“ಭವಿಷ್ಯದ ಬಗ್ಗೆ ಕಾಡುತ್ತಿದೆ ಭಯ…”: ಎಲ್ಲಾ ಮಾದರಿಯ ಕ್ರಿಕೆಟ್’ಗೆ 36ರ ಹರೆಯದ ಟೆಸ್ಟ್ ಸ್ಪೆಷಲಿಸ್ಟ್ ನಿವೃತ್ತಿ ಘೋಷಣೆ!
Dean Elgar Retirement: ರಾಪೋರ್ಟ್ ನ್ಯೂಸ್ ಪೇಪರ್` ವರದಿಯ ಪ್ರಕಾರ, ಎಲ್ಗರ್ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆ. ನಾಯಕತ್ವದಿಂದ ಕೆಳಗಿಳಿದ ನಂತರ ಅವರಲ್ಲಿ ಭವಿಷ್ಯದ ಬಗ್ಗೆ ಭಯ ಕಾಡುತ್ತಿದೆ. ಅಷ್ಟೇ ಅಲ್ಲದೆ, ಈ ವರ್ಷದ ಆರಂಭದಲ್ಲಿ ಎಲ್ಗರ್ ಅವರನ್ನು ನಾಯಕನ ಸ್ಥಾನದಿಂದ ತೆಗೆದುಹಾಕಲಾಯಿತು.
Dean Elgar Retirement: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ನಂತರ, ದಕ್ಷಿಣ ಆಫ್ರಿಕಾದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್’ಮನ್ ಡೀನ್ ಎಲ್ಗರ್ ನಿವೃತ್ತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ 36 ವರ್ಷದ ಎಲ್ಗರ್ ನಿವೃತ್ತಿಯಾಗಲು ಏಕೆ ನಿರ್ಧರಿಸಿದರು? ಎಂಬುದು ಈಗಿನ ಪ್ರಶ್ನೆ.
ಇದನ್ನೂ ಓದಿ: MP CM Oath Ceremony: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಪ್ರಮಾಣ ವಚನ
'ರಾಪೋರ್ಟ್ ನ್ಯೂಸ್ ಪೇಪರ್' ವರದಿಯ ಪ್ರಕಾರ, ಎಲ್ಗರ್ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆ. ನಾಯಕತ್ವದಿಂದ ಕೆಳಗಿಳಿದ ನಂತರ ಅವರಲ್ಲಿ ಭವಿಷ್ಯದ ಬಗ್ಗೆ ಭಯ ಕಾಡುತ್ತಿದೆ. ಅಷ್ಟೇ ಅಲ್ಲದೆ, ಈ ವರ್ಷದ ಆರಂಭದಲ್ಲಿ ಎಲ್ಗರ್ ಅವರನ್ನು ನಾಯಕನ ಸ್ಥಾನದಿಂದ ತೆಗೆದುಹಾಕಲಾಯಿತು. ಬದಲಿಗೆ ತೆಂಬಾ ಬವುಮಾ ಅವರಿಗೆ ನಾಯಕತ್ವವನ್ನು ನೀಡಲಾಯಿತು. ಈ ಕಾರಣದಿಂದ ನಿವೃತ್ತಿಯತ್ತ ಮುಖಮಾಡಿದ್ದಾರೆ ಎಂದು ವರದಿಯ ಮೂಲಗಳು ತಿಳಿಸಿವೆ.
ಎಲ್ಗರ್ ನಿವೃತ್ತಿಯ ನಂತರ, ದಕ್ಷಿಣ ಆಫ್ರಿಕಾ 'ಎ' ತಂಡದ ನಾಯಕ ಟೋನಿ ಬ್ರಾಂಡ್ ಅವರನ್ನು ಹಿರಿಯ ತಂಡಕ್ಕೆ ಸೇರಿಸಿಕೊಳ್ಳಬಹುದು. ಇದೀಗ ಎಲ್ಗರ್ ಭಾರತ ವಿರುದ್ಧದ ಸರಣಿಯ ನಂತರ ನಿಜವಾಗಿ ನಿವೃತ್ತಿ ಹೊಂದುತ್ತಾರೋ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ.
ಎಲ್ಗರ್ ಮುಖ್ಯವಾಗಿ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ ಆಡುತ್ತಾರೆ. ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 84 ಟೆಸ್ಟ್ ಮತ್ತು 8 ODI ಪಂದ್ಯಗಳನ್ನು ಆಡಿರುವ ಎಲ್ಗರ್, ಅಕ್ಟೋಬರ್ 2018 ರಲ್ಲಿ ಆಫ್ರಿಕಾ ಪರ ತಮ್ಮ ಕೊನೆಯ ODIವನ್ನು ಆಡಿದ್ದರು. ಆಫ್ರಿಕನ್ ತಂಡದಲ್ಲಿ ಎಲ್ಗರ್ ಅವರನ್ನು ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ: Ind vs SA: ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಸೋಲಿನ ಕಾರಣ ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್!
ಇದುವರೆಗೆ ಆಡಿರುವ 84 ಟೆಸ್ಟ್ ಪಂದ್ಯಗಳ 149 ಇನ್ನಿಂಗ್ಸ್’ಗಳಲ್ಲಿ 37.28 ಸರಾಸರಿಯಲ್ಲಿ 5164 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 13 ಶತಕಗಳು ಮತ್ತು 23 ಅರ್ಧ ಶತಕ ಬಾರಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 199 ರನ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ