Ricky Ponting Prediction: ಟೆಸ್ಟ್ ಕ್ರಿಕೆಟ್‌'ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 15921 ಟೆಸ್ಟ್ ರನ್‌ ಗಳಿಸಿದ್ದಾರೆ. ಇನ್ನು ಈ ವಿಶೇಷ ದಾಖಲೆಯನ್ನು ಮುರಿಯಬಲ್ಲ ಕ್ರಿಕೆಟಿಗ ಯಾರೆಂದು ರಿಕಿ ಪಾಂಟಿಂಗ್ ಹೆಸರಿಸಿದ್ದಾರೆ.


COMMERCIAL BREAK
SCROLL TO CONTINUE READING

ಟೆಸ್ಟ್ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಜೋ ರೂಟ್ ಮುರಿಯಬಹುದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.


ಇದನ್ನೂ ಓದಿ: ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ? ಸೇವಿಸಿದರೆ ಏನಾದರೂ ಸಮಸ್ಯೆಗಳಾಗುತ್ತಾ?


ಇಂಗ್ಲೆಂಡ್‌ʼನ ಇನ್ ಫಾರ್ಮ್ ಬ್ಯಾಟ್ಸ್‌ʼಮನ್ ಜೋ ರೂಟ್ ಟೆಸ್ಟ್ ಕ್ರಿಕೆಟ್‌ʼನಲ್ಲಿ 12000 ರನ್ ಗಡಿ ದಾಟಿದ ಏಳನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 143 ಟೆಸ್ಟ್‌ʼಗಳಲ್ಲಿ 12027 ರನ್ ಗಳಿಸಿದ್ದಾರೆ. ಸಚಿನ್ 200 ಟೆಸ್ಟ್‌ʼಗಳಲ್ಲಿ 15921 ರನ್ ಗಳಿಸಿದ್ದರು. ಪಾಂಟಿಂಗ್ 168 ಟೆಸ್ಟ್‌ʼಗಳಲ್ಲಿ 13378 ರನ್ ಗಳಿಸಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.


ಇನ್ನು ಐಸಿಸಿ ವಿಮರ್ಶೆಯಲ್ಲಿ ಮಾತನಾಡಿದ ಪಾಂಟಿಂಗ್, "ರೂಟ್ ಈ ದಾಖಲೆಯನ್ನು ಮುರಿಯಬಹುದು. 33 ವರ್ಷ ವಯಸ್ಸಿನ ಅವರು ಕೇವಲ 3000 ರನ್‌ʼಗಳ ಹಿಂದೆ ಇದ್ದಾರೆ.  ಮುಂದೆ ಎಷ್ಟು ಟೆಸ್ಟ್ ಆಡುತ್ತಾರೆ ನೋಡೋಣ. ವರ್ಷಕ್ಕೆ 10 ರಿಂದ 14 ಟೆಸ್ಟ್‌ʼಗಳನ್ನು ಆಡಿದರೆ, ಪ್ರತಿ ವರ್ಷ 800 ರಿಂದ 1000 ರನ್ ಗಳಿಸಿದರೆ,  ಮೂರು-ನಾಲ್ಕು ವರ್ಷಗಳಲ್ಲಿ ಆ ದಾಖಲೆ ತಲುಪಬಹುದು" ಎಂದಿದ್ದಾರೆ.


ಜೋ ರೂಟ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಈ ವರ್ಷ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 740 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: ವರಲಕ್ಷ್ಮೀ ವ್ರತದಂದೇ ಅಪರೂಪದ ರಾಜಯೋಗ: ಈ 5 ರಾಶಿಗೆ ಸಾಕ್ಷಾತ್‌ ಅಷ್ಟಲಕ್ಷ್ಮೀಯರೇ ಹೊತ್ತುತರುವರು ಅದೃಷ್ಟ, ಕೀರ್ತಿ, ಧನಸಂಪತ್ತು, ಸಮೃದ್ಧಿ!


ರೂಟ್ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ ಎರಡು ಶತಕಗಳೊಂದಿಗೆ 611 ರನ್ ಗಳಿಸಿದ್ದಾರೆ. ಈ ವರ್ಷ ಅವರ ಅತ್ಯುತ್ತಮ ಸ್ಕೋರ್ 122 (ಔಟಾಗದೆ). ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲೂ ರೂಟ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.