Mangal Gochar Effect : ವೈದಿಕ ಜ್ಯೋತಿಷ್ಯದ ಪ್ರಕಾರ, 2 ದಿನಗಳ ನಂತರ,  ಅಂದರೆ ಆಗಸ್ಟ್ 18,  2023 ರಂದು, ಮಧ್ಯಾಹ್ನ 3.14 ಕ್ಕೆ  ರಾಶಿಯನ್ನು ಬದಲಿಸುತ್ತದೆ. ಮಂಗಳನ ರಾಶಿ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಆದರೆ ಕೆಲವು ರಾಶಿಯವರಿಗೆ ಈ ಸಮಯದಲ್ಲಿ ವಿಶೇಷ ಫಲಗಳು ಸಿಗುತ್ತವೆ. 


COMMERCIAL BREAK
SCROLL TO CONTINUE READING

ಕನ್ಯಾರಾಶಿಯ ಆರನೇ ಮನೆಯ ಅಧಿಪತಿ ಮಂಗಳ. ಕನ್ಯಾರಾಶಿಯು ಮಂಗಳನ ಸಹಜ ಗುಣಗಳಿಗೆ ಅನುರೂಪವಾಗಿದೆ ಏಕೆಂದರೆ ಅದರ ಸ್ವಚ್ಛತೆ, ಸಮಯ ನಿರ್ವಹಣೆ ಮತ್ತು ಕಠಿಣ ಪರಿಶ್ರಮದೊಂದಿಗಿನ ಸಂಬಂಧವನ್ನು ಹೊಂದಿದೆ. ಹೀಗಾಗಿ ಮಂಗಳನ ಕನ್ಯಾ ರಾಶಿ ಪ್ರವೇಶದಿಂದ ಐದು ರಾಶಿಯವರು ವಿಶೇಷ   ಪ್ರಯೋಜನಗಳನ್ನು ಪಡೆಯಲಿದ್ದಾರೆ. 


ಇದನ್ನೂ ಓದಿ : ನಾಗ ಪಂಚಮಿಯಂದು ಈ ರೀತಿ ಪೂಜೆ ಮಾಡಿ.. ನಾಗದೇವನ ಕೃಪೆಯಿಂದ ಸಿರಿ ಸಂಪತ್ತು ನಿಮ್ಮನ್ನು ಅರಸಿ ಬರುತ್ತದೆ!


ಮೇಷ ರಾಶಿ : 
ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹ ಕನ್ಯಾರಾಶಿಯನ್ನು ಪ್ರವೇಶಿಸಲಿದೆ. ಮೇಷ ರಾಶಿಯವರು ಇದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಶುಭ ಫಲ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಈ ಸಮಯದಲ್ಲಿ ಎದುರಾಳಿಗಳ ಬಗ್ಗೆ ಜಾಗರೂಕರಾಗಿರಿ. ಯಾವುದೇ ವಿವಾದ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಆಡುವ ಪದಗಳು ಮತ್ತು ಸ್ವಭಾವದ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿ. 


ಮಿಥುನ ರಾಶಿ : 
ಮಂಗಳ ಗ್ರಹದ ಸಂಚಾರದಿಂದ ಮಿಥುನ ರಾಶಿಯವರು ಕೂಡಾ ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ, ಮಿಥುನ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕ ಪ್ರಗತಿಯ ಲಕ್ಷಣಗಳಿವೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಪ್ರಯೋಜನಕಾರಿಯಾಗುತ್ತವೆ ಮತ್ತು ಧನಾತ್ಮಕ ಫಲಿತಾಂಶಗಳನ್ನು ನೀಡಲಾಗುವುದು.


ಇದನ್ನೂ ಓದಿ : ಈ ರಾಶಿಯ ಜನರ ಬಾಳಲ್ಲಿ ಸಂಪತ್ತಿನ ಮಳೆ ಸುರಿಸಲಿದೆ ದೀಪಾವಳಿ! ಸುಖದ ಸುಪ್ಪತ್ತಿಗೆ- ಅಂಗೈಯಲಿ ನಲಿಯುವಳು ಧನಲಕ್ಷ್ಮೀ


ಕನ್ಯಾರಾಶಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ದಿನಗಳ ಬಳಿಕ ಮಂಗಳ ಗ್ರಹವು  ಇದೇ  ರಾಶಿಯನ್ನು ಪ್ರವೇಶಿಸಲಿದೆ. ಇದು ಈ ರಾಶಿಯ ಜನರ ದೈಹಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಈ ಸಮಯದಲ್ಲಿ ನಿಮ್ಮ ಮಾತುಗಳು ಮತ್ತು ಸ್ವಭಾವದ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಿ.  


ವೃಶ್ಚಿಕ ರಾಶಿ : 
ವೃಶ್ಚಿಕ ರಾಶಿಯವರಿಗೂ ಮಂಗಳ ಗ್ರಹದ ಸಂಚಾರ ಮಂಗಳಕರವಾಗಿರುತ್ತದೆ. . ಈ ಸಮಯದಲ್ಲಿ ಸಾಮಾಜಿಕ ಸಂಬಂಧಗಳು ಗಟ್ಟಿಯಾಗಲಿವೆ.  ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಸಾಲ ಮಾಡಿಕೊಂಡವರು ಈ ಸಮಯದಲ್ಲಿ ಸಾಲದಿಂದ ಮುಕ್ತಿ ಪಡೆಯುವರು. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಕೂಡಾ ಪರಿಹಾರ ಸಿಗುವುದು. 


ಧನು ರಾಶಿ : 
ಈ ಸಮಯದಲ್ಲಿ, ವೃತ್ತಿ ಕ್ಷೇತ್ರದಲ್ಲಿ ಸಂಭಾವ್ಯ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿಪರ ಹಾದಿಯಲ್ಲಿ ಬದಲಾವಣೆಯನ್ನು ಬಯಸಿದರೆ, ಹೊಸ ಮತ್ತು ಧನಾತ್ಮಕ ಅವಕಾಶಗಳು ನಿಮ್ಮೆದುರು ತೆರೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನ ಹೆಚ್ಚಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.