ನವದೆಹಲಿ: ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್ ನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಮುಗಿದ ನಂತರ ಟಿ 20 ಐ ನಾಯಕತ್ವದಿಂದ ಕೆಳಗಿಳಿಯುವುದಾಗಿ ಭಾರತೀಯ ನಾಯಕ ವಿರಾಟ್ ಕೊಹ್ಲಿ ಗುರುವಾರ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2021 : ಮೊದಲ ಐಪಿಎಲ್ ಗೆಲ್ಲುವಿನತ್ತ ದಾಪುಗಾಲಿಡುತ್ತಿದೆ RCB 


ತಮ್ಮ ಕೆಲಸದ ಒತ್ತಡದ ಕಾರಣವೊಡ್ಡಿ ಕೊಹ್ಲಿ (Virat Kohli)  ನಾಯಕತ್ವದ ಸ್ಥಾನದಿಂದ ಇಳಿಯುವುದಾಗಿ ಹೇಳಿದ್ದಾರೆ.ಅಷ್ಟಕ್ಕೂ ಭಾರತದ ಟಿ20 ತಂಡದ ನಾಯಕನಾಗಿ ಕೊಹ್ಲಿ ಮಾಡಿದ ಸಾಧನೆ ಮಾತ್ರ ಅದ್ಬುತವಾಗಿದೆ.ಅವರು 2017 ರಲ್ಲಿ ಧೋನಿ ಅವರಿಂದ ಟಿ20 ತಂಡದ ನಾಯಕತ್ವವಹಿಸಿದ ನಂತರ  ಕೊಹ್ಲಿ 48.45 ರ ಸರಾಸರಿಯಲ್ಲಿ 1502 ರನ್ ಗಳಿಸಿದ್ದಾರೆ.ಇದರಲ್ಲಿ 12 ಅರ್ಧಶತಕಗಳು ಇವೆ.


ಇದನ್ನೂ ಓದಿ: ಇವರೇ Virat Kohli ನಂತರ ಟೀಂ ಇಂಡಿಯಾ ಟಿ 20 ಸಾರಥ್ಯ ವಹಿಸಲಿರುವ ಆಟಗಾರ


ಇನ್ನೂ ಒಟ್ಟು 45 ಪಂದ್ಯಗಳಲ್ಲಿ 27 ಗಳನ್ನು ಗೆದ್ದಿದ್ದಾರೆ, 14 ಪಂದ್ಯಗಳಲ್ಲಿ ಅವರು ಸೋಲನ್ನು ಅನುಭವಿಸಿದ್ದಾರೆ. ಎರಡು ಪಂದ್ಯಗಳು ಟೈ ಆಗಿದ್ದರೆ, ಎರಡು ಪಂದ್ಯಗಳಲ್ಲಿ ಫಲಿತಾಂಶಗಳು ಬಂದಿಲ್ಲ.


ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ, ಕೊಹ್ಲಿ ತನ್ನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನನ್ನು 2016 ರಲ್ಲಿ ರನ್ನರ್ಸ್ ಅಪ್ ಸ್ಥಾನದ ಆವರೆಗೆ ಮುನ್ನಡೆಸಿದ್ದಾರೆ.ಅದರಲ್ಲಿ ಅವರು ಒಟ್ಟು 132 ಪಂದ್ಯಗಳಲ್ಲಿ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ,65 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಫಲಿತಾಂಶವಿಲ್ಲ.


ಇದನ್ನೂ ಓದಿ: T20I World Cup: ವಿಶ್ವಕಪ್ ನಂತರ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯಲಿರುವ ವಿರಾಟ್ ಕೊಹ್ಲಿ


ಐಪಿಎಲ್ 2021 ರ  ಋತುವಿನಲ್ಲಿ ಆರ್‌ಸಿಬಿ ಸೆಪ್ಟೆಂಬರ್ 20 ರಂದು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್)  ತಂಡವನ್ನು ಅನ್ನು ಎದುರಿಸಲಿದೆ.