South Africa T20 league: ಐಪಿಎಲ್-2023ರ ಮುಂದಿನ ಋತುವಿಗಾಗಿ ಇತ್ತೀಚೆಗೆ ಮಿನಿ ಹರಾಜು ನಡೆಸಲಾಯಿತು. ಈ ಮಿನಿ ಹರಾಜಿನಲ್ಲಿ 23 ವರ್ಷದ ಇಂಗ್ಲೆಂಡ್ ಬ್ಯಾಟ್ಸ್‌ಮನ್ 13 ಕೋಟಿ 25 ಲಕ್ಷ ರೂ.ಗೆ ಮಾರಾಟವಾಗಿದ್ದರು. ಈ ಆಟಗಾರನನ್ನು ಈಗ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಪ್ರಮುಖ T20 ಲೀಗ್‌ನಿಂದ ಹಿಂತೆಗೆದುಕೊಂಡಿದೆ. ಈ ಆಟಗಾರ ಬೇರೆ ಯಾರೂ ಅಲ್ಲ, ಡ್ಯಾಶಿಂಗ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್. ಅವರನ್ನು 13 ಕೋಟಿ 25 ಲಕ್ಷ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Women T20 World Cup 2023: ಟಿ20 ವಿಶ್ವಕಪ್ಗೆ ಭಾರತ ಮಹಿಳಾ ತಂಡ ಪ್ರಕಟ: ಈ ಸ್ಟಾರ್ ಆಟಗಾರ್ತಿ ಕಂಬ್ಯಾಕ್


ಕ್ರಿಕ್‌ಬಜ್ ವರದಿಯ ಪ್ರಕಾರ, ಹ್ಯಾರಿ ಬ್ರೂಕ್ ಅವರನ್ನು ಮುಂಬರುವ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಿಂದ ಇಂಗ್ಲೆಂಡ್ ಬೋರ್ಡ್ ಹಿಂತೆಗೆದುಕೊಂಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರ (ಡಿಸೆಂಬರ್ 28) ತಮ್ಮ ಫ್ರಾಂಚೈಸ್ ಜೋಬರ್ಗ್ ಸೂಪರ್ ಕಿಂಗ್ಸ್ ಮತ್ತು ಸಂಘಟಕರಾದ ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಗೆ ನಿರ್ಧಾರವನ್ನು ತಿಳಿಸಿದೆ. ಹ್ಯಾರಿ ಬ್ರೂಕ್ ಅವರ ಕೆಲಸದ ಹೊರೆ ಕಡಿಮೆ ಮಾಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.


ಚೆನ್ನೈ ಸೂಪರ್ ಕಿಂಗ್ಸ್‌ನ ಸಿಇಒ ಕಾಸಿ ವಿಶ್ವನಾಥನ್, 'ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಾರೆ, ಆದ್ದರಿಂದ ಇಸಿಬಿ ಅವರಿಗೆ SA20 ಆಡಲು ಅವಕಾಶ ನೀಡುವುದು ತುಂಬಾ ಅಪಾಯಕಾರಿ ಎಂದು ಭಾವಿಸುತ್ತದೆ. ಕಳೆದ ರಾತ್ರಿ ನಾವು ಇಸಿಬಿಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ನಾವು ಬದಲಿ ಹುಡುಕಬೇಕು” ಎಂದು ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಕೇಪ್ ಟೌನ್‌ನಲ್ಲಿ ನಡೆದ ಲೀಗ್ ಹರಾಜಿನಲ್ಲಿ ಮಾಜಿ ಇಂಗ್ಲೆಂಡ್ ಅಂಡರ್-19 ನಾಯಕ ಹ್ಯಾರಿ ಬ್ರೂಕ್ ಅವರನ್ನು ಫ್ರಾಂಚೈಸಿ 21 ಲಕ್ಷ ರ್ಯಾಂಡ್‌ಗೆ ಖರೀದಿಸಿದೆ. ಅದೇ ಸಮಯದಲ್ಲಿ, ECB ಯ ನಿರ್ಧಾರವು IPL 2023 ಗಾಗಿ ಆಟಗಾರರ ಲಭ್ಯತೆಯ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ.


ಇದನ್ನೂ ಓದಿ:  Team India Cricketers: ಟೀಂ ಇಂಡಿಯಾ ರಾಜಕೀಯಕ್ಕೆ ಬಲಿಯಾದ ಈ 3 ಆಟಗಾರರು: ‘ಪಂದ್ಯ ಶ್ರೇಷ್ಠ’ವಾದರೂ ಸಹ ಸಿಗದ ಅವಕಾಶ!!


ಬಲಗೈ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಇದುವರೆಗೆ ನಾಲ್ಕು ಟೆಸ್ಟ್, 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಮೂರು ಶತಕ ಮತ್ತು 1 ಅರ್ಧಶತಕದ ಸಹಾಯದಿಂದ ಟೆಸ್ಟ್‌ನಲ್ಲಿ 480 ರನ್ ಗಳಿಸಿದ್ದಾರೆ. ಅವರು ಪ್ರಸ್ತುತ ಟೆಸ್ಟ್ ಮಾದರಿಯಲ್ಲಿಯೇ 80 ಸರಾಸರಿ ಹೊಂದಿದ್ದಾರೆ. ಬ್ರೂಕ್ ಅರ್ಧಶತಕದ ಸಹಾಯದಿಂದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 372 ರನ್ ಗಳಿಸಿದ್ದಾರೆ. ಅವರು ತಮ್ಮ ಒಟ್ಟಾರೆ ಟಿ20 ವೃತ್ತಿಜೀವನದಲ್ಲಿ 99 ಪಂದ್ಯಗಳಲ್ಲಿ 2432 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 3547 ರನ್ ಗಳಿಸಿದ್ದಲ್ಲದೆ, 8 ವಿಕೆಟ್ ಪಡೆದಿದ್ದಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.