Dream vastu : ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತವೆ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಶಾಸ್ತ್ರದಲ್ಲಿ ಪರಿಹಾರ, ಕಾರಣಗಳಿವೆ. ಇದು ಕನಸುಗಳಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಅನೇಕ ಜನರಿಗೆ ನಿದ್ರೆಯ ಸಮಯದಲ್ಲಿ ಕನಸುಗಳು ಬಿಳುತ್ತವೆ. 


COMMERCIAL BREAK
SCROLL TO CONTINUE READING

ಹಗಲುಗನಸು ಕಾಣುವವರೂ ಇದ್ದಾರೆ.. ಆದರೆ ಹೆಚ್ಚಿನ ಜನರು ರಾತ್ರಿಯಲ್ಲಿ ಕನಸು ಕಾಣುತ್ತಾರೆ. ಇನ್ನೂ ಡ್ರೀಮ್‌ನಲ್ಲಿ ಸಾವು, ಪ್ರಾಣಿ ಪಕ್ಷಗಳು, ದೆವ್ವ ಹೀಗೆ ಹಲವಾರು ಚಿತ್ರ ವಿಚಿತ್ರ ಪ್ರಾಣಿಗಳೂ ಸಹ ಬರುತ್ತವೆ. ಕನಸಿನಲ್ಲಿ ಬರುವ ಪ್ರಾಣಿಗಳಿಗೆ ಮತ್ತು ಕನಸು ಕಾಣುವ ವ್ಯಕ್ತಿಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿ ಕಾರಣಗಳಿವೆ..


ಇದನ್ನೂ ಓದಿ:2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದು


ಕನಸುಗಳು ಸಹಜ ಮತ್ತು ಭಾವನಾತ್ಮಕವಾಗಿ ನಮ್ಮ ಜೀವನಕ್ಕೆ ಸಂಬಂಧಿಸಿವೆ ಎಂದು ಡ್ರೀಮ್ ಸೈನ್ಸ್ ಹೇಳುತ್ತದೆ. ಅಂತೆಯೇ, ನಿಮ್ಮ ಕನಸಿನಲ್ಲಿ ನೀವು ನೋಡುವ ವಿಷಯಗಳ ಬಗ್ಗೆ ಇದು ಅನೇಕ ಅರ್ಥಗಳನ್ನು ಬಹಿರಂಗಪಡಿಸುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಚೇಳು ಕಾಣಿಸಿಕೊಂಡರೆ ಅದರ ಅರ್ಥವೇನು ಗೊತ್ತಾ..?


ಚೇಳು ತುಂಬಾ ವಿಷಕಾರಿ ಜೀವಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅದರಲ್ಲಿ ಹಲವು ವಿಧಗಳಿದ್ದರೂ ಜ್ಯೋತಿಷ್ಯದಲ್ಲಿ ಇದು ವೃಶ್ಚಿಕ ರಾಶಿಯ ಸಂಕೇತವಾಗಿದೆ. ಶಾಸ್ತ್ರದ ಪ್ರಕಾರ, ಒಬ್ಬರ ಕನಸಿನಲ್ಲಿ ಚೇಳು ಬಂದರೆ, ಸಂಬಂಧಪಟ್ಟ ವ್ಯಕ್ತಿಯು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರ್ಥ. 


ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?


ಆದರೆ ಆ ಸಮಸ್ಯೆ ತಲೆಯ ಮೇಲೆ ಚಾಕುವಿನಂತೆ ನೇತಾಡಿದರೂ ಅದರಿಂದ ಪಾರಾಗಿ ಗೆಲ್ಲುತ್ತೀರಿ. ಚೇಳಿನಿಂದ ಕಡಿದು ಅಳುತ್ತಿರುವಂತೆ ಕನಸು ಕಂಡರೆ ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ ಎಂಬುದು ಕೂಡ ನೆನಪಿರಲಿ. ಇದರರ್ಥ ನೀವು ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಜೀವನವು ನಿಮಗೆ ಕಷ್ಟಕರವಾಗಿರುತ್ತದೆ. ಇದರಿಂದ ಹೆಚ್ಚಿನ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.