Joe Root: ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಟಾಪ್-5 ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರೂ ಇದ್ದಾರೆ. ಈ ಪಟ್ಟಿಗೆ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಪ್ರತಿ ಮೈದಾನದಲ್ಲಿ ರನ್‌ಗಳ ಮಹಾಪೂರವನ್ನೇ ಹರಿಸುವ ಮೂಲಕ ಕ್ರಿಕೆಟ್ ರನ್ ಮಿಷನ್ ಎಂದು ಗುರುತಿಸಿಕೊಂಡರು.


COMMERCIAL BREAK
SCROLL TO CONTINUE READING

ಆದರೆ, ಸದ್ಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ರನ್‌ ಮಿಷನ್‌ ಕ್ಷೀಣಿಸುತ್ತಿದೆ. ಅದಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಆಟವೇ ಕಾರಣ. ಕೇವಲ ಎರಡೇ ವರ್ಷಗಳಲ್ಲಿ 17 ಶತಕ ಸಿಡಿಸಿದ ವಿರಾಟ್ ಕೊಹ್ಲಿ ರನ್ ಮಿಷನ್ ನ ಸ್ಥಿತಿ ಈ ಆಟಗಾರನ ಕೈ ಸೇರುವ ಸನ್ನಿವೇಶಗಳಿವೆ. 


ಅವರೇ ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಜೋ ರೂಟ್. ಪ್ರಸ್ತುತ, ಅವರ ಕ್ರಿಕೆಟ್ ವೃತ್ತಿಜೀವನವು ಉತ್ತುಂಗದಲ್ಲಿದೆ. ತಮ್ಮ ಅದ್ಭುತ ಆಟದ ಮೂಲಕ ಕ್ರಿಕೆಟ್ ದಾಖಲೆಗಳನ್ನು ಮುರಿಯುತ್ತಿರುವ ದಿಗ್ಗಜ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವತ್ತ ಸಾಗುತ್ತಿದ್ದಾರೆ. ಜೋ ರೂಟ್ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.. 


ಈ ಸರಣಿಯಲ್ಲಿ ಜೋ ರೂಟ್ 116.66 ಸರಾಸರಿಯಲ್ಲಿ 350 ರನ್ ಗಳಿಸಿದರು. ಇದರಲ್ಲಿ 143 ರನ್‌ಗಳ ಅದ್ಭುತ ಇನ್ನಿಂಗ್ಸ್ ಕೂಡ ಸೇರಿತ್ತು. ಮೂರನೇ ಮತ್ತು ಅಂತಿಮ ಟೆಸ್ಟ್ ಸೆಪ್ಟೆಂಬರ್ 6 ರಂದು ಓವಲ್‌ನಲ್ಲಿ ನಡೆಯಲಿದೆ. ಈಗ ಎಲ್ಲರ ಕಣ್ಣು ಜೋ ರೂಟ್ ಮೇಲೆ ನೆಟ್ಟಿದೆ. 


ಜೋರೂಟ್ ಕೇವಲ ಎರಡು ವರ್ಷಗಳಲ್ಲಿ 15 ಶತಕ ಮತ್ತು 2 ದ್ವಿಶತಕಗಳನ್ನು ಗಳಿಸಿದರು. ಜೋ ರೂಟ್, ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿ ಅವರ ಹೆಸರುಗಳು ಟೆಸ್ಟ್ ಮಾದರಿಯಲ್ಲಿ ಫ್ಯಾಬ್-4 ಪಟ್ಟಿಯಲ್ಲಿವೆ. ಅಂದರೆ ಪ್ರಸಕ್ತ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ 4 ಬ್ಯಾಟ್ಸ್‌ಮನ್‌ಗಳು. ಇವರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.


ಇದನ್ನೂ ಓದಿ-ಸ್ನಾನ ಮಾಡೋವಾಗ ಬಾತ್‌ರೂಮ್‌ಗೆ ನುಗ್ಗುತ್ತಿದ್ರು.. ಮಲಗಿದ್ರೆ ಅಲ್ಲೂ ಬರೋರು.. ಮುಟ್ಟಬಾರದ ಜಾಗ ಮುಟ್ಟುತ್ತಿದ್ರು.. ಖ್ಯಾತ ಕನ್ನಡ ಸಿರೀಯಲ್‌ ನಟಿ ಸೆನ್ಸೇಷನಲ್‌ ಕಾಮೆಂಟ್!!‌


ಆದರೆ ಸದ್ಯ ವಿಭಿನ್ನ ಮೂಡ್‌ನಲ್ಲಿರುವ ಜೋ ರೂಟ್ ಕಳೆದ ಎರಡು ವರ್ಷಗಳಿಂದ ಈ ಮೂವರು ಆಟಗಾರರನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ರನ್‌ಗಳ ಮಹಾಪೂರವನ್ನೇ ಸುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಜೋ ರೂಟ್ 15 ಶತಕ ಮತ್ತು 2 ದ್ವಿಶತಕ ಗಳಿಸಿದ್ದಾರೆ.


ರೂಟ್ 2020 ರವರೆಗೆ 17 ಶತಕಗಳೊಂದಿಗೆ ಫ್ಯಾಬ್-4 ನ ಕೆಳಭಾಗದಲ್ಲಿದ್ದರು.. ಆದರೆ ಇದಾದ ನಂತರ ಸತತ ಶತಕಗಳ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದರು. ಈ 2 ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇದೀಗ 34 ಶತಕಗಳನ್ನು ತಲುಪಿದ್ದಾರೆ.


ಕಳೆದ ಎರಡು ವರ್ಷಗಳಲ್ಲಿ, ಜೋ ರೂಟ್ ತಮ್ಮ ಹೆಸರಿಗೆ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಪೈಕಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡಿರುವುದು ಅವರ ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆಯಾಗಿದೆ. ಅಲೆಸ್ಟರ್ ಕುಕ್ (33 ಶತಕ) ದಾಖಲೆ ಮುರಿದರು.


ಜೋ ರೂಟ್ ಇದುವರೆಗೆ 145 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 34 ಶತಕಗಳೊಂದಿಗೆ 12377 ರನ್ ಗಳಿಸಿದ್ದಾರೆ. ಜೋ ರೂಟ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೆಲವು ಹೆಜ್ಜೆಗಳ ದೂರದಲ್ಲಿದ್ದಾರೆ.


ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯು ಲೆಜೆಂಡರಿ ಬ್ಯಾಟರ್ ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ 15921 ರನ್ ಗಳಿಸಿದ್ದಾರೆ. ಅವರು 51 ಶತಕ ಮತ್ತು 68 ಅರ್ಧ ಶತಕಗಳನ್ನು ಗಳಿಸಿದ್ದಾರೆ. 


ಇದನ್ನೂ ಓದಿ-ಈ ವರ್ಷ ಕಿಂಗ್‌ ಕೊಹ್ಲಿ ಪಾವತಿಸಿದ ತೆರಿಗೆ ಎಷ್ಟು ಗೊತ್ತಾ? ನಂಬರ್‌ ಕೇಳಿದ್ರೆ ನೀವು ಶಾಕ್‌ ಆಗ್ತೀರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.