India v/s Pakistan : ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್ 2023 ರ ಹೈ ಪ್ರೊಫೈಲ್ ಪಂದ್ಯಕ್ಕೆ ಹೊಸ ದಿನಾಂಕ ನಿಗದಿಯಾಗಿದೆ. ಮೂಲಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಈಗ ಅಕ್ಟೋಬರ್ 15 ರ ಬದಲು  ಅಕ್ಟೋಬರ್ 14 ರಂದು ನಡೆಯಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನವರಾತ್ರಿ ಹಬ್ಬದ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ದಿನಾಂಕವನ್ನು ಬದಲಾಯಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ದಿನ ನಡೆಯಲಿದೆ IND vs PAK ವಿಶ್ವಕಪ್ ಪಂದ್ಯ :  
ಭಾರತ ಮತ್ತು ಪಾಕಿಸ್ತಾನ ನಡುವಿನ 2023 ರ ವಿಶ್ವಕಪ್‌ನ ಈ ಹೈ ಪ್ರೊಫೈಲ್ ಪಂದ್ಯದ ದಿನಾಂಕವನ್ನು ಬದಲಿಸಲಾಗಿದೆ. ಅಕ್ಟೋಬರ್ 15 ರಿಂದ ಭಾರತದಲ್ಲಿ ನವರಾತ್ರಿ ಪ್ರಾರಂಭವಾಗುತ್ತಿದೆ. ಅಹಮದಾಬಾದ್‌ನಲ್ಲಿ ನವರಾತ್ರಿಯ ಸಂದರ್ಭ ಗರ್ಬಾ ಆಯೋಜನೆ ಮಾಡಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ದಿನಾಂಕವನ್ನು ಬದಲಾಯಿಸುವಂತೆ ಭದ್ರತಾ ಸಂಸ್ಥೆಗಳು ಬಿಸಿಸಿಐಗೆ ಸಲಹೆ ನೀಡಿದ್ದವು. ಅಕ್ಟೋಬರ್ 15 ರಿಂದ, ನವರಾತ್ರಿ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಇದರ ಜೊತೆಗೆ ಕ್ರಿಕೆಟ್ ಪಂದ್ಯ ನಡೆದರೆ ಅಭಿಮಾನಿಗಳು  ವಿಶ್ವದ ಮೂಲೆ ಮೂಲೆಯಿಂದಲೂ ಇಲ್ಲಿ ಸೇರುತ್ತಾರೆ. ಹೀಗಾದಾಗ   ಪರಿಸ್ಥಿತಿಯನ್ನು ನಿಭಾಯಿಸಲು, ತೊಂದರೆ ಉಂಟಾಗಬಹುದು ಎನ್ನುವ ಮುನ್ನೆಚ್ಚರಿಕೆಯ ಕಾರಣದಿಂದ ಪಂದ್ಯದ ದಿನಾಂಕವನ್ನು ಬದಲಾಯಿಸಲಾಗಿದೆ.


ಇದನ್ನೂ ಓದಿ : ಖುಲ್ಲಂ ಖುಲ್ಲಾ ಹೊಟೇಲ್ ನಿಯಮಗಳನ್ನು ಮುರಿದ ಟೀಮ್ ಇಂಡಿಯಾ! ಆಟಗಾರನ ರೂಂನಲ್ಲಿ ಮಹಿಳೆ?


 ಹೊರ ಬಿದ್ದಿದೆ ಬಹು ದೊಡ್ಡ ಅಪ್ಡೇಟ್ : 
ಇವುಗಳನ್ನು ಹೊರತುಪಡಿಸಿ, ವಿಶ್ವಕಪ್ ವೇಳಾಪಟ್ಟಿಯಲ್ಲಿ ಇನ್ನೂ ಕೆಲವು ಬದಲಾವಣೆಗಳಿವೆ. ಈ ಎಲ್ಲಾ ಬದಲಾವಣೆಗಳನ್ನು ಇಂದು (ಜುಲೈ 31) ಪ್ರಕಟಿಸಬಹುದು. ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ 2023ರ ವಿಶ್ವಕಪ್‌ನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಿದ್ದರು. ICC ಕ್ರಿಕೆಟ್ ವಿಶ್ವಕಪ್ 5 ಅಕ್ಟೋಬರ್ 2023 ರಿಂದ 19 ನವೆಂಬರ್ 2023 ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯಲಿದೆ.  ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ ಆತಿಥ್ಯ ವಹಿಸಲಿರುವ ಈ ಕ್ರಿಕೆಟ್ ಪಂದ್ಯಾವಳಿಯ ಪಂದ್ಯಗಳ ಸಮಯವನ್ನು ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2:00 ಗಂಟೆಗೆ ಇರಿಸಲಾಗಿದೆ. ವಿಶ್ವಕಪ್ ಸಮೀಪಿಸುತ್ತಿದ್ದಂತೆ ಪಂದ್ಯಗಳ ಸಮಯದಲ್ಲೂ ಬದಲಾವಣೆಗಳನ್ನು ಮಾಡಬಹುದು.


2023ರ ವಿಶ್ವಕಪ್‌ನಲ್ಲಿ ಭಾರತದ ವೇಳಾಪಟ್ಟಿ : 
ಭಾರತ v/s ಆಸ್ಟ್ರೇಲಿಯಾ, 8 ಅಕ್ಟೋಬರ್, ಚೆನ್ನೈ
ಭಾರತ v/s ಅಫ್ಘಾನಿಸ್ತಾನ, 11 ಅಕ್ಟೋಬರ್, ದೆಹಲಿ
ಭಾರತ v/s ಪಾಕಿಸ್ತಾನ, 14 ಅಕ್ಟೋಬರ್, ಅಹಮದಾಬಾದ್
ಭಾರತ v/s ಬಾಂಗ್ಲಾದೇಶ, 19 ಅಕ್ಟೋಬರ್, ಪುಣೆ
ಭಾರತ v/s ನ್ಯೂಜಿಲೆಂಡ್ ಅಕ್ಟೋಬರ್ 22 ಧರ್ಮಶಾಲಾ
ಭಾರತ v/s ಇಂಗ್ಲೆಂಡ್, 29 ಅಕ್ಟೋಬರ್, ಲಕ್ನೋ
ಭಾರತ v/s ನೆದರ್ಲ್ಯಾಂಡ್ಸ್, ನವೆಂಬರ್ 2, ಮುಂಬೈ
ಭಾರತ v/s ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
ಭಾರತ v/S ಶ್ರೀಲಂಕಾ, ನವೆಂಬರ್ 11, ಬೆಂಗಳೂರು


ಇದನ್ನೂ ಓದಿ : ಒಂದೇ ಓವರ್ ನಲ್ಲಿ 7 ಸಿಕ್ಸ್!, ಋತುರಾಜ್ ಗಾಯಕ್ವಾಡ್ ವಿಶ್ವ ದಾಖಲೆ ಸರಿಗಟ್ಟಿದ 21 ವರ್ಷದ ಆಟಗಾರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.