ನವದೆಹಲಿ: ವಿಶ್ವಕಪ್ ಟೂರ್ನಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ  ಡೇವಿಡ್ ವಾರ್ನರ್ ಭರ್ಜರಿ 107 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ರಿಕಿ ಪಾಂಟಿಂಗ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇದೆ ಪ್ರದರ್ಶನವನ್ನು ಅವರು ಟೂರ್ನಿಯುದ್ದಕ್ಕೂ ಕಾಪಾಡಿಕೊಂಡಲ್ಲಿ ಅವರು ಈ ವಿಶ್ವಕಪ್ ಟೂರ್ನಿಯಲ್ಲಿ ಅಧಿಕ ರನ್ಗಳಿಸುವ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಲಿದ್ದಾರೆ ಎಂದು ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಅವರು ತಮ್ಮ ಶಾಟ್ ಗಳನ್ನೂ ಎದುರಿಸಿದ ರೀತಿ ಮತ್ತೂ ಇನಿಂಗ್ಸ್ ನ ಪೂರ್ವಾರ್ಧದಲ್ಲಿ ಅವರು ಪುಲ್ ಶಾಟ್ ಗಳನ್ನೂ ಆಡಿದ ಕ್ರಮ ನಿಜಕ್ಕೂ ಒಳ್ಳೆಯ ಬೆಳವಣಿಗೆ, ಇನ್ನು ಹೆಚ್ಚಿನ ತಮ್ಮ ಕೈಗವಸಿನಲ್ಲಿ ಹೆಚ್ಚಿನ ಉದಾರತೆಯನ್ನು ತೆಗೆದುಕೊಂಡು ಆಡಿದ್ದೆ ಆದಲ್ಲಿ ಅವರು  ಬಹುಶಃ ಅಗ್ರಗಣ್ಯ ಆಟಗಾರನಾಗುವ ಸಾಧ್ಯತೆ ಇದೆ, "ಎಂದು ರಿಕಿ ಪಾಂಟಿಂಗ್  ಕ್ರಿಕೆಟ್.ಕಾಂ ಗೆ ಹೇಳಿದ್ದಾರೆ.


ಡೇವಿಡ್ ವಾರ್ನರ್ ವರ್ಷ ಪೂರ್ತಿ ನಿಷೇಧದಿಂದ ಮರಳಿದ ನಂತರ ಪಾಕಿಸ್ತಾನದ ವಿರುದ್ದ ಶತಕಗಳಿಸುವ ಮೂಲಕ 41 ರನ್ ಗಳ ಅಂತರದಲ್ಲಿ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ವಾರ್ನರ್ ಈ ಪಂದ್ಯಾವಳಿಯಲ್ಲಿ 255 ರನ್ ಗಳಿಸಿದ್ದಾರೆ. ಇನ್ನೊಂದೆಡೆಗೆ ಅಗ್ರಸ್ತಾನದಲ್ಲಿರುವ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರು ಕೇವಲ ಐದು ರನ್ ಗಳ ಮುನ್ನಡೆ ಸಾಧಿಸಿದ್ದಾರೆ.