ನವದೆಹಲಿ: ಆಗಸ್ಟ್ ತಿಂಗಳ 3ನೇ ವಾರ ಇಡೀ ದೇಶಕ್ಕೆ ಬಹಳ ವಿಶೇಷವಾಗಿದೆ. ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದೆ. ಜ್ಯೋತಿಷ್ಯದ ದೃಷ್ಟಿಕೋನದಿಂದ ಈ ವಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಆಗಸ್ಟ್ 18ರಂದು ಸೂರ್ಯ ಮತ್ತು ಗ್ರಹಗಳ ಸ್ಥಾನಗಳ ಸಾಗಣೆಯು 3 ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚಿನ ಹಣ ಮತ್ತು ಲಾಭವನ್ನು ನೀಡುತ್ತದೆ. ಈ ವಾರ ಯಾವ ರಾಶಿಯವರಿಗೆ ಅದೃಷ್ಟ ಬರುತ್ತದೆ ಎಂದು ತಿಳಿದುಕೊಳ್ಳಿರಿ.


COMMERCIAL BREAK
SCROLL TO CONTINUE READING

ಆಗಸ್ಟ್ 3ನೇ ವಾರದ ಅದೃಷ್ಟದ ರಾಶಿಗಳು


ವೃಷಭ ರಾಶಿ: ವೃಷಭ ರಾಶಿಯವರಿಗೆ ಈ ವಾರ ಹೆಚ್ಚಿನ ಹಣ ಬರುತ್ತದೆ. ಈ ರಾಶಿಯವರಿಗೆ ಇದ್ದಕ್ಕಿದ್ದಂತೆ ಧನಲಾಭವಾಗಲಿದೆ. ಇವರು ಆದಾಯವನ್ನು ಹೆಚ್ಚಿಸುವ ಪ್ರಮುಖ ಮೂಲವನ್ನು ಕಾಣಬಹುದು. ವಾರದ ಕೊನೆಯಲ್ಲಿ ಉತ್ತಮ ಸುದ್ದಿ ಸಿಗಬಹುದು. ಸ್ಥಗಿತಗೊಂಡಿದ್ದ ದೊಡ್ಡ ಕೆಲಸಗಳು ಪೂರ್ಣಗೊಳ್ಳಲಿವೆ.


ಇದನ್ನೂ ಓದಿ: Chanakya Niti:ದಾಂಪತ್ಯ ಜೀವನದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತವೆ ಈ ಸಂಗತಿಗಳು... ಎಚ್ಚರ!


ಕುಂಭ ರಾಶಿ: ಕುಂಭ ರಾಶಿಯವರಿಗೆ ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರತಿಯೊಂದು ಸಮಸ್ಯೆಯೂ ಬಗೆಹರಿಯುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಸಂಬಂಧಗಳು ಉತ್ತಮವಾಗಿರುತ್ತವೆ. ಗುರುವಾರ ಉತ್ತಮ ದಿನವಾಗಿರುತ್ತದೆ. ಕೆಲಸ ಚೆನ್ನಾಗಿ ನಡೆಯುತ್ತದೆ.


ಮೀನ ರಾಶಿ: ಆಗಸ್ಟ್ ತಿಂಗಳ 3ನೇ ವಾರ ಮೀನ ರಾಶಿಯವರಿಗೆ ಬಹಳಷ್ಟು ಹಣ ಸಿಗಲಿದೆ. ಇವರ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನೀವು ಎಲ್ಲಿಂದಲಾದರೂ ಅನಿರೀಕ್ಷಿತ ಹಣ ಪಡೆಯುತ್ತೀರಿ. ಆದಾಯ ಹೆಚ್ಚಾಗಬಹುದು. ವೃತ್ತಿಜೀವನದಲ್ಲಿ ಬದಲಾವಣೆ ಇರಲಿದ್ದು, ಇದು ನಿಮಗೆ ತುಂಬಾ ಪ್ರಯೋಜನಕಾರಿ. ಸಂಬಂಧಗಳು ಉತ್ತಮವಾಗಿರುತ್ತವೆ, ಯಾವುದೇ ಸಮಸ್ಯೆ ಇದ್ದರೆ ಪರಿಹರಿಸಲ್ಪಡುತ್ತದೆ. ಪ್ರವಾಸಕ್ಕೆ ಹೋಗಬಹುದು. ಒಟ್ಟಾರೆ ಈ ವಾರವು ಎಲ್ಲಾ ವಿಷಯಗಳಲ್ಲಿಯೂ ಮಂಗಳಕರವಾಗಿರುತ್ತದೆ. ನಿಮಗೆ ಮಂಗಳವಾರ ವಿಶೇಷ ದಿನವಾಗಿರುತ್ತದೆ.


ಇದನ್ನೂ ಓದಿ: Sun Transit : ಸೂರ್ಯ ಪರಿವರ್ತನೆ : ಮೀನ ರಾಶಿಯವರಿಗೆ ಶುಭ ಫಲ, ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.