ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ? ಸೇವಿಸಿದರೆ ಏನಾದರೂ ಸಮಸ್ಯೆಗಳಾಗುತ್ತಾ?

Can diabetics drink Tender Coconut water: ಸಿಹಿ ಹಣ್ಣುಗಳು ಮತ್ತು ಇತರ ವಸ್ತುಗಳಿಂದ ದೂರವಿರಬೇಕು ಎಂದಿರುವಾಗ ಮಧುಮೇಹ ರೋಗಿಗಳು ಎಳನೀರನ್ನುಕುಡಿಯಬಹುದೇ? ಈ ಪ್ರಶ್ನೆ ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲ ವರದಿಯ ಪ್ರಕಾರ ಯಾವುದು ಸೂಕ್ತ ಎಂಬುದನ್ನು ತಿಳಿಯೋಣ.

Written by - Bhavishya Shetty | Last Updated : Aug 15, 2024, 09:13 PM IST
    • ಮಧುಮೇಹ ರೋಗಿಗಳು ಎಳನೀರನ್ನುಕುಡಿಯಬಹುದೇ?
    • ಈ ಪ್ರಶ್ನೆ ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಾಡುತ್ತವೆ
    • ಈ ಹಿನ್ನೆಲೆಯಲ್ಲಿ ಕೆಲ ವರದಿಯ ಪ್ರಕಾರ ಯಾವುದು ಸೂಕ್ತ ಎಂಬುದನ್ನು ತಿಳಿಯೋಣ.
ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ? ಸೇವಿಸಿದರೆ ಏನಾದರೂ ಸಮಸ್ಯೆಗಳಾಗುತ್ತಾ? title=
File Photo

Can diabetics drink coconut water: ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ಸಿಹಿ ಪದಾರ್ಥಗಳನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ಆರೋಗ್ಯ ತಜ್ಞರು ಮತ್ತು ವೈದ್ಯರು ಮಧುಮೇಹ ರೋಗಿಗಳಿಗೆ ಅತಿಯಾದ ಸಿಹಿ ಹಣ್ಣುಗಳು, ತಂಪು ಪಾನೀಯಗಳು ಮತ್ತು ಪ್ಯಾಕೆಟ್ ಜ್ಯೂಸ್‌ʼಗಳನ್ನು ಸೇವಿಸಬೇಡಿ ಎಂದು ಸಲಹೆ ನೀಡುತ್ತಾರೆ. ಏಕೆಂದರೆ ಈ ಎಲ್ಲಾ ವಸ್ತುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಪೆಟ್ರೋಲ್ ಅಥವಾ ಡೀಸೆಲ್? ವಿಮಾನ ಹಾರಾಟಕ್ಕೆ ಉಪಯೋಗಿಸುವ ಇಂಧನ ಯಾವುದು?

ಸಿಹಿ ಹಣ್ಣುಗಳು ಮತ್ತು ಇತರ ವಸ್ತುಗಳಿಂದ ದೂರವಿರಬೇಕು ಎಂದಿರುವಾಗ ಮಧುಮೇಹ ರೋಗಿಗಳು ಎಳನೀರನ್ನುಕುಡಿಯಬಹುದೇ? ಈ ಪ್ರಶ್ನೆ ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಕೆಲ ವರದಿಯ ಪ್ರಕಾರ ಯಾವುದು ಸೂಕ್ತ ಎಂಬುದನ್ನು ತಿಳಿಯೋಣ.

ವೆಬ್‌ಎಂಡಿ ವರದಿಯ ಪ್ರಕಾರ, ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಪ್ರೊಟೀನ್, ಎಲೆಕ್ಟ್ರೋಲೈಟ್ ಮತ್ತು ವಿಟಮಿನ್ ಸಿ ನಂತಹ ಅನೇಕ ಪ್ರಮುಖ ಪೋಷಕಾಂಶಗಳು ಎಳನೀರಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ವಿಶೇಷತೆಯೆಂದರೆ ಅದರಲ್ಲಿ ಶೂನ್ಯ ಕ್ಯಾಲೋರಿ ಅಂಶ ಇರುತ್ತದೆ. ರುಚಿ ಸಿಹಿಯಾಗಿದ್ದರೂ ಸಹ ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಆರಾಮವಾಗಿ ಎಳನೀರನ್ನು ಕುಡಿಯಬಹುದು.

ಇನ್ನು ಆರೋಗ್ಯ ತಜ್ಞರ ಪ್ರಕಾರ, ಎಳನೀರನ್ನು ನಿಯಮಿತವಾಗಿ ಕುಡಿಯುವುದು ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ನೀರಿನಲ್ಲಿ ಫ್ರಕ್ಟೋಸ್ ಕಂಡುಬರುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಫ್ರಕ್ಟೋಸ್‌ ಎಂಬುದು ನೈಸರ್ಗಿಕ ಸಕ್ಕರೆಗೆ ಸಮವಾಗಿರುತ್ತದೆ. ಇದು ನಿರ್ದಿಷ್ಟ ಪ್ರಮಾಣದಲ್ಲಿ ದೇಹಕ್ಕೆ ಹೋದರೆ,  ಮಧುಮೇಹ ರೋಗಿಗಳಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಎಳನೀರಿನ ಗ್ಲೈಸೆಮಿಕ್ ಸೂಚ್ಯಂಕವು ಕೇವಲ 3 ಆಗಿದೆ. ಇದು ಮಧುಮೇಹ ರೋಗಿಗಳಿಗೆ ಸೂಕ್ತವಾಗಿದೆ.

ದಿನಕ್ಕೆ ಎಷ್ಟು ಎಳನೀರು ಕುಡಿದರೆ ಒಳ್ಳೆಯದು?
ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಪ್ರತಿದಿನ ಕೇವಲ 1 ಲೋಟ ಅಂದರೆ 200 ಮಿಲಿ ಎಳನೀರನ್ನು ಕುಡಿಯಬೇಕು. ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರಲ್ಲೀ ಬೆಳಿಗ್ಗೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಜನರು ಎಳನೀರನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇನ್ನು ಎಳನೀರನ್ನು ಅತಿಯಾಗಿ ಸೇವಿಸಿದರೆ, ಅದು ಹೈಪರ್‌ ಕೆಲೆಮಿಯಾದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.

ಎಳನೀರನ್ನು ಕುಡಿಯುವ ಇತರ ಪ್ರಯೋಜನಗಳು:

  • ಪ್ರತಿದಿನ ತೆಂಗಿನ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು. ಏಕೆಂದರೆ ಇದರಲ್ಲಿ ಪೊಟ್ಯಾಸಿಯಮ್ ಹೇರಳವಾಗಿ ಕಂಡುಬರುತ್ತದೆ. ಪೊಟ್ಯಾಸಿಯಮ್ ಹೃದಯಕ್ಕೆ ತುಂಬಾ ಒಳ್ಳೆಯದು.
  • ಎಳನೀರಿನಲ್ಲಿರುವ ಪೋಷಕಾಂಶಗಳು ದೇಹವನ್ನು ಒಳಗಿನಿಂದ ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ದೇಹವನ್ನು ತೇವಾಂಶದಿಂದ ಇಡುವುದರಿಂದ ಮೊಡವೆಗಳು ಮತ್ತು ದದ್ದುಗಳಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
  • ಇದರಲ್ಲಿ ಫೈಬರ್ ಮತ್ತು ಮೆಗ್ನೀಸಿಯಮ್ ಕಂಡುಬರುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಜೀರ್ಣಕಾರಿ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಎಳನೀರು ಕುಡಿದರೆ ಒಳ್ಳೆಯದು.

ಇದನ್ನೂ ಓದಿ: ವರಲಕ್ಷ್ಮೀ ವ್ರತದಂದೇ ಅಪರೂಪದ ರಾಜಯೋಗ: ಈ 5 ರಾಶಿಗೆ ಸಾಕ್ಷಾತ್‌ ಅಷ್ಟಲಕ್ಷ್ಮೀಯರೇ ಹೊತ್ತುತರುವರು ಅದೃಷ್ಟ, ಕೀರ್ತಿ, ಧನಸಂಪತ್ತು, ಸಮೃದ್ಧಿ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News