ನವದೆಹಲಿ: 2011 ರ ವಿಶ್ವಕಪ್ ಗೆಲುವಿನ ಕುರಿತಾಗಿ ಹಲವಾರು ವಿಶ್ಲೇಷಣೆಗಳು ಬಂದಿವೆ. ಹಲವರು ಈ ವಿಶ್ವಕಪ್ ಗೆಲುವಿಗೆ ಧೋನಿ ನಾಯಕತ್ವ ಎಂದು ಹೇಳಿದರೆ ಕೆಲವರು ಇದಕ್ಕೆ ಯುವರಾಜ್ ಸಿಂಗ್ ಅವರು ಸರಣಿಯುದ್ಧಕ್ಕೂ ತೋರಿದ ಆಲ್ ರೌಂಡ್ ಪ್ರದರ್ಶನವೇ ಕಾರಣವೆಂದು ಹೇಳುತ್ತಾರೆ.


COMMERCIAL BREAK
SCROLL TO CONTINUE READING

ಈಗ ಈ ವಿಶ್ವಕಪ್ ಗೆಲುವಿನ ಶ್ರೇಯವನ್ನು ಭಾರತದ ಆಟಗಾರ ಸುರೇಶ ರೈನಾ ಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಖಲೀಜ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ , ಭಾರತ ವಿಶ್ವಕಪ್  ಟ್ರೋಫಿಯನ್ನು ಗೆಲ್ಲಲು ಸಚಿನ್ ಅವರ ಶಾಂತ ಮನಸ್ಥಿತಿಯೇ ಕಾರಣ ಎಂದು ಹೇಳಿದ್ದಾರೆ.


ಸಚಿನ್ ಎಂದರೆ ಅದು ಶಾಂತ ಸ್ವಭಾವದ ಮನಸ್ಥಿತಿ, ಇದರಿಂದಾಗಿಯೇ ನಾವು ವಿಶ್ವಕಪ್ ಗೆಲ್ಲಲು ಸಾಧ್ಯವಾಗಿದೆ. 'ಸಚಿನ್ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನು ಕೂಡ ಶಾಂತತೆಯಿಂದ ವರ್ತಿಸಬಹುದು ಎನ್ನುವಂತೆ ಮಾಡಿದ ವ್ಯಕ್ತಿ, ಅಷ್ಟೇ ಅಲ್ಲದೆ ಅವರು ಒಂದು ರೀತಿಯಲ್ಲಿ ತಂಡದ ಎರಡನೇ ಕೋಚ್ ಆಗಿದ್ದರು' ಎಂದು ರೈನಾ ಹೇಳಿದರು.


ವಿಶೇಷವೆಂದರೆ ಸಚಿನ್ ಈ ವಿಶ್ವಕಪ್ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ 482 ರನ್ ಗಳಿಸಿ 53.55 ಸರಾಸರಿಯನ್ನು ಹೊಂದಿದ್ದರು,ಅವರ ಸ್ಟ್ರೈಕ್ 91.98 ರಷ್ಟು ಇತ್ತು, ಇನ್ನೊಂದೆಡೆಗೆ ಯುವರಾಜ್ ಸಿಂಗ್ ಅವರ ಆಲ್ ರೌಂಡ್ ಪ್ರದರ್ಶನವನ್ನು ನೀಡಿದ್ದರಿಂದಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.