ಇವರೇ Virat Kohli ನಂತರ ಟೀಂ ಇಂಡಿಯಾ ಟಿ 20 ಸಾರಥ್ಯ ವಹಿಸಲಿರುವ ಆಟಗಾರ

ವಿರಾಟ್ ಕೊಹ್ಲಿ ಟಿ 20 ತಂಡದ ನಾಯಕತ್ವ ತೊರೆದರೆ, ಅವರ ಸ್ನೇಹಿತ ರೋಹಿತ್ ಶರ್ಮಾ ಈ ಹುದ್ದೆಗೆ ದೊಡ್ಡ ಸ್ಪರ್ಧಿಯಾಗಲಿದ್ದಾರೆ. ಕೊಹ್ಲಿ ನಂತರ ರೋಹಿತ್ ತಂಡದ ದಿಗ್ಗಜ ಆಟಗಾರ.

Written by - Ranjitha R K | Last Updated : Sep 16, 2021, 07:42 PM IST
  • ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಕೊಹ್ಲಿ
  • ಟಿ 20 ನಾಯಕನ ಸ್ಥಾನವನ್ನು ತೊರೆಯುವುದಾಗಿ ಘೋಷಿಸಿದ ವಿರಾಟ್ ಕೊಹ್ಲಿ
  • ಯಾರಾಗುತ್ತಾರೆ ಮುಂದಿನ ನಾಯಕ
ಇವರೇ Virat Kohli ನಂತರ ಟೀಂ ಇಂಡಿಯಾ ಟಿ 20 ಸಾರಥ್ಯ ವಹಿಸಲಿರುವ ಆಟಗಾರ

ನವದೆಹಲಿ : 2021 ರ ಟಿ 20 ವಿಶ್ವಕಪ್‌ಗೂ (T20 World Cup) ಮುನ್ನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಶ್ವಕಪ್ ಮುಗಿದ ತಕ್ಷಣ ಟಿ 20 ತಂಡದ ನಾಯಕತ್ವವನ್ನು ತೊರೆಯುವುದಾಗಿ ಕೊಹ್ಲಿ (Viral Kohli) ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದಾರೆ. ಇದಾದ ನಂತರ ಟೀಂ ಇಂಡಿಯಾದ (Team India) ಮುಂದಿನ ನಾಯಕ ಯಾರು ಎನ್ನುವ ನಿರ್ಧಾರವನ್ನು ಮಂಡಳಿ ತೆಗೆದುಕೊಳ್ಳಬೇಕಾಗುತ್ತದೆ. 

ಹೊಸ ಸಾರಥಿಯಾಗಲಿದ್ದಾರಾ ಈ ಆಟಗಾರ? 
ವಿರಾಟ್ ಕೊಹ್ಲಿ (Virat Kohli) ಟಿ 20 ತಂಡದ ನಾಯಕತ್ವ ತೊರೆದರೆ, ಅವರ ಸ್ನೇಹಿತ ರೋಹಿತ್ ಶರ್ಮಾ (Rohit Sharma) ಈ ಹುದ್ದೆಗೆ ದೊಡ್ಡ ಸ್ಪರ್ಧಿಯಾಗಲಿದ್ದಾರೆ. ಕೊಹ್ಲಿ ನಂತರ ರೋಹಿತ್ ತಂಡದ ದಿಗ್ಗಜ ಆಟಗಾರ. ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ (Team India) ಇದುವರೆಗೂ ಯಾವುದೇ ಸರಣಿ ಅಥವಾ ಟೂರ್ನಿಯಲ್ಲಿ ಸೋಲು ಕಂಡಿಲ್ಲ. ಹಾಗಾಗಿ  ರೋಹಿತ್ ಶರ್ಮ ಮುಂದಿನ ನಾಯಕನಾಗಬಹುದು ಎನ್ನಲಾಗಿದೆ. 

ಇದನ್ನೂ ಓದಿ : T20I World Cup: ವಿಶ್ವಕಪ್ ನಂತರ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯಲಿರುವ ವಿರಾಟ್ ಕೊಹ್ಲಿ

ಮುಂದಿನ ವಿಶ್ವಕಪ್‌ ಗೆ ನಾಯಕ :  
ಈ ವರ್ಷ ಯುಎಇಯಲ್ಲಿ (UAE) ನಡೆಯಲಿರುವ ಟಿ 20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ (T20 World Cup) ತಂಡವನ್ನು ಮುನ್ನಡೆಸುವ ಜವಾಬ್ದಾರಿ ರೋಹಿತ್ ಶರ್ಮಾಗೆ ಸಿಗಬಹುದು ಎನ್ನಲಾಗಿದೆ. 

ದೊಡ್ಡ ಮಟ್ಟದ ದಾಖಲೆ :
ಕೊಹ್ಲಿ ನಂತರ, ಈಗ ಟೀಂ ಇಂಡಿಯಾದ ಹೊಸ ನಾಯಕ ರೋಹಿತ್ ಶರ್ಮಾ ಆಗಬಹುದು. ಕೊಹ್ಲಿಯ ನಾಯಕತ್ವದ ಸಮಯದಲ್ಲೇ , ಪ್ರತೀ ಬಾರಿಯೂ ರೋಹಿತ್ ಶರ್ಮಾ ಅವರನ್ನು ತಂಡದ ಹೊಸ ನಾಯಕನನ್ನಾಗಿ ಮಾಡಬೇಕೆಂಬ ಮಾತು ಕೇಳಿ ಬರುತ್ತಿತ್ತು.  ಐಪಿಎಲ್‌ನಂತಹ (IPL) ದೊಡ್ಡ ಲೀಗ್‌ಗಳಲ್ಲಿ ರೋಹಿತ್ ನಾಯಕತ್ವವು ಅತ್ಯುತ್ತಮವಾಗಿತ್ತು.  ರೋಹಿತ್  ಶರ್ಮಾ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ (Mumbai Indians) 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 

ಇದನ್ನೂ ಓದಿ : IPL 2021 : ಮೊದಲ ಐಪಿಎಲ್ ಗೆಲ್ಲುವಿನತ್ತ ದಾಪುಗಾಲಿಡುತ್ತಿದೆ RCB 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News