ಮೊದಲ ಬಾಲ್‌ನಲ್ಲಿ 400 ರನ್, 2ನೇ ಚೆಂಡಿನಲ್ಲಿ ಕೇವಲ 62 ರನ್; ಭಾರತಕ್ಕೆ ಮಾರಕವಾಯ್ತಾ ಹೊಸ ಚೆಂಡು?
India vs New Zealand, 1st Test Match: ಟೀಂ ಇಂಡಿಯಾದ ಇನ್ನಿಂಗ್ಸ್‌ನ 81ನೇ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಅಂಪೈರ್‌ಗಳು ಹೊಸ ಚೆಂಡು ನೀಡಿದ ಬಳಿಕವೇ ಭಾರತ ಪರವಿದ್ದ ಪಂದ್ಯವು ಕಿವೀಸ್ ಪರ ವಾಲಿತು ಎನ್ನಲಾಗಿದೆ. ಈ ವೇಳೆ ಭಾರತ ಕೇವಲ 3 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿತ್ತು.
IND vs NZ, 1st Test Match: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾಗೆ ಹೊಸ ಚೆಂಡು ಮಾರಕವಾಗಿ ಪರಿಣಮಿಸಿದೆ. ಏಕೆಂದರೆ ಮೊದಲ ಬಾಲ್‌ನಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಭಾರತ ತಂಡವು, ಹೊಸ ಚೆಂಡಿನಿಂದಾಗಿ ಕೇವಲ 62 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಳ್ಳಬೇಕಾಯಿತು.
ಹೌದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಕೇವಲ 62 ರನ್ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಈ ದಿಢೀರ್ ಪತನಕ್ಕೆ ಹೊಸ ಚೆಂಡು ಕಾರಣವೆಂದು ಹೇಳಲಾಗುತ್ತಿದೆ. ರಿಷಭ್ ಪಂತ್ ಕ್ರೀಸ್‌ನಲ್ಲಿದಷ್ಟು ಕಾಲ ಉತ್ತಮವಾಗಿಯೇ ರನ್ ಕಲೆಹಾಕುತ್ತಿದ್ದ ಭಾರತ ನಂತರ ಒಂದರ ಹಿಂದೆ ಒಂದರಂತೆ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದನ್ನೂ ಓದಿ: IND vs NZ, 1st Test: ರಿಷಭ್ ಪಂತ್ ಹೆಗಲೆರಿದ ಸಚಿನ್ ತೆಂಡೂಲ್ಕರ್‌ಗೆ ಕಾಡಿದ್ದ ʼನರ್ವಸ್ 90ʼ ಭೂತ..!
ಅದ್ಭುತವಾಗಿ ಆಟವಾಡಬೇಕಿದ್ದ ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಆರ್.ಅಶ್ವಿನ್ ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ಹೊಸ ಚೆಂಡು ಮುಳುವಾಯ್ತು ಅನ್ನೋ ಚರ್ಚೆ ಆರಂಭವಾಗಿದೆ. ಟೀಂ ಇಂಡಿಯಾದ ಇನ್ನಿಂಗ್ಸ್‌ನ 81ನೇ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಅಂಪೈರ್‌ಗಳು ಹೊಸ ಚೆಂಡು ನೀಡಿದ ಬಳಿಕವೇ ಭಾರತ ಪರವಿದ್ದ ಪಂದ್ಯವು ಕಿವೀಸ್ ಪರ ವಾಲಿತು ಎನ್ನಲಾಗಿದೆ. ಈ ವೇಳೆ ಭಾರತ ಕೇವಲ 3 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿತ್ತು. 146 ರನ್ ಗಳಿಸಿದ್ದ ಸರ್ಫರಾಜ್ ಖಾನ್ ಮತ್ತು 87 ರನ್ ಸಿಡಿಸಿದ್ದ ರಿಷಭ್ ಪಂತ್ ಕ್ರೀಸ್‌ನಲ್ಲಿದ್ದರು. ಆಗ ನ್ಯೂಜಿಲೆಂಡ್‌ನ ಟಿಮ್ ಸೌಥಿ ಹೊಸ ಚೆಂಡಿನೊಂದಿಗೆ ಬೌಲಿಂಗ್ ಆರಂಭಿಸಿದರು. ಆ ಓವರ್‌ನಲ್ಲಿ ಭಾರತ ತಂಡವು ಕೇವಲ 1 ರನ್ ಮಾತ್ರ ಕಲೆ ಹಾಕಿತ್ತು.
ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ ಸರ್ಫರಾಜ್; ಕಳೆದ 10 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ
ಭಾರತ ತಂಡ ಎದುರಿಸಿದ ಮೊದಲ ಚೆಂಡಿನಲ್ಲಿ ಒಟ್ಟು 80 ಓವರ್‌ಗಳನ್ನು ಆಡಲಾಗಿತ್ತು. ಆಗ ಭಾರತ ತಂಡವು 5ರ ಸರಾಸರಿಯಲ್ಲಿ 400 ರನ್ ಕಲೆ ಹಾಕಿ ಕೇವಲ 3 ವಿಕೆಟ್ ಕಳೆದುಕೊಂಡಿತ್ತು. ಆದರೆ 81ನೇ ಓವರ್‌ನಲ್ಲಿ ಹೊಸ ಚೆಂಡು ಬಂದ ಬಳಿಕ ಕೇವಲ 19 ಓವರ್‌ನಲ್ಲಿ ಕೇವಲ 3.18 ಸರಾಸರಿಯಲ್ಲಿ 62 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಹೀಗಾಗಿ ಭಾರತಕ್ಕೆ ಹೊಸ ಚೆಂಡು ಮಾರಕವಾಯಿತು ಅಂತಾ ಹೇಳಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.