Varabhavishya in Kannada From July 22nd to July 28th: ಈ ವಾರ ಕೆಲವು ಪಮುಖ ಗ್ರಹಗಳು ತಮ್ಮ ಸಂಚಾರ ಬದಲಾವಣೆ ಮಾಡಲಿದ್ದು ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡುಬರುತ್ತದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಜುಲೈ ನಾಲ್ಕನೇ ವಾರ ಮೇಷ ರಾಶಿಯ ಜನರಿಗೆ ಅದ್ಭುತವಾದ ವಾರ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬಸ್ಥರು, ಸಂಬಂಧಿಕರೊಡನೆ ಉತ್ತಮ ಸಮಯವನ್ನು ಕಳೆಯುವಿರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಕೈಗೊಳ್ಳಬೇಕಾಗಬಹುದು. ಪ್ರಯಾಣವು ಸುಖಕರ ಮತ್ತು ಲಾಭದಾಯಕವಾಗಿರುತ್ತದೆ. ಶ್ರದ್ದೆಯಿಂದ ಶ್ರಮವಹಿಸಿ ಮಾಡುವ ಕೆಲಸಗಳಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ. ಆದಾಗ್ಯೂ, ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಹೆಚ್ಚು ಶುಭ ಫಲ. 


ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯ ಜನರಿಗೆ ಇದು ತುಂಬಾ ಎಚ್ಚರಿಕೆಯಿಂದ ಇರಬೇಕಾದ ವಾರ. ಈ ವಾರ ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಪದಬಳಕೆಯ ಮೇಲೆ ಹೆಚ್ಚು ನಿಯಂತ್ರಣವಿರಲಿ. ಯಾರಿಗಾದರೂ ಏನಾದರೂ ಭರವಸೆ ನೀಡುವ ಮೊದಲು ಈ ಬಗ್ಗೆ ಸರಿಯಾಗಿ ಯೋಚಿಸಿ. ವ್ಯವಹಾರದಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೊದಲು ಸಂಬಂಧಿತ ತಜ್ಞರಿಂದ ಸಲಹೆ ಸೂಚನೆಯನ್ನು ಪಡೆಯಿರಿ. ಆರೋಗ್ಯದ ದೃಷ್ಟಿಯಿಂದ ಹೊರಗಿನ ಆಹಾರ ಸೇವನೆ ತಪ್ಪಿಸುವುದು ಒಳ್ಳೆಯದು.  


ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಮಿಥುನ ರಾಶಿಯವರಿಗೆ ಈ ವಾರ ಕೌಟುಂಬಿಕ ಸುಖ-ಶಾಂತಿ ಹೆಚ್ಚಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಇದು ನಿಮ್ಮ ಕುಟುಂಬದಲ್ಲಿ ಸಾಮರಸ್ಯವನ್ನು ಹೆಚ್ಚಿಸುತ್ತದೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಹಳೆಯ ಸ್ನೇಹಿತರು, ಪ್ರೀತಿಪಾತ್ರರೊಂದಿಗೆ ಭೇತಿಯು ಮನಸ್ಸಿಗೆ ಮುದ ನೀಡಲಿದೆ. ಆದರೆ, ನಿಮ್ಮ ಒರಟಾದ ವರ್ತನೆಯನ್ನು ತಪ್ಪಿಸದಿದ್ದರೆ ನಿಮ್ಮನ್ನು ತುಂಬಾ ಇಷ್ಟಪಡುವವರು ನಿಮ್ಮಿಂದ ದೂರವಾಗಬಹುದು. ವಿವಾಹಿತ ದಂಪತಿಗಳಿಗೆ ಸಂತಾನಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆ ಕೇಳಿ ಬರಲಿದೆ.  


ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯ ಜನರಿಗೆ ಈ ವಾರ ನಿಮ್ಮ ಅತಿಯಾದ ನಂಬಿಕೆಯೇ ನಿಮಗೆ ಮುಳುವಾಗುವ ಸಂಭವವಿದೆ. ಇದರಿಂದಾಗಿ ಮಾನಸಿಕವಾಗಿ ಗೊಂದಲವನ್ನು ಅನುಭವಿಸಬೇಕಾಗಬಹುದು. ಸ್ವಂತ ಬಿಸಿನೆಸ್ ಮಾಡುವವರು ಬೇರೆಯವರನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. ಅದರಲ್ಲೂ, ವಿಶೇಷವಾಗಿ ಹೆಚ್ಚು ಮಾತನಾಡುವ ಮಹಿಳೆಯರ ಬಗ್ಗೆ ಜಾಗರೂಕರಾಗಿರಿ. ವ್ಯವಹಾರ ವಿಸ್ತರಣೆಗಾಗಿ ಸಾಲಕ್ಕಾಯಿ ಪ್ರಯತ್ನಿಸುತ್ತಿದ್ದರೆ ಈ ವಾರ ನಿಮಗೆ ಅನುಕೂಲಕರವಾಗಿದೆ.  ವಿವಾದಗಳನ್ನು ತಪ್ಪಿಸಲು ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿ. 


ಇದನ್ನೂ ಓದಿ- Tulsi Upay: ಪ್ರತಿನಿತ್ಯ ತುಳಸಿಗೆ ಇವುಗಳನ್ನು ಅರ್ಪಿಸಿದರೆ ಹರಸಿ ಬರುತ್ತೆ ಸಂಪತ್ತು


ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯವರಿಗೆ ಈ ವಾರ ನಿಮ್ಮ ಕಳೆದುಹೋದ ಪ್ರೀತಿ ಶೀಘ್ರವೇ ನಿಮ್ಮನ್ನು ಹರಸಿ ಬರಬಹುದು. ವಿವಾಹ ಮಾತುಕತೆಗಳು ಪ್ರಗತಿಯನ್ನು ಕಾಣಬಹುದು. ಉದ್ಯೋಗದಲ್ಲಿ ಯಶಸ್ಸು, ಹಣಕಾಸಿನ ಏಳ್ಗೆ ಜೊತೆಗೆ ಜೀವನದ ಪ್ರತಿ ಹಂತದಲ್ಲೂ ಉತ್ತಮ ಸಮಯ ಎಂತಲೇ ಹೇಳಬಹುದು. ಮನೆಯಲ್ಲಿ ಮಂಗಳ ಕಾರ್ಯಕ್ರಮಗಳು ಜರುಗುವ ಸಾಧ್ಯತೆಗಳಿವೆ. ಆದಾಗ್ಯೂ, ನಿಮ್ಮ ಆರೋಗ್ಯ್ವನ್ನು ನಿರ್ಲಕ್ಷಿಸಬೇಡಿ. ಯೋಗ-ಧ್ಯಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.  


ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯವರಿಗೆ ಈ ವಾರವು ಸಾಕಷ್ಟು ಏರಿಳಿತಗಳಿಂದ ಕೂಡಿರುತ್ತದೆ. ಕೆಲವೊಂದು ವಿಷಯಗಳಲ್ಲಿ ಶುಭ ವಾರ್ತೆ ಕೇಳಿದರೆ, ಕೆಲವು ಕೆಟ್ಟ ಘಟನೆಗಳಿಗೂ ಈ ವಾರ ಸಾಕ್ಷಿಯಾಗಬಹುದು. ಆದಾಗ್ಯೂ, ನೀವು ಸ್ಥಿಮಿತ ಮನಸ್ಥಿತಿಯನ್ನು ಕಾಯ್ದುಕೊಳ್ಳುವುದರಿಂದ ಎಲ್ಲವೂ ಒಳ್ಳೆಯದೇ ಆಗಲಿದೆ. ಯುವಕ-ಯುವತಿಯರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ನಿಮ್ಮ ಆಪ್ತ ಸ್ನೇಹಿತರೊಂದಿಗೆ ಪಿಕ್ನಿಕ್ ತೆರಳಲು ಯೋಚಿಸುತ್ತಿದ್ದರೆ ಈ ವಾರ ಅದು ಸಾಧ್ಯವಾಗಲಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಕಚೇರಿಯಲ್ಲಿ ಕೆಲಸದ ಹೋಟೆ ಹೆಚ್ಚಾಗಬಹುದು. 


ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯವರಿಗೆ ಈ ವಾರ ಶುಭವಾಗಿದೆ. ಜೀವನದ ಎಲ್ಲ ಆಯಾಮಗಳಲ್ಲೂ ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರ ವರ್ಗದವರಿಗೂ ದೊಡ್ಡ ಆರ್ಡರ್ ಸಿಗಬಹುದು. ವಾರದ ಬಹುತೇಕ ಭಾಗ ನೀವು ನಿಮ್ಮ ಸಮಯವನ್ನು ಪ್ರಯಾಣ, ಪಾರ್ಟಿ ಮತ್ತು ಮೋಜಿನಲ್ಲಿ ಕಳೆಯಲಿದ್ದೀರಿ. ಇದರಿಂದಾಗಿ ಮನಸ್ಸು ಸಂತೋಷದಿಂದ ಕೂಡಿರುತ್ತದೆ.  ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆದರೆ, ಅವಸರದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.


ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯವರಿಗೆ ಈ ವಾರ ಜೀವನವು ನಿಮಗೆ ಒಂದೇ ಬಾರಿಗೆ ಹಲವು ಆಯ್ಕೆಗಳನ್ನು ಒದಗಿಸುತ್ತದೆ, ಇದರಿಂದಾಗಿ ನೀವು ಗೊಂದಲಕ್ಕೆ ಒಳಗಾಗಬಹುದು. ಒಂದೇ ಸಮಯದಲ್ಲಿ ಹಲವಾರು ಉದ್ಯೋಗ ಆಫರ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಇದು ನೀವು ಯೋಚಿಸಿ ನಿರ್ಧರಿಸಿ. ದೇವರ ಮೇಲೆ ನಂಬಿಕೆಯಿಟ್ಟು ಮುಂದುವರೆಯುವುದರಿಂದ ಎಲ್ಲವೂ ಒಳ್ಳೆಯದೇ ಆಗಲಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಆದರೆ, ಹಿತ ಶತ್ರುಗಳ ಬಗ್ಗೆ ಜಾಗರೂಕರಾಗಿರಿ. 


ಇದನ್ನೂ ಓದಿ- ಶೀಘ್ರದಲ್ಲೇ ಮುಖಾಮುಖಿಯಾಗಲಿದ್ದಾರೆ ಶನಿ-ಬುಧ: ವೃತ್ತಿ ಬದುಕಿನಲ್ಲಿ ಭಾರೀ ಜಯ ಸಾಧಿಸಲಿದ್ದಾರೆ ಈ ರಾಶಿಯ ಜನ


ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯ ಜನರಿಗೆ ಈ ವಾರ ನಿಮ್ಮ ಮಾತೇ ನಿಮಗೆ ದೊಡ್ಡ ಶತ್ರುವಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಮಾತಿಗೆ ಕಡಿವಾಣ ಹಾಕುವುದನ್ನು ಪರಿಗಣಿಸಿ. ವಾರದ ದ್ವಿತೀಯಾರ್ಧದಲ್ಲಿ ನೀವು ಅನೇಕ ಸಂಬಂಧಿಕರು ಮತ್ತು ಅಪರಿಚಿತರನ್ನು ಭೇಟಿಯಾಗುವ ಸಾಧ್ಯತೆಯಿದೆ. ನೀವು ಪ್ರೀತಿಯ ವಿಷಯಗಳಲ್ಲಿ ಸಂತೋಷವನ್ನು ಕಾಣಬಹುದು. ವೈವಾಹಿಕ ಜೀವನದಲ್ಲೂ ಪ್ರೀತಿ ಹೆಚ್ಚಾಗುವ ಸಾಧ್ಯತೆ ಇದೆ. ಮನೆಯಲ್ಲಿ ಹಿರಿಯರ ಸಲಹೆ ಸೂಚನೆಯಂತೆ ಮುಂದುವರೆಯುವುದರಿಂದ ಹೆಚ್ಚಿನ ಲಾಭವಾಗಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಭೌತಿಕ ಸೌಕರ್ಯಗಳಿಗೆ ಹೆಚ್ಚು ಹಣ ಖರ್ಚು ಮಾಡಬಹುದು. 


ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರಿಗೆ ಈ ವಾರ ಹೆಚ್ಚು ಒತ್ತಡದಿಂದ ಕೂಡಿದ ವಾರ. ಏಕಕಾಲದಲ್ಲಿ ಅನೇಕ ರೀತಿಯ ಕೆಲಸಗಳಿಗೆ ಸಮಯವನ್ನು ವಿನಿಯೋಗಿಸಬೇಕು. ಈ ವಾರ ಕಚೇರಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಸ್ಥಾಪಿಸುವುದರಿಂದ ನೆಮ್ಮದಿಯ ಬದುಕಬಹುದು. ಆಸ್ತಿ ಅಥವಾ ವಾಹನದ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುತ್ತವೆ.  ಹಣಕಾಸಿನ ವಿಷಯಗಳಿಗೆ ಈ ವಾರ ಉತ್ತಮವಾಗಿರುತ್ತದೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ. 


ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಈ ವಾರವು ಆರ್ಥಿಕ ದೃಷ್ಟಿಯಿಂದ ಫಲಪ್ರದವಾದ ವಾರವಾಗಿದೆ. ದೀರ್ಘ ಸಮಯದಿಂದ ಬೇರೆ ಕಡೆ ಸಿಲುಕಿರುವ ನಿಮ್ಮ ಹಣ ಈಗ ಕೈ ಸೇರಲಿದೆ. ಆಸ್ತಿ ಸಂಬಂಧಿತ ಕೆಲಸಗಳಿಗೂ ವಾರ ಉತ್ತಮವಾಗಿದೆ.  ಹೊಸ ವಾಹನ ಖರೀದಿ ಯೋಗವೂ ಇದೆ. ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರಿಗೆ ವಾರ ಉತ್ತಮವಾಗಿದೆ. ಉದ್ಯೋಗಸ್ಥರು ತಮ್ಮ ಮೇಲಧಿಕಾರಿಯೊಂದಿಗೆ ಕೋಪಗೊಳ್ಳದೇ  ತಾಳ್ಮೆಯಿಂದ ಕೆಲಸ ಮಾಡಿ, ಎಲ್ಲವೂ ಒಳ್ಳೆಯದೇ ಆಗಲಿದೆ. ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. 


ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರಿಗೆ ವಾರ ಅತ್ಯುತ್ತಮವಾಗಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬಸ್ಥರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಉದ್ಯೋಗ ನಿಮಿತ್ತ ಪ್ರಯಾಣ ಸಾಧ್ಯತೆ ಇದೆ. ಈ ಪ್ರಯಾಣವು ಲಾಭದಾಯಕವಾಗಿರುತ್ತದೆ. ಆದಾಗ್ಯೂ, ನೀವು ತಾಳ್ಮೆಯನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಇಲ್ಲದಿದ್ದರೆ, ಮನಸ್ಸಿನ ಶಾಂತಿ ಹಾಳಾಗಬಹುದು. ಆರೋಗ್ಯದ ವಿಚಾರದಲ್ಲಿ ವಾರವು ಸಾಮಾನ್ಯವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.