IPL: ಮುಂದಿನ ವರ್ಷ ಆರ್‌ಸಿಬಿಗೆ ʼಎಬಿಡಿʼ ಬಲ!
`ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಮುಂದಿನ ವರ್ಷ ಆರ್‌ಸಿಬಿ ತಂಡಕ್ಕೆ ಖಂಡಿತವಾಗಿಯೂ ಮರಳುತ್ತೇನೆ` ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಸ್ಪಷ್ಟನೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಗುರುತಿಸಿಕೊಂಡಿದ್ದ ಎಬಿಡಿ ಕಳೆದ ವರ್ಷ ಎಲ್ಲಾ ಪ್ರಕಾರದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಆರ್‌ಸಿಬಿಗೆ ಹಿಂತಿರುಗುವುದಾಗಿ ಹೇಳಿಕೆ ನೀಡಿದ್ದು, ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹದಿನಾರನೇ ಆವೃತ್ತಿಯಲ್ಲಿ ಎಬಿ ಡಿ ವಿಲಿಯರ್ಸ್ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಲಿದ್ದು, ಈ ಸುದ್ದಿ ಆರ್‌ಸಿಬಿ ಅಭಿಮಾನಿಗಳಿಗೆ ಸಂತಸ ನೀಡಿದೆ. ಈ ಬಾರಿ ಐಪಿಎಲ್‌ನಲ್ಲಿ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತಿ ಪಡೆದ ಎಬಿಡಿಯ ಆಟ ನೋಡಲು ಸಾಧ್ಯವಾಗಿರಲಿಲ್ಲ.
"ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಮುಂದಿನ ವರ್ಷ ಆರ್‌ಸಿಬಿ ತಂಡಕ್ಕೆ ಖಂಡಿತವಾಗಿಯೂ ಮರಳುತ್ತೇನೆ" ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಸ್ಪಷ್ಟನೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಗುರುತಿಸಿಕೊಂಡಿದ್ದ ಎಬಿಡಿ ಕಳೆದ ವರ್ಷ ಎಲ್ಲಾ ಪ್ರಕಾರದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಆರ್‌ಸಿಬಿಗೆ ಹಿಂತಿರುಗುವುದಾಗಿ ಹೇಳಿಕೆ ನೀಡಿದ್ದು, ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.
ಇದನ್ನು ಓದಿ: ಕೊಹ್ಲಿಯ ಬ್ಯಾಟಿಂಗ್‌ನಲ್ಲಿ ಹರಿಯಿತು ಹಳೇ ಮಿಂಚು, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ 'ಶ್ರೇಷ್ಠ ದಾಖಲೆ'
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿರುವ ಎಬಿಡಿ ವಿಲಿಯರ್ಸ್ ಎಂದರೆ ಆರ್‌ಸಿಬಿ ಅಭಿಮಾನಿಗಳಿಗೆ ಪಂಚಪ್ರಾಣ. ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತಂಡಕ್ಕಾಗಿ ಆಡಿದ್ದ ಇಬ್ಬರು ಘಟಾನುಘಟಿ ಆಟಗಾರರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ಗೆ ಮರೆಯಲಾಗದಂತಹ ಗೌರವವನ್ನು ನೀಡಿದ್ದರು. ಲೆಜೆಂಡರಿ ಬ್ಯಾಟ್ಸ್‌ಮನ್ ಎಂದು ಖ್ಯಾತಿ ಪಡೆದ ಎಬಿ ಡಿವಿಲಿಯರ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ʼಹಾಲ್ ಆಫ್ ಫೇಮ್ʼ ಗೌರವವನ್ನ ನೀಡಿತ್ತು.
ಇದನ್ನು ಓದಿ: IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!
ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡಿ, ಎರಡನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. 157 ಪಂದ್ಯಗಳಲ್ಲಿ 41.10 ಸರಾಸರಿ, 4,522 ರನ್, 2 ಶತಕ, 37 ಅರ್ಧಶತಕಗಳನ್ನು ಒಳಗೊಂಡಂತೆ 158.33 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.