Suresh Raina Comment On CSK Post : ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರು ಮಾರಾಟವಾಗದೆ ಉಳಿದ ಆಟಗಾರ. ಸಿಎಸ್‌ಕೆ ಕೂಡ ಸುರೇಶ್ ರೈನಾ ಅವರನ್ನು ಮರಳಿ ಖರೀದಿಸುವ ಮನಸ್ಸು ಕೂಡ ಮಾಡಲಿಲ್ಲ. ಐಪಿಎಲ್ 2022 ರಲ್ಲಿ ಚೆನ್ನೈ ತಂಡವು ಪಂದ್ಯವನ್ನು ಸೋತಾಗ, ಅಭಿಮಾನಿಗಳು ರೈನಾ ಅವರನ್ನು ತುಂಬಾ ನೆನಪಿಸಿಕೊಳ್ಳುತ್ತಿದ್ದಾರೆ. ಮಿಸ್ಟರ್ ಐಪಿಎಲ್ ಎಂದು ಕರೆಯಲ್ಪಡುವ ರೈನಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕಾಮೆಂಟ್ ಒಂದು ತುಂಬಾ ವೈರಲ್ ಆಗಿದೆ. ಈ ಕಾಮೆಂಟ್‌ನ ವಿಶೇಷತೆ ಏನು? ಯಾಕೆ ವೈರಲ್ ಆಗಿದೆ ಇಲ್ಲಿದೆ ನೋಡಿ..
ಸುರೇಶ್ ರೈನಾ ವೈರಲ್ ಕಾಮೆಂಟ್
ಸುರೇಶ್ ರೈನಾ ಐಪಿಎಲ್ 2022 ಸೀಸನ್ ನಲ್ಲಿ ಹಿಂದಿ ಭಾಷೆ ಕಾಮೆಂಟರಿಯರ್ ಆಗಿ ಎಂಟ್ರಿ ನೀಡಿದ್ದಾರೆ. ತಮ್ಮ ಕಾಮೆಂಟರಿ ವೇಳೆಯೂ ರೈನಾ ಚೆನ್ನೈ ತಂಡವನ್ನು ತೀವ್ರವಾಗಿ ಹೊಗಳಿದ್ದಾರೆ. ಇತ್ತೀಚೆಗಷ್ಟೇ ಸಿಎಸ್‌ಕೆ ಇನ್‌ಸ್ಟಾಗ್ರಾಮ್ ಅಕೌಂಟ್ ನಲ್ಲಿ ಧೋನಿ ಬಗ್ಗೆ ವಿಶೇಷ ಪೋಸ್ಟ್ ಹಾಕಿತ್ತು. ಈ ಪೋಸ್ಟ್‌ಗೆ ತಂಡದ ಮಾಜಿ ಆಟಗಾರ ರೈನಾ ಕೂಡ ಕಾಮೆಂಟ್ ಮಾಡಿದ್ದಾರೆ. ಸಿಎಸ್‌ಕೆ ಪೋಸ್ಟ್‌ನಲ್ಲಿ, 'ಧೋನಿ ಮೈದಾನಕ್ಕೆ ಬಂದಾಗಲೆಲ್ಲಾ ಜನರು ಧೋನಿ-ಧೋನಿ ಎಂದು ಕೂಗುತ್ತಾರೆ ಮತ್ತು ಇದಕ್ಕಿಂತ ಉತ್ತಮವಾದದ್ದೇನೂ ಇಲ್ಲ' ಎಂದು ಬರೆದಿದ್ದಾರೆ. ಇದನ್ನು ಪೋಸ್ಟ್ ಮಾಡಿದ ನಂತರ ರೈನಾ ಕಾಮೆಂಟ್‌ನಲ್ಲಿ 'ಧೋನಿ ಇಲ್ಲದೆ ಸಿಎಸ್‌ಕೆ ಅನ್ನು ಕಲ್ಪಿಸಿಕೊಳ್ಳಿ' ಎಂದು ಬರೆದಿದ್ದಾರೆ. ಅವರನ್ನು ನೋಡಿದ ಈ ಕಾಮೆಂಟ್ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ : IPL 2022 : ಕೆಕೆಆರ್‌ಗೆ ಪ್ಲೇಆಫ್‌ನ ಲೆಕ್ಕಾಚಾರ ಗೊಂದಲಮಯ!
ರೈನಾ ಕಾಮೆಂಟ್ ಇಲ್ಲಿದೆ ನೋಡಿ
4 ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ
ಎಂಎಸ್ ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) 4 ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಧೋನಿ ಇಲ್ಲದ ಸಿಎಸ್‌ಕೆ ಬಗ್ಗೆ ಯಾವುದೇ ಅಭಿಮಾನಿ ಯೋಚಿಸುವುದು ಕಷ್ಟ. MS ಧೋನಿ 2008 ಐಪಿಎಲ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಭಾಗವಾಗಿದ್ದಾರೆ. ಎಂಎಸ್ ಧೋನಿ ಐಪಿಎಲ್‌ನಲ್ಲಿ ಒಟ್ಟು 233 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 39.30 ಸರಾಸರಿಯಲ್ಲಿ 4952 ರನ್ ಗಳಿಸಿದ್ದಾರೆ.
ರೈನಾ ಐಪಿಎಲ್ ವೃತ್ತಿಜೀವನ
ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಸುರೇಶ್ ರೈನಾ ಮೊದಲ ಋತುವಿನಿಂದಲೂ ಚೆನ್ನೈ (CSK) ತಂಡದಲ್ಲಿ ಆಡಿದ್ದಾರೆ. ಈ ನಡುವೆ ಈ ಆಟಗಾರ 2 ಸೀಸನ್‌ಗಳಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕರೂ ಆಗಿದ್ದಾರೆ. ರೈನಾ ತಮ್ಮ ವೃತ್ತಿಜೀವನದಲ್ಲಿ ಒಟ್ಟು 205 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 5528 ರನ್ ಗಳಿಸಿದ್ದಾರೆ. ರೈನಾ 1 ಶತಕದೊಂದಿಗೆ 39 ಅರ್ಧಶತಕಗಳನ್ನು ಆಡಿದ್ದಾರೆ. ಸಿಎಸ್‌ಕೆಯ ಎಲ್ಲಾ ಪ್ರಶಸ್ತಿ ವಿಜಯಗಳಲ್ಲಿ ರೈನಾ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ : ಎಬಿಡಿ-ಗೇಲ್‌ಗೆ ಆರ್‌ಸಿಬಿಯಿಂದ ಸಿಕ್ತು ʼಮರೆಯಲಾಗದ ಗೌರವʼ: ಭಾವುಕರಾದ ಆಟಗಾರರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.