Dhan trayodashi 2024: ಹಿಂದೂ ಸಂಪ್ರದಾಯದ ಪ್ರಕಾರ ಕೆಲವು ದಿನಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ದೀಪಾವಳಿ ಹಬ್ಬದ ಧನ ತ್ರಯೋದಶಿ ದಿನ ಕೆಲವು ಪರಿಹಾರ ಮಾಡಿದರೆ ಸಾಕಷ್ಟ ಆರ್ಥಿಕ ಲಾಭಗಳಿಸಬಹುದು. 


COMMERCIAL BREAK
SCROLL TO CONTINUE READING

ಹಿಂದೂ ಸಂಪ್ರದಾಯದ ಪ್ರಕಾರ ಲಕ್ಷ್ಮಿ ದೇವಿಗೆ ಧನ ತ್ರಯೋದಶಿ ಅತ್ಯಂತ ಮಂಗಳಕರ ದಿನವಾಗಿದೆ. ಭಕ್ತರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಈ ಧನ ತ್ರಯೋದಶಿಗೆ ವಿಶೇಷ ಸ್ಥಾನವಿದೆ. 


ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ಈ ಧನ ತ್ರಯೋದಶಿ ತಿಧಿಯಂದು ಅನೇಕರು ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ.. ಹಾಗೆಯೇ ಸಂಜೆಯ ವೇಳೆ ಮನೆ ಬಾಗಿಲಿನ ಮುಂದೆ ಬಲಿಯ ದೀಪವನ್ನು ಬೆಳಗಿಸುತ್ತಾರೆ. 


ಇದನ್ನೂ ಓದಿ: ಧಂತೇರಸ್‌ನಲ್ಲಿ ಚಿಟಿಕೆ ಉಪ್ಪು ಬದಲಿಸುತ್ತೆ ಅದೃಷ್ಟ, ಮನೆಗೆ ಲಕ್ಷ್ಮಿಯ ಆಗಮನ ಧನವೃಷ್ಟಿ


ಮೊದಲು, ಒಂದು ಬಟ್ಟಲಿನಲ್ಲಿ ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು, ಬೆಲ್ಲವನ್ನು ತುರಿ ಮಾಡಿ, ಹಸಿ ಹಸುವಿನ ಹಾಲನ್ನು ಸೇರಿಸಿ ದೀಪವನ್ನು ತಯಾರಿಸಿ. ಮನೆಯ ಬಾಗಿಲಿನ ಮುಂದೆ ಹಿಟ್ಟಿನ ದೀಪವನ್ನು ಇಟ್ಟು ಅದರಲ್ಲಿ ಎಳ್ಳೆಣ್ಣೆ ಸುರಿದು ದಕ್ಷಿಣ ದಿಕ್ಕಿಗೆ ಬೆಳಗುವಂತೆ ದೀಪವನ್ನು ಹಚ್ಚಿ. ಇದನ್ನು ಬಲಿ ದೀಪ ಎಂದು ಕರೆಯಲಾಗುತ್ತದೆ.


ದೀಪದ ಬಳಿ ವೀಳ್ಯದೆಲೆ ಇಟ್ಟು ಸ್ವಲ್ಪ ಅಕ್ಕಿ ಮತ್ತು ಬೆಲ್ಲವನ್ನು ಅರ್ಪಿಸಬೇಕು. ಮರುದಿನ ಸ್ನಾನ ಮಾಡಿ, ಹಿಟ್ಟಿನ ದೀಪ, ತೆಂಗಿನಕಾಯಿ, ನಾಣ್ಯ ಮತ್ತು ನೈವೇದ್ಯವನ್ನು ಮರದ ಕೆಳಗೆ ಅಥವಾ ಹರಿಯುವ ನೀರಿನಲ್ಲಿ ಯಾರೂ ಕಾಲಿಡದ ಜಾಗದಲ್ಲಿ ಬಿಡಬೇಕು. ಹೀಗೆ ಮಾಡಿದರೆ ಯಮಧರ್ಮರಾಜನ ಕೃಪೆಗೆ ಪಾತ್ರರಾಗುವಿರಿ.


ಯಜ್ಞದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿರುವ ಕುಟುಂಬದವರೆಲ್ಲ ಸೇರಿ ವರ್ಷಪೂರ್ತಿ ಅಕಾಲಿಕ ಮರಣ ದೋಷಗಳು ದೂರವಾಗುತ್ತವೆ. ಪಿತೃ ದೋಷಗಳು ದೂರವಾಗುತ್ತವೆ. ಪರಿಪೂರ್ಣ ಆರೋಗ್ಯವನ್ನು ಹೊಂದುತ್ತಾರೆ ಎಂದು  ಹೇಳುತ್ತಾರೆ.


ಇದನ್ನೂ ಓದಿ: 500 ವರ್ಷ ಬಳಿಕ ಈ 4 ಜನ್ಮರಾಶಿಗೆ ಬಂಪರ್‌ ಲಾಟರಿ.. ದೀಪಾವಳಿಗೂ ಮುನ್ನವೇ ಅದೃಷ್ಟ, ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು, ಬ್ರಹ್ಮಾಂಡ ಯಶಸ್ಸು!


ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.