Women T20 World Cup 2023: ಟಿ20 ವಿಶ್ವಕಪ್ಗೆ ಭಾರತ ಮಹಿಳಾ ತಂಡ ಪ್ರಕಟ: ಈ ಸ್ಟಾರ್ ಆಟಗಾರ್ತಿ ಕಂಬ್ಯಾಕ್

India Squad for Women T20 World Cup 2023: ಇನ್ನು ಬಹು ಸಮಯದಿಂದ ಕಡೆಗಣನೆಗೆ ಗುರಿಯಾಗಿದ್ದ ಅನುಭವಿ ವೇಗದ ಬೌಲರ್‌ ಶಿಖಾ ಪಾಂಡೆ ಕೂಡ ಈ ಟೂರ್ನಿಯ ಮೂಲಕ ಕಂ ಬ್ಯಾಂಕ್ ಮಾಡುತ್ತಿದ್ದಾರೆ. ಇವರ ಜೊತೆಗೆ 2022ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಯುವ ಬ್ಯಾಟರ್‌ ಜೆಮಿಮಾ ರೊಡ್ರಿಗಸ್‌ ಕೂಡ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Written by - Bhavishya Shetty | Last Updated : Dec 29, 2022, 12:45 PM IST
    • ಟಿ20 ವಿಶ್ವಕಪ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ
    • ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ತ್ರಿಕೋನ ಸರಣಿಗೂ ಭಾರತ ತಂಡವನ್ನು ಬುಧವಾರ ಪ್ರಕಟ ಮಾಡಲಾಗಿದೆ
    • ಹರ್ಮನ್‌ಪ್ರೀತ್ ಕೌರ್ ಭಾರತ ಮಹಿಳಾ ತಂಡದ ನಾಯಕತ್ವ ವಹಿಸಲಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ
Women T20 World Cup 2023: ಟಿ20 ವಿಶ್ವಕಪ್ಗೆ ಭಾರತ ಮಹಿಳಾ ತಂಡ ಪ್ರಕಟ: ಈ ಸ್ಟಾರ್ ಆಟಗಾರ್ತಿ ಕಂಬ್ಯಾಕ್ title=
Women’s T20 World Cup

India Squad for Women T20 World Cup 2023: ಫೆಬ್ರವರಿ 10 ರಿಂದ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ತ್ರಿಕೋನ ಸರಣಿಗೂ ಭಾರತ ತಂಡವನ್ನು ಬುಧವಾರ ಪ್ರಕಟ ಮಾಡಲಾಗಿದೆ. ತ್ರಿಕೋನ ಸರಣಿ ಮತ್ತು 2023ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತ ಮಹಿಳಾ ತಂಡದ ನಾಯಕತ್ವ ವಹಿಸಲಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ.

ಇದನ್ನೂ ಓದಿ: India vs Sri Lanka: ODI ತಂಡಕ್ಕೆ ಈ ಆಟಗಾರನನ್ನು ಆಯ್ಕೆ ಮಾಡಿ ಪ್ರಮಾದಗೈದ ಸಮಿತಿ: ಟೀಂ ಇಂಡಿಯಾಗೆ ಕಂಟಕ ಗ್ಯಾರಂಟಿ!!

ಇನ್ನು ಬಹು ಸಮಯದಿಂದ ಕಡೆಗಣನೆಗೆ ಗುರಿಯಾಗಿದ್ದ ಅನುಭವಿ ವೇಗದ ಬೌಲರ್‌ ಶಿಖಾ ಪಾಂಡೆ ಕೂಡ ಈ ಟೂರ್ನಿಯ ಮೂಲಕ ಕಂ ಬ್ಯಾಂಕ್ ಮಾಡುತ್ತಿದ್ದಾರೆ. ಇವರ ಜೊತೆಗೆ 2022ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಯುವ ಬ್ಯಾಟರ್‌ ಜೆಮಿಮಾ ರೊಡ್ರಿಗಸ್‌ ಕೂಡ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 10ರಿಂದ ಪ್ರಾರಂಭವಾಗಲಿದೆ. ಭಾರತ ಮಹಿಳಾ ತಂಡ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನವನ್ನು ಎದುರಿಸಲಿದೆ. ಫೆಬ್ರವರಿ 12ರಂದು ಇಂಡೋ- ಪಾಕ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದಾದ ಮೂರು ದಿನಗಳ ಬಳಿಕ ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಡಲಿದೆ. ಫೆಬ್ರವರಿ 18 ರಂದು ಇಂಗ್ಲೆಂಡ್ ವಿರುದ್ಧ,  ಫೆಬ್ರವರಿ 20 ರಂದು ಐರ್ಲೆಂಡ್ ವಿರುದ್ಧ ಕಾದಾಡಲಿದೆ.

ಸದ್ಯ ಭಾರತ ಮಹಿಳಾ ತಂಡವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್‌ನೊಂದಿಗೆ ಗುಂಪು 2ರಲ್ಲಿದೆ. ಗುಂಪು ಹಂತದ ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದ್ದು, ಅಲ್ಲಿ ಗೆದ್ದ ತಂಡ ಫೈನಲ್ ಗೆ ಲಗ್ಗೆ ಇಡಲಿದೆ. ಫೆಬ್ರವರಿ 26ರಂದು ಫೈನಲ್ ಪಂದ್ಯ ನಡೆಯಲಿದೆ.

ಜನವರಿ 19, 2023 ರಿಂದ ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಟಿ20 ಸರಣಿ ಆರಂಭಗೊಳ್ಳಲಿದೆ.

ತ್ರಿಕೋನ ಸರಣಿ ಭಾರತ ತಂಡ:

ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದನಾ(ಉಪ ನಾಯಕಿ), ಯಾಸ್ತಿಕಾ ಭಾಟಿಯಾ, ಜೇಮಿಯ ರೋಡ್ರಿಗೆಸ್, ಹರ್ಲೀನ್ ದಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯಾ, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ರೇಣುಕಾ ಠಾಕೂರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಸುಶ್ಮಾ ವರ್ಮಾ, ಅಮನಜೋತ್ ಕೌರ್, ಪೂಜಾ ವಸ್ತ್ರಾರ್ಕರ್, ಶಬ್ಬನೇನಿ ಮೇಘನಾ, ಸ್ನೇಹ ರಾಣ, ಶಿಖಾ ಪಾಂಡೆ.

ಇದನ್ನೂ ಓದಿ: Ranji Trophy 2022-23: ಬಾಂಗ್ಲಾ ಪ್ರವಾಸದಲ್ಲಿ ಅವಕಾಶ ವಂಚಿತನಾದ ಈ ಆಟಗಾರ ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿಯೇ ಬಿಟ್ಟ!!

ಐಸಿಸಿ ಮಹಿಳಾ ಟಿ20 ವಿಶ್ವಕಪ್​ಗೆ ಭಾರತ ತಂಡ:

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್) ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News