂರ್ಣ ಖಾಲಿಯಾಗಿದೆ. ಹಿಡಕಲ್ ಜಲಾಶಯ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಹೀಗಾಗಿ ಡ್ಯಾಂನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ದೇವಸ್ಥಾನವೊಂದು ದರ್ಶನಕ್ಕೆ ಮುಕ್ತವಾಗಿದೆ.

ಹಿಡಕಲ್ ಜಲಾಶಯದ ಹಿನ್ನಿರಿನಲ್ಲಿ ವಿಠ್ಠಲ ದೇವಸ್ಥಾನವು ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಕಳೆದ 12 ವರ್ಷಗಳ ಬಳಿಕ ಈ ದೇವಸ್ಥಾನವು ಸಂಪೂರ್ಣವಾಗಿ ಕಾಣಿಸಿಕೊಂಡಿದೆ. 1928 ರಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ 1977ನೇ ಇಸವಿಯಲ್ಲಿ ಹಿಡಕಲ್ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಠ್ಠಲ ದೇವಸ್ಥಾನವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಅದಾದ ಬಳಿಕ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಂತ ಸಂದರ್ಭಗಳಲ್ಲಿ ಮಾತ್ರ ಈ ದೇವಸ್ಥಾನವು ಕಾಣಸಿಗುತ್ತದೆ. 

ಇದನ್ನೂ ಓದಿ- Shiva Temple: ಧರ್ಮ ಮೀರಿ ಶಿವ ದೇವಾಲಯ ನಿರ್ಮಿಸಿದ ಕ್ರಿಶ್ಚಿಯನ್ ಅಧಿಕಾರಿ!

ವರ್ಷದ 10 ತಿಂಗಳುಗಳು ಈ ದೇವಸ್ಥಾನವು ನೀರಿನಲ್ಲಿ ಮುಳುಗಡೆಯಾಗಿರುತ್ತದೆ. ಕೇವಲ ಎರಡು ತಿಂಗಳು ಮಾತ್ರ ದೂರದಿಂದ ನೋಡಿದ್ರೆ ಅರ್ಧದಷ್ಟು ಮಾತ್ರ ಕಾಣಸಿಗುತ್ತದೆ. ವಿಠ್ಠಲ ದೇವಸ್ಥಾನವನ್ನು ಸಂಪೂರ್ಣ ಕಲ್ಲಿನಲ್ಲಿಯೇ ನಿರ್ಮಿಸಲಾಗಿದೆ. ಕಳೆದ 12 ವರ್ಷಗಳ ಹಿಂದೆ ಈ ದೇವಸ್ಥಾನವು ಕಂಡಿತ್ತು. ಇದೀಗ ಹಿಡಕಲ್ ಡ್ಯಾಂ ಸಂಪೂರ್ಣ ಖಾಲಿಯಾಗಿರುವುದರಿಂದ ವಿಠ್ಠಲ ದೇವಸ್ಥಾನವನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ದಿನನಿತ್ಯವೂ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ- ಕೊಳ್ಳೇಗಾಲ: ತಟ್ಟೆ ಕಾಸಿಗಾಗಿ ಅರ್ಚಕರ ಹೊಡೆದಾಟ- CCTVಯಲ್ಲಿ ದೃಶ್ಯ ಸೆರೆ

ಒಟ್ಟಿನಲ್ಲಿ ಡ್ಯಾಂ ಖಾಲಿಯಾಗುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ಹಿನ್ನಿರಿನಲ್ಲಿ ಮುಚ್ಚಿಹೋಗಿದ್ದ ಪುರಾತನ ದೇವಸ್ಥಾನಗಳು ಪತ್ತೆಯಾಗುತ್ತಿವೆ. ಪುರಾತನ ದೇವಸ್ಥಾನಗಳು ನೀರಿನಲ್ಲಿಯೇ ಇದ್ರು ದೇವಸ್ಥಾನಕ್ಕೆ ಮಾತ್ರ ಒಂದಿಂಚೂ ಹಾನಿಯಾಗದೇ ಇರುವುದು ಆಶ್ಚರ್ಯಕರ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News