ಸುನಾಮಿಗೆ ಸಿಲುಕಿ ಕೊಚ್ಚಿಯೇ ಹೋಗುತ್ತಿದ್ದರು ಈ ದಿಗ್ಗಜ್ಜ ಕ್ರಿಕೆಟಿಗ !ಕೊನೆ ಘಳಿಗೆಯಲ್ಲಿ ಬಚಾವಾದ ರೀತಿ ಪವಾಡವೇ !

ಶ್ರೀಲಂಕಾಕ್ಕೆ ಸುನಾಮಿ ಅಪ್ಪಳಿಸಿದ ದಿನ, ಈ ದಿಗ್ಗಜ್ಜ ಕ್ರಿಕೆಟಿಗ ಪವಾಡ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ. ತನ್ನ ಕತೆಯನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ ಈ ಬೌಲರ್.   

Written by - Ranjitha R K | Last Updated : Oct 19, 2024, 04:11 PM IST
  • ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ಅತ್ಯುತ್ತಮ ಕ್ರೀಡಾಂಗಣ
  • ಸಮುದ್ರ ಮತ್ತು ಕ್ರೀಡಾಂಗಣದ ನಡುವೆ 16ನೇ ಶತಮಾನದ ಗಾಲೆ ಕೋಟೆಯಿದೆ
  • ವಿಶ್ವದ ಇಬ್ಬರು ಶ್ರೇಷ್ಠ ಸ್ಪಿನ್ನರ್‌ಗಳು ಇತಿಹಾಸ ಸೃಷ್ಟಿಸಿದ ಐತಿಹಾಸಿಕ ಮೈದಾನ
ಸುನಾಮಿಗೆ ಸಿಲುಕಿ ಕೊಚ್ಚಿಯೇ ಹೋಗುತ್ತಿದ್ದರು ಈ ದಿಗ್ಗಜ್ಜ ಕ್ರಿಕೆಟಿಗ !ಕೊನೆ ಘಳಿಗೆಯಲ್ಲಿ ಬಚಾವಾದ ರೀತಿ ಪವಾಡವೇ !  title=

ಪ್ರಕೃತಿ ಮತ್ತು ಇತಿಹಾಸದ ಸಂಗಮ ಶ್ರೀಲಂಕಾದ ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ವಿಶ್ವದ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಸಮುದ್ರ ಮತ್ತು ಕ್ರೀಡಾಂಗಣದ ನಡುವೆ 16ನೇ ಶತಮಾನದ ಗಾಲೆ ಕೋಟೆಯಿದೆ. ಅನೇಕ ಜನರು ಈ ಕೋಟೆಯಿಂದ ಕ್ರಿಕೆಟ್ ವೀಕ್ಷಿಸುತ್ತಾರೆ.ವಿಶ್ವದ ಇಬ್ಬರು ಶ್ರೇಷ್ಠ ಸ್ಪಿನ್ನರ್‌ಗಳು ಇತಿಹಾಸ ಸೃಷ್ಟಿಸಿದ ಐತಿಹಾಸಿಕ ಮೈದಾನ ಇದು. 

ಡಿಸೆಂಬರ್ 26, 2004 ರಂದು ಇಂಡೋನೇಷ್ಯಾ ಬಳಿ ಸಮುದ್ರದ ತಳದಲ್ಲಿ 9.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ಸಮುದ್ರದಲ್ಲಿ ಸುನಾಮಿ ಅಲೆಗಳು ಎದ್ದಿತ್ತು. ಈ ಅಲೆಗಳು ತನ್ನೊಳಗೆ ನಗರಗಳನ್ನೇ ನುಂಗಿ ಹಾಕಿತ್ತು.  

ಇದನ್ನೂ ಓದಿ : IPL 2025: RCB ತಂಡ ಸೇರಲು ಕೇಳಿದ ಅಭಿಮಾನಿಗೆ ರೋಹಿತ್‌ ಶರ್ಮಾ ನೀಡಿದ ಉತ್ತರ ಇದು! ಬೆಂಗಳೂರು ಬಾಯ್ಸ್‌ಗೆ ಬಂದಂಗಾಯ್ತು ಆನೆಬಲ!

ಶ್ರೀಲಂಕಾಕ್ಕೆ ಸುನಾಮಿ ಅಪ್ಪಳಿಸಿದ ದಿನ, ಮುತ್ತಯ್ಯ  ಮುರಳೀಧರನ್  ಕೊಲಂಬೊದಿಂದ ತನ್ನ ತಾಯಿ, ಸಹೋದರ ಮತ್ತು ಪ್ರೇಯಸಿಯೊಂದಿಗೆ ಸೆನಿಗಾಮಾ ಮಕ್ಕಳ ಹಬ್ಬಕ್ಕೆ ತೆರಳುತ್ತಿದ್ದರು. ಸೆನಿಗಮಕ್ಕೂ ಗಾಲೆಗೂ ಹೆಚ್ಚು ದೂರವಿಲ್ಲ. ಈ ಕಾರ್ಯಕ್ರಮಕ್ಕೆ ಮುರಳಿ ಸುಮಾರು 20 ನಿಮಿಷ ತಡವಾಗಿ ಬಂದರು.

ಆ ವಿಳಂಬವೇ ಅವರ ಪ್ರಾಣ ಉಳಿಸಿದ್ದು.ಈ ಬಗ್ಗೆ ಡೈಲಿ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ ಮುತ್ತಯ್ಯ ಮುರಳೀಧರನ್ ಮಾತನಾಡಿದ್ದಾರೆ. ನಾನು ಈ ಸಮಾರಂಭಕ್ಕಾಗಿ ಕೊಲಂಬೊದಿಂದ ಡ್ರೈವ್ ಮಾಡಿಕೊಡು ಬರುತ್ತಿದ್ದೆ.ಆದರೆ ನಾನು 20 ನಿಮಿಷಗಳ ಕಾಲ ಲೇಟ್ ಆಗಿದ್ದೆ. ಯಾರೋ ನನಗೆ ಕರೆ ಮಾಡಿ ಸಮಾರಂಭ ಸ್ಥಳಕ್ಕೆ ಬರದಂತೆ ಹಿಂದಿರುಗುವಂತೆ ಸೂಚಿಸಿದರು. ಇದರಿಂದಾಗಿ ಅಂದು ನನ್ನ  ಪ್ರಾಣ ಉಳಿಯಿತು ಎನ್ನುವುದನ್ನು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: IND vs NZ: ಡಕೌಟ್‌ ಆದ ನಂತರವೂ ಶತಕ ಭಾರಿಸಿ ದಾಖಲೆ ಸೃಷ್ಟಿಸಿದ ಭಾರತ ತಂಡದ ಆಟಗಾರ..ಅಪರೂಪದ ಸಾಧನೆ ಮಾಡಿದ ಸರ್ಫರಾಜ್ ಖಾನ್!

ಅರ್ಧ ದಾರಿಯಿಂದ ಹಿಂದಿರುಗಿದ ಮುತ್ತಯ್ಯ ಮುರಳೀಧರನ್ ಮನೆ ತಲುಪಿ ಟಿವಿ ನೋಡಿದಾಗ ಅವರಿಗೆ ಎಲ್ಲವೂ ಅರ್ಥವಾಯಿತು.20 ನಿಮಿಷ ತಡವಾಗಿ ಹೊರಟಿರುವುದೇ ಅವರ ಪ್ರಾಣ ಉಳಿಸಿತ್ತು. ಮುರಳಿ ಶ್ರೀಲಂಕಾ ಪರ 133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಹಾಗೂ 350 ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದಿದ್ದಾರೆ. 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News