ಅಂತಿಮ ಕ್ಷಣದಲ್ಲಿ ವಿಶ್ವಕಪ್’ನಿಂದ ಟೀಂ ಇಂಡಿಯಾದ 6 ಸ್ಟಾರ್ ಪ್ಲೇಯರ್ಸ್ ಔಟ್! ಬದಲಿಗೆ ಈ ಆಟಗಾರರಿಗೆ ಸ್ಥಾನ..
Players Dropped From World Cup India Team: ಟೀಂ ಇಂಡಿಯಾ ತಂಡ ಪ್ರಕಟವಾಗುವ ಸಮಯದಲ್ಲಿ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು. ಆ ಆಟಗಾರರು ವರ್ಷಪೂರ್ತಿ ಭಾರತದ ಗೆಲುವಿಗೆ ಶ್ರಮ ವಹಿಸಿ, ಮಿಂಚಿನ ಪ್ರದರ್ಶನ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
World Cup Team India Squad: ಅಕ್ಟೋಬರ್ 5 ರಿಂದ ಕ್ರಿಕೆಟ್ ಕುಂಭಮೇಳ ಪ್ರಾರಂಭವಾಗಲಿದೆ. ವಿಶ್ವ ಟೂರ್ನಿಗೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದ್ದು, ಭಾರತ ಆತಿಥ್ಯ ವಹಿಸಿದೆ. ಈ ಬಾರಿ ಹೇಗಾದರೂ ಟ್ರೋಫಿ ಗೆದ್ದು, ಟೀಂ ಇಂಡಿಯಾದ ಬಹುವರುಷಗಳ ಕನಸನ್ನು ನನಸು ಮಾಡಲು ರೋಹಿತ್ ಪಡೆ ಕಾತುರದಿಂದ ಕಾಯುತ್ತಿದೆ.
ಮತ್ತೊಂದೆಡೆ ಟೀಂ ಇಂಡಿಯಾ ತಂಡ ಪ್ರಕಟವಾಗುವ ಸಮಯದಲ್ಲಿ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು. ಆ ಆಟಗಾರರು ವರ್ಷಪೂರ್ತಿ ಭಾರತದ ಗೆಲುವಿಗೆ ಶ್ರಮ ವಹಿಸಿ, ಮಿಂಚಿನ ಪ್ರದರ್ಶನ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಅಂತಹ ಆರು ಆಟಗಾರರ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: ತಿಂಗಳ ಆರಂಭ ಈ ರಾಶಿಗೆ ತರಲಿದೆ ಸೌಭಾಗ್ಯ! ಇಂದಿನಿಂದ ವ್ಯಾಪಾರದಲ್ಲಿ ನಿರೀಕ್ಷೆ ಮೀರಿದ ಧನಲಾಭ
ಭುವನೇಶ್ವರ್ ಕುಮಾರ್: ಒಂದು ಕಾಲದಲ್ಲಿ ಟೀಂ ಇಂಡಿಯಾವನ್ನು ಸ್ವಂತ ಬಲದಿಂದ ಗೆಲ್ಲಿಸಿಕೊಡುವ ಸಾಮಾರ್ಥ್ಯ ಹೊಂದಿದ್ದ ಭುವನೇಶ್ವರ್ ಕುಮಾರ್ ಈ ಬಾರಿಯ ವಿಶ್ವಕಪ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದಲ್ಲಿ ಭದ್ರ ಬುನಾದಿ ಹಾಕಿದ್ದೇ ತಡ, ಭುವಿಯ ಸ್ಥಾನಕ್ಕೆ ಕುತ್ತು ತಂದಿದೆ.
ಯುಜ್ವೇಂದ್ರ ಚಹಾಲ್: ಭಾರತದ ಪ್ರಭಾವಿ ಸ್ಪಿನ್ನರ್’ಗಳಲ್ಲಿ ಒಬ್ಬರಾದ ಯುಜ್ವೇಂದ್ರ ಚಹಾಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಬಗ್ಗೆ ಅನೇಕ ದಿಗ್ಗಜರು ಸೇರಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಸಂಜು ಸ್ಯಾಮ್ಸನ್: ಸಂಜು ಸ್ಯಾಮ್ಸನ್’ಗೆ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಿಮ ಕ್ಷಣದಲ್ಲಿ ಕೆ ಎಲ್ ರಾಹುಲ್ ಭರ್ಜರಿ ಕಂಬ್ಯಾಕ್ ಮಾಡಿದ ಕಾರಣ ಅವರಿಗೆ ಸ್ಥಾನ ಲಭಿಸಿತು.
ಶಿಖರ್ ಧವನ್: ಟೀಂ ಇಂಡಿಯಾದ ದಿಗ್ಗಜ ಆರಂಭಿಕ ಬ್ಯಾಟ್ಸ್’ಮನ್, ದಾಖಲೆಗಳ ವೀರ ಶಿಖರ್ ಧವನ್ ಕಳೆದ ಕೆಲ ಸಮಯದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಜೊತೆಗೆ ಈ ಬಾರಿಯ ವಿಶ್ವಕಪ್ ತಂಡದಿಂದ ಅವಕಾಶ ವಂಚಿತರಾಗಿದ್ದಾರೆ.
ರಿಷಬ್ ಪಂತ್: ಕಾರು ಅಪಘಾತದಿಂದ ಗಾಯಗೊಂಡು, ಇದೀಗ ಚೇತರಿಸಿಕೊಳ್ಳುತ್ತಿರುವ ರಿಷಬ್ ಪಂತ್ ಕೂಡ ವಿಶ್ವಕಪ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 2024ರವರೆಗೆ ಈ ರಾಶಿಯವರದ್ದು ರಾಜರಂತಹ ಜೀವನ! ಸಂಪತ್ತಿನ ಸುರಿಮಳೆ, ದಾರಿದ್ರ್ಯ ದೂರವಾಗಿಸಿ ಅಕ್ಷಯ ಧನವನ್ನೇ ಸುರಿಸಲಿದ್ದಾನೆ ಶನಿ
ಅಕ್ಷರ್ ಪಟೇಲ್: ಏಷ್ಯಾ ಕಪ್ 2023ರ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದ ಅಕ್ಷರ್ ಪಟೇಲ್, ವಿಶ್ವಕಪ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನು ಮೊದಲ ಬಾರಿ ಬಿಡುಗಡೆಗೊಂಡಿದ್ದ ತಂಡದಲ್ಲಿ ಅಕ್ಷರ್ ಸ್ಥಾನ ಪಡೆದಿದ್ದರು. ಆದರೆ ಆ ಬಳಿಕ ಹೊರಡಿಸಿದ ಪರಿಷ್ಕೃತ ತಂಡದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಆರ್ ಅಶ್ವಿನ್ ಸೇರಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ