ನವದೆಹಲಿ: ಹಿಂದೂ ಧರ್ಮಗ್ರಂಥಗಳಲ್ಲಿ ಲಕ್ಷಾಂತರ ದೇವ-ದೇವತೆಗಳು ಅರಳಿ ಮರದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಅರಳಿ ಮರವನ್ನು ಪೂಜಿಸಲು ಹಲವು ನಿಯಮಗಳ ಬಗ್ಗೆ ತಿಳಿಸಲಾಗಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅರಳಿ ಮರದಲ್ಲಿ ನೆಲೆಸಿದ್ದಾರೆಂದು ನಂಬಲಾಗಿದೆ. ಅದೇ ರೀತಿ ತಾಯಿ ಲಕ್ಷ್ಮಿದೇವಿಯು ಸಹ ಅದರಲ್ಲಿ ನೆಲೆಸಿದ್ದಾಳೆಂದು ಹೇಳಲಾಗುತ್ತದೆ. ಆದರೆ ಅರಳಿ ಮರವನ್ನು ನಿಯಮಿತವಾಗಿ ಪೂಜಿಸದಿದ್ದರೆ, ವ್ಯಕ್ತಿಯು ಬಡತನವನ್ನು ಎದುರಿಸಬೇಕಾಗುತ್ತದೆ. ಭಾನುವಾರದಂದು ಅಪ್ಪಿತಪ್ಪಿಯೂ ಅರಳಿ ಮರವನ್ನು ಮುಟ್ಟಬಾರದು ಅಥವಾ ಅದಕ್ಕೆ ನೀರನ್ನು ಅರ್ಪಿಸಬಾರದು. ಯಾರಾದರೂ ಭಾನುವಾರದಂದು ನೀರನ್ನು ಅರ್ಪಿಸಿದರೆ, ಆ ವ್ಯಕ್ತಿಯು ದುರದೃಷ್ಟವನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಭಾನುವಾರ ಅರಳಿ ಮರಕ್ಕೆ ನೀರು ಅರ್ಪಿಸಬೇಡಿ 


ವಾರದ ಭಾನುವಾರವನ್ನು ತಾಯಿ ಲಕ್ಷ್ಮಿದೇವಿಯ ಸಹೋದರಿ ಅಲಕ್ಷ್ಮಿಗೆ ಸಮರ್ಪಿಸಲಾಗಿದೆ. ಭಗವಾನ್ ವಿಷ್ಣುವು ಲಕ್ಷ್ಮಿಯ ಸಹೋದರಿ ಅಲಕ್ಷ್ಮಿಯನ್ನು ಭಾನುವಾರದಂದು ಮಾತ್ರ ಅರಳಿ ಮರದಲ್ಲಿ ವಾಸಿಸಲು ಅನುಮತಿಸಿದ್ದಾನೆ. ಯಾರೂ ನನ್ನನ್ನು ನೆನಪಿಸಿಕೊಳ್ಳುವುದಿಲ್ಲ, ತನಗೂ ಜನರ ಬಳಿಗೆ ಹೋಗಬೇಕು ಎಂದು ಅಲಕ್ಷ್ಮಿ ವಿಷ್ಣುವಿಗೆ ಹೇಳಿದ್ದಳಂತೆ. ಆಗ ವಿಷ್ಣುವು ಅಲಕ್ಷ್ಮಿಗೆ ಭಾನುವಾರ ಅರಳಿ ಮರದಲ್ಲಿ ನೆಲೆಸಲು ಹೇಳಿದ್ದನಂತೆ. ಆದ್ದರಿಂದ ಭಾನುವಾರದಂದು ಅರಳಿ ಮರಕ್ಕೆ ನೀರು ಅರ್ಪಿಸಿದರೆ ಮನೆಯಲ್ಲಿ ಬಡತನ ಬರುತ್ತದೆ. ವ್ಯಕ್ತಿಯು ನಿರಾಶೆಯನ್ನು ಅನುಭವಿಸುತ್ತಾನೆ. ಇದನ್ನು ತಪ್ಪಿಸಲು ಭಾನುವಾರದಂದು ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಡಿ.  


ಇದನ್ನೂ ಓದಿ: ರಾಮ ಜನ್ಮಭೂಮಿಯಿಂದ ತುಳಸಿ ಸ್ಮಾರಕ ಭವನವರೆಗೆ ಅಯೋಧ್ಯೆಯಲ್ಲಿ ನೀವು ಭೇಟಿ ನೀಡಲೇಬೇಕಾದ 5 ಸ್ಥಳಗಳಿವು


ಅರಳಿ ಮರದ ಬೇರಿನಲ್ಲಿ ದೀಪ ಬೆಳಗಿಸಿ 


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರಳಿ ಮರದ ಬುಡದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ. ಮನೆಯಿಂದ ಬಡತನ ನಿರ್ಮೂಲನೆಯಾಗುತ್ತದೆ. ಅಷ್ಟೇ ಅಲ್ಲ ಅನೇಕ ಗ್ರಹದೋಷಗಳೂ ದೂರವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಇದಕ್ಕೆ ಅತ್ಯಂತ ಮಂಗಳಕರ ದಿನ. ಈ ದಿನ ಗ್ರಹದೋಷ ನಿವಾರಣೆ ಹಾಗೂ ಶನಿಯ ಸಾಡೇಸಾತಿಯಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.  


ಅರಳಿ ಮರದ ಎಲೆಗಳನ್ನು ಹೀಗೆ ಬಳಸಿ 


ಗುರುವಾರದಂದು ಅರಳಿ ಮರದ ಎಲೆಗಳನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ. ಹಳದಿ ಚಂದನದಿಂದ ಅದರ ಮೇಲೆ ʼಓಂ ಶ್ರೀ ಹಿ ಶ್ರೀ ನಮಃʼ ಎಂದು ಬರೆಯಿರಿ. ನಂತರ ಎಲೆಯ ಮೇಲೆ ಬೆಳ್ಳಿಯ ನಾಣ್ಯವನ್ನು ಇರಿಸಿ ಮತ್ತು ಅದನ್ನು ಸುರಕ್ಷಿತವಾಗಿರಿಸಿ. ನಿಮ್ಮ ಬಳಿ ಬೆಳ್ಳಿ ನಾಣ್ಯವಿಲ್ಲದಿದ್ದರೆ, ನೀವು ಅರಳಿ ಮರದ ಎಲೆಯ ಮೇಲೆ ʼಓಂ ನಮೋ ಭಗವತೇ ವಾಸುದೇವಾಯ ನಮಃʼ ಎಂದು ಬರೆದು ಮನೆಯ ಪವಿತ್ರ ಸ್ಥಳದಲ್ಲಿ ಇಡಬಹುದು. ಎಲೆಗಳು ಒಣಗಿದ ನಂತರ ಅವುಗಳನ್ನು ನದಿಯಲ್ಲಿ ಮುಳುಗಿಸಿ. ಇದು ದೇವರ ಕೃಪೆಯಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.  


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.) 


ಇದನ್ನೂ ಓದಿ: ತೆಂಗೆನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ, ಮರಳಿ ಬರೋದಿಲ್ಲ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.